ದಸರಾ ವೇಳೆ ನಾಡಬಂದೂಕಿನಲ್ಲಿ ಗುಂಡು ಹಾರಿಸಿದ್ದ ನಂಜೇಗೌಡ : FIR ದಾಖಲು
- ನಾಡ ಬಂದೂಕಿನಲ್ಲಿ ಶಾಸಕರು ಗುಂಡು ಹಾರಿಸಿದ್ದ ಪ್ರಕರಣ
- ಮಾಲೂರು ಶಾಸಕ ಕೆ.ವೈ ನಂಜೇಗೌಡ ಸೇರಿದಂತೆ ಮತ್ತಿಬ್ಬರ ವಿರುದ್ದ FIR ದಾಖಲು
ಕೋಲಾರ (ಆ.17): ನಾಡ ಬಂದೂಕಿನಲ್ಲಿ (Gun) ಶಾಸಕರು (MLA) ಗುಂಡು ಹಾರಿಸಿದ್ದ (Firing) ಪ್ರಕರಣಕ್ಕೆ ಮಾಲೂರು ಶಾಸಕ ಕೆ.ವೈ ನಂಜೇಗೌಡ (KY Nanjegowda) ಸೇರಿದಂತೆ ಮತ್ತಿಬ್ಬರ ವಿರುದ್ದ FIR ದಾಖಲು ಮಾಡಲಾಗಿದೆ.
ಪರವಾನಿಗೆ ಇಲ್ಲದ ನಾಡ ಬಂದೂಕಿನಲ್ಲಿ ಗುಂಡು ಹಾರಿಸಿದ್ದ ಆರೋಪದಡಿ ಶಾಸಕ ನಂಜೇಗೌಡ ವಿರುದ್ಧ FIR ದಾಖಲು ಮಾಡಲಾಗಿದೆ. ಮಾಲೂರು (Maluru) ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ದಸರಾ (Dasara) ವಿಜಯದಶಮಿಯಂದು (Vijayadashami) ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಶಾಸಕ..!
ವಿಜಯದಶಮಿ (Vijayadashami) ಹಬ್ಬದ ಪ್ರಯುಕ್ತ 4 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದ ನಂಜೇಗೌಡರ ನಡೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಇದೀಗ ಮಾಸ್ತಿ ಪೋಲೀಸ್ ಠಾಣೆಯಲ್ಲಿ (Police Station) ಸಶಸ್ತ್ರ ಮೀಸಲು ಕಾಯ್ದೆಯನ್ವಯ ಪ್ರಕರಣ (Case) ದಾಖಲು ಮಾಡಲಾಗಿದೆ.
ನಂಜೇಗೌಡ ಸಹೋದರ ಪರವಾನಿಗೆ ಹೊಂದಿದ್ದ ನಾಡ ಬಂದೂಕನ್ನು ಉಪಯೋಗಿಸಿಕೊಂಡು ಗುಂಡು ಹಾರಿಸಿದ್ದಾರೆ. ಘಟನಾ ಸಂಬಂಧ ಬಂದೂಕು ಬೇರೊಬ್ಬರಿಗೆ ನೀಡಿದ್ದಕ್ಕೆ ಈರಪ್ಪ ಹಾಗೂ ಸಂಬಂಧಿ ರಾಮಮೂರ್ತಿ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿದೆ.
ಕೊಮ್ಮನಹಳ್ಳಿಯಲ್ಲಿ ಸಂಪ್ರದಾಯ
ದಸರಾ ಹಬ್ಬದ ಪ್ರಯುಕ್ತ ಕೊಮ್ಮನಹಳ್ಳಿಯಲ್ಲಿ ಸಂಪ್ರದಾಯದಂತೆ ಶಾಸಕ ಕೆ.ವೈ.ನಂಜೇಗೌಡರು ಗ್ರಾಮದ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ನಂತರ ಬಿಲ್ಲು ಬಾಣ ಬಿಟ್ಟು ಬನ್ನಿ ಕಡಿದರು. ಇದಕ್ಕೂ ಮುನ್ನ ನಾಡಬಂದೂಕಿಗೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಗ್ರಾಮದ ಚನ್ನರಾಯಸ್ವಾಮಿ ಉತ್ಸವಕ್ಕೆ ಚಾಲನೆ ನೀಡಿದರು.
ಗ್ರಾಮದಲ್ಲಿ ಹಿಂದಿನಿಂದಲೂ ಈ ರೀತಿ ಬಂದೂಕು ಹಾರಿಸುವ ಸಂಪ್ರದಾಯ ನಡೆದು ಬಂದಿದೆ ಎಂದು ಶಾಸಕರು ತಿಳಿಸಿದ್ದಾರೆ.
ನಂತರ ಉತ್ಸವದಲ್ಲಿ ಪಾಲ್ಗೊಂಡು ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿ ಮನೆಯಿಂದ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.