Asianet Suvarna News Asianet Suvarna News

ಬೆಂಗಳೂರಲ್ಲಿ ಕೊರೋನಾಗೆ ಬಲಿ ಆದವರ ಸಂಖ್ಯೆ 4100ಕ್ಕೆ ಏರಿಕೆ

ಬುಧವಾರ ನಗರದಲ್ಲಿ 912 ಹೊಸ ಸೋಂಕು ಪ್ರಕರಣ ಪತ್ತೆ| ಈ ಮೂಲಕ ಸತತ ಮೂರು ದಿನ ಒಂದು ಸಾವಿರಕ್ಕಿಂತ ಕಡಿಮೆ ಸೋಂಕು ಪತ್ತೆ| ಒಟ್ಟು ಸೋಂಕಿತರ ಸಂಖ್ಯೆ 3,66,233 ತಲುಪಿದೆ| ಬುಧವಾರ 602 ಮಂದಿ ಗುಣಮುಖರಾಗಿ ಬಿಡುಗಡೆ| ಒಟ್ಟು ಸಂಖ್ಯೆ 3,43,771ಕ್ಕೆ ಏರಿಕೆ|

4100 Corona Patients Dies in Bengaluru So Far grg
Author
Bengaluru, First Published Nov 26, 2020, 7:17 AM IST

ಬೆಂಗಳೂರು(ನ.26): ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಕೊರೋನಾ ಸೋಂಕಿನಿಂದ 11 ಮಂದಿ ಮೃತಪಟ್ಟ ವರದಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 4,101ಕ್ಕೆ ಏರಿಕೆಯಾಗಿದೆ.

ಬುಧವಾರ ಮೃತಪಟ್ಟ 11 ಮಂದಿಯ ಪೈಕಿ 9 ಪುರುಷರು ಹಾಗೂ ಇಬ್ಬರು ಮಹಿಳೆಯರಾಗಿದ್ದಾರೆ. ಈವರೆಗೆ ನಗರದಲ್ಲಿ ಮೃತಪಟ್ಟ 4,101 ಮಂದಿಯ ಪೈಕಿ 2,671 ಪುರುಷರು, 1,427 ಮಹಿಳೆಯರು ಹಾಗೂ ಮೂವರು ಲೈಂಗಿಕ ಅಲ್ಪ ಸಂಖ್ಯಾತರಾಗಿದ್ದಾರೆ.

ಕೊರೋನಾ ವಾರಿಯರ್ಸ್‌ಗೆ ಇನ್ನೂ ಬಾರದ ಪ್ರೋತ್ಸಾಹಧನ

ಬುಧವಾರ ನಗರದಲ್ಲಿ 912 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸತತ ಮೂರು ದಿನ ಒಂದು ಸಾವಿರಕ್ಕಿಂತ ಕಡಿಮೆ ಸೋಂಕು ಪತ್ತೆಯಾದಂತಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 3,66,233 ತಲುಪಿದೆ. ಬುಧವಾರ 602 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಸಂಖ್ಯೆ 3,43,771ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇನ್ನೂ 18,360 ಸಕ್ರಿಯ ಪ್ರಕರಣಗಳಿದ್ದು, 202 ಮಂದಿ ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
 

Follow Us:
Download App:
  • android
  • ios