ಬೆಂಗಳೂರು(ನ.23): ರಾಜ್ಯದಲ್ಲಿ ಈವರೆಗೆ ಒಂದು ಕೋಟಿ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 41 ಲಕ್ಷ ಪರೀಕ್ಷೆಯನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾಡಲಾಗಿದೆ. ನಗರದಲ್ಲಿ ಮಾ.8ರಿಂದ ಜೂ.26 ರವರೆಗೆ ಕೇವಲ ಒಂದು ಲಕ್ಷ ಕೋವಿಡ್‌ ಪರೀಕ್ಷೆ ಮಾಡಲಾಗಿತ್ತು. 

ಸೆ.4ರ ವೇಳೆಗೆ 10 ಲಕ್ಷ ಕೋವಿಡ್‌ ಪರೀಕ್ಷೆ ಮಾಡಲಾಯಿತು. ಅ.8ಕ್ಕೆ 20 ಲಕ್ಷ, ಅ.30ಕ್ಕೆ 30 ಲಕ್ಷ ಹಾಗೂ ನ.20ಕ್ಕೆ 40 ಲಕ್ಷ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಅ.30 ರಿಂದ ನ.20ರವರೆಗೆ 10 ಲಕ್ಷ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಮೊದಲು ವಾರಿಯರ್ಸ್‌ಗೆ, ನಂತರ ಇತರರಿಗೆ ಕೊರೋನಾ ಲಸಿಕೆ

1039 ಹೊಸ ಕೇಸ್‌:

ಇನ್ನು ನಗರದಲ್ಲಿ ಭಾನುವಾರ 1,039 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, 669 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 10 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 3,63,665ಕ್ಕೆ ತಲುಪಿದ್ದರೆ, ಗುಣಮುಖರ ಸಂಖ್ಯೆ 3,41,424ಕ್ಕೆ ಏರಿಕೆಯಾಗಿದೆ. ಸದ್ಯ ನಗರದಲ್ಲಿ 18,172 ಸಕ್ರಿಯ ಪ್ರಕರಣಗಳಿದ್ದು, 237 ಮಂದಿ ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 10 ಜನರು ಸಾವನ್ನಪ್ಪಿದ್ದು, ಈವರೆಗೆ 4,068 ಜನರು ಮೃತಪಟ್ಟಿದ್ದಾರೆ.