ಬೆಂಗಳೂರು: ವೃದ್ಧನ ಫೋಟೊ ಹಿಡಿದು ರಸ್ತೆ ದಾಟುತ್ತಿದ್ದವ ಹಿಟ್ ಅಂಡ್ ರನ್‌ಗೆ ಬಲಿ
ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಹಿಟ್ ಅಂಡ್ ರನ್‌ಗೆ ಬಲಿಯಾದ ಘಟನೆ ನಗರದ ಮೇಖ್ರಿ ಸರ್ಕಲ್ ಸಮೀಪ ಖಾಸಗಿ ಹೋಟೆಲ್ ಮುಂಭಾಗ ನಡೆದ ಘಟನೆ.

ಬೆಂಗಳೂರು(ಜ.27): ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಹಿಟ್ ಅಂಡ್ ರನ್‌ಗೆ ಬಲಿಯಾದ ಘಟನೆ ನಗರದ ಮೇಖ್ರಿ ಸರ್ಕಲ್ ಸಮೀಪ ಖಾಸಗಿ ಹೋಟೆಲ್ ಮುಂಭಾಗ ನಿನ್ನೆ(ಗುರುವಾರ) ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಕಾರು ಗುದ್ದಿದ ರಭಸಕ್ಕೆ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೈನಲ್ಲಿ ವೃದ್ಧನ ಫೋಟೊ ಹಿಡಿದು ರಸ್ತೆ ದಾಟುತ್ತಿದ್ದ ವೇಳೆ ಕಾರು ಗುದ್ದಿದೆ. ಅಪಘಾತವಾದ ಕೂಡಲೇ ಅಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲು ಯತ್ನಿಸಿದರೂ ವ್ಯಕ್ತ ಮೃತಪಟ್ಟಿದ್ದಾರೆ. ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಲ್ಲೊಂದು ಹಿಟ್ ಅಂಡ್ ರನ್: ವೃದ್ಧನನ್ನು ದರದರನೆ ಎಳೆದೊಯ್ದ ಬೈಕ್
ಸಾವನ್ನಪ್ಪಿದ ಅಪರಿಚಿತ ಪಾದಚಾರಿ ಮಾಹಿತಿಯನ್ನ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ. ಕಪ್ಪು ಬಣ್ಣದ ಬೆನ್ಜ್ ಕಾರು ಹಿಟ್ ರನ್ ಮಾಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿಯನ್ನ ಆಧರಿಸಿ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.