ಶಿವಮೊಗ್ಗ(ಜು.31): ಕರ್ಕಶ ಶಬ್ದ ಹೊರಡಿಸುತ್ತ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಬುಲೆಟ್‌ ಬೈಕ್ಗಳಿಗೆ ಕೊನೆಗೂ ಸಂಚಾರಿ ಪೊಲೀಸರು ಬಿಸಿಮುಟ್ಟಿಸಿದ್ದಾರೆ.

40 ಬುಲೆಟ್ ಬೈಕ್ ವಶಕ್ಕೆ:

ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಂಚಾರಿ ಪೊಲೀಸರು ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ ಅಳವಡಿಸಿಕೊಂಡು ನಗರದಲ್ಲಿ ಸಂಚರಿಸುತ್ತಿದ್ದ ಸುಮಾರು 40ಕ್ಕೂ ಹೆಚ್ಚು ಬುಲೆಟ್‌ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಪೊಲೀಸ್‌ ಠಾಣೆ ಪಿಎಸ್‌ಐ ಮಂಜುನಾಥ್‌ ನೇತೃತ್ವದಲ್ಲಿ ದಾಳಿ ನಡೆಸಿದ ಸಿಬ್ಬಂದಿ ಕರ್ಕಶ ಸದ್ದು ಮಾಡುತ್ತ ಸಂಚರಿಸುತ್ತಿದ್ದ ಬೈಕ್‌ಗಳನ್ನು ವಶಕ್ಕೆ ಪಡೆದು, ಅದರ ಮಾಲೀಕರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ಕೇಸು ದಾಖಲಿಸಿದ್ದಾರೆ.

ಸೈಲೆನ್ಸರ್ ಅಳವಡಿಸುವ ಗ್ಯಾರೇಜ್ ಮಾಲೀಕರಿಗೂ ನೋಟಿಸ್:

ಅಲ್ಲದೆ, ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ ಅಳವಡಿಸಿಕೊಡುತ್ತಿದ್ದ ಗ್ಯಾರೇಜು ಮಾಲೀಕರಿಗೂ ನೋಟಿಸ್‌ ನೀಡಿದ್ದಾರಲ್ಲದೆ, ಮುಂದೆ ಈ ರೀತಿ ನಿಯಮ ಬಾಹಿರವಾಗಿ ಬೈಕ್‌ಗಳಿಗೆ ಸೈಲೆನ್ಸರ್‌ ಅಳವಡಿಸಿದರೆ ತಮ್ಮ ಮೇಲೆ ಕ್ರಮ ಕೈಗೊಳ್ಳವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೈಕನ್ನೇ ದೇವರಂತೆ ಪೂಜಿಸುವ ಬುಲೆಟ್ ಬಾಬಾ ಮಂದಿರ!

ಪ್ರಶಂಸೆ: ಕೆಲವು ಬುಲೆಟ್‌ ಬೈಕ್‌ಗಳು ಕರ್ಕಶ ಶಬ್ದ ಹೊರಡಿಸುತ್ತಿವೆ. ಇದರಿಂದಾಗಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿದೆ. ಪೊಲೀಸ್‌ ಇಲಾಖೆ ಕ್ರಮ ಜರುಗಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಇದೀಗ ಕರ್ಕಶ ಶಬ್ದ ಮಾಡುವ ಬುಲೆಟ್‌ ಬೈಕ್‌ಗಳ ವಿರುದ್ಧ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ