* ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಮರಡಿ ಪ್ರದೇಶದಲ್ಲಿ ನಡೆದ ಘಟನೆ * ಗುಂಡು ತಗುಲಿ ಗಾಯಗೊಂಡ ನಾಲ್ಕು ವರ್ಷದ ಬಾಲಕ* ಗಾಯಗೊಂಡ ಬಾಲಕನನ್ನ ಜಿಲ್ಲಾಸ್ಪತ್ರೆಗೆ ದಾಖಲು
ವಿಜಯಪುರ/ಚಡಚಣ(ಜೂ.16): ಲೋಡೆಡ್ ರಿವಾಲ್ವಾರ್ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ನಾಲ್ಕು ವರ್ಷದ ಬಾಲಕನೊಬ್ಬನ ತೊಡೆಗೆ ಗುಂಡು ತಗುಲಿ ಗಾಯಗೊಂಡ ಘಟನೆ ಜಿಲ್ಲೆಯ ಚಡಚಣ ಮರಡಿ(ಮಡ್ಡಿ) ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಭಿಷೇಕ ಸಿದ್ದರಾಮ ಕಲ್ಮನಿ(4) ಗಾಯಗೊಂಡ ಬಾಲಕ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಬಾಲಕ ಅಭಿಷೇಕ್ ಮನೆಯ ಕಬ್ಬಿಣ ಪೆಟ್ಟಿಗೆಯಲ್ಲಿದ್ದ ಗನ್ ಅನ್ನು ತೆಗೆದುಕೊಂಡಿದ್ದಾನೆ. ನಂತರ ಆಡವಾಡುವಾಗ ಲೋಡೆಡ್ ಗನ್ ಅನ್ನು ಒತ್ತಿದ್ದು, ಬಾಲಕನ ತೊಡೆಯಿಂದ ಗುಂಡು ಹಾದು ಹೋಗಿದೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆ ದಾಖಲಿಸಲಾಗಿದೆ.
ಪರವಾನಗಿ ಹೊಂದಿರುವ ಗನ್‌ನಿಂದಲೇ ಈ ಅವಘಡ ಸಂಭವಿಸಿದ್ದು, ಈ ಸಂಬಂಧ ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
