Asianet Suvarna News Asianet Suvarna News

ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮುದ್ರ ತೀರದಲ್ಲಿ ಮುಳುಗುತ್ತಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ಕರಾವಳಿ ಕಾವಲು ಪೊಲೀಸರು ಭಾನುವಾರ ರಕ್ಷಿಸಿದ್ದಾರೆ.

 

4 fishermen saved from sinking boat in malpe
Author
Bangalore, First Published Nov 25, 2019, 9:59 AM IST

ಉಡುಪಿ(ನ.25): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮುದ್ರ ತೀರದಲ್ಲಿ ಮುಳುಗುತ್ತಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ಕರಾವಳಿ ಕಾವಲು ಪೊಲೀಸರು ಭಾನುವಾರ ರಕ್ಷಿಸಿದ್ದಾರೆ.

ಭಾನುವಾರ ಮುಂಜಾನೆ 5.15ಕ್ಕೆ ಭಟ್ಕಳದ ನೇತ್ರಾಣಿ ದ್ವೀಪದ ಬಳಿ ಮಲ್ಪೆಯ ಶ್ರೀಲೀಲಾ ಎಂಬ ಹೆಸರಿನ ಬೋಟ್‌ನ ಮೇಲ್ಭಾಗದಲ್ಲಿ ಇದ್ದ ಡಿಸೇಲ್‌ ತುಂಬಿದ್ದ ಟ್ಯಾಂಕ್‌ ಬೋಟ್‌ನೊಳಗೆ ಬಿದ್ದ ಪರಿಣಾಮ ಬೋಟ್‌ನ ತಳ ಭಾಗ ಒಡೆದು, ನೀರು ಒಳಗೆ ನುಗ್ಗತೊಡಗಿತು. ತಕ್ಷಣ ಬೋಟ್‌ನಲ್ಲಿದ್ದ ಮೀನುಗಾರರು ಕರಾವಳಿ ಕಾವಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬ್ರಶ್ ಮಾಡಿದ ವ್ಯಕ್ತಿ ಸಾವು: ಟೂತ್ ಪೇಸ್ಟ್ ಎಂದು ಈತ ಬ್ರಶ್‌ಗೆ ಹಾಕಿದ್ದೇನು..?

ತಕ್ಷಣ ಭಟ್ಕಳ ಕರಾವಳಿ ಕಾವಲು ಪೊಲೀಸ್‌ ಠಾಣಾಧಿಕಾರಿ ನಾಗರಾಜ್‌, ಅಣ್ಣಪ್ಪ ಮೊಗೇರ, ತಾಂತ್ರಿಕ ಸಿಬ್ಬಂದಿ ಕ್ಯಾಪ್ಟನ್‌ ಮಲ್ಲಪ್ಪ ಮುದಿಗೌಡರ್‌ ಮತ್ತು ಕಲಾಸಿ ಸಂಜೀವ ನಾಯಕ ಅವರು ಇಲಾಖೆಯ ಇಂಟರ್‌ ಸೆಪ್ಟರ್‌ ಬೋಟ್‌ನಲ್ಲಿ ತೆರಳಿ ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಆನಂದ ಮೊಗೇರ, ಗುರು ಖಾರ್ವಿ, ಮಂಜುನಾಥ, ರಮೇಶ ಛಲವಾದಿ ಅವರನ್ನು ರಕ್ಷಿಸಿದ್ದಾರೆ.

ಬಿಜೆಪಿಗೆ ಬಹುಮತ ಸಿಗದಿದ್ದರೆ ಜೆಡಿಎಸ್ ಬೆಂಬಲ ನೀಡಲ್ಲ: ಸಿದ್ದರಾಮಯ್ಯ

ಕಾರ್ಯಚರಣೆಯಲ್ಲಿ ಭಾಗವಹಿಸಿದ ಪೊಲೀಸ್‌ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿಯ ಕರ್ತವ್ಯವನ್ನು ಪ್ರಶಂಶಿಸಿ ಕರಾವಳಿ ಕಾವಲು ಪೊಲೀಸ್‌ ಎಸ್ಪಿ ಆರ್‌.ಚೇತನ್‌ ಅವರು ಬಹುಮಾನ ಘೋಷಿಸಿದ್ದಾರೆ.

ಮಂಗಳೂರು: 1 ದಿನದಲ್ಲಿ 750ಕ್ಕೂ ಅಧಿಕ ಆಧಾರ್‌ ತಿದ್ದುಪಡಿ..!

Follow Us:
Download App:
  • android
  • ios