ತುಮಕೂರು: ಗ್ರಾಮದಲ್ಲೇ ರಾಜಾರೋಷವಾಗಿ ಓಡಾಡ್ತಿವೆ ಚಿರತೆಗಳು..!
ಒಂದಲ್ಲ, ಎರಡಲ್ಲ ಭರ್ತಿ ನಾಲ್ಕು ಚಿರತೆಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿವೆ. ಕಳೆದ ರಾತ್ರಿಯಿಂದ ಮಂಜಾನೆವರೆಗೂ ಚಿರತೆಗಳು ಓಡಾಡಿದ್ದು ಬಿನ್ನಿಕುಪ್ಪೆ, ದೊಡ್ಡ ಮಳಲವಾಡಿ ಅರಣ್ಯದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆದರೆ ಬೋನಿಗೆ ಬೀಳದೇ ಇರುವುದರಿಂದ ಅರಣ್ಯ ಇಲಾಖೆ ಹಾಗೂ ಜನರ ನಿದ್ದೆಗೆಡಿಸಿದೆ.
ತುಮಕೂರು(ಜ.14): ಒಂದಲ್ಲ, ಎರಡಲ್ಲ ಭರ್ತಿ ನಾಲ್ಕು ಚಿರತೆಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿವೆ. ಕಳೆದ ರಾತ್ರಿಯಿಂದ ಮಂಜಾನೆವರೆಗೂ ಚಿರತೆಗಳು ಓಡಾಡಿದ್ದು ಬಿನ್ನಿಕುಪ್ಪೆ, ದೊಡ್ಡ ಮಳಲವಾಡಿ ಅರಣ್ಯದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆದರೆ ಬೋನಿಗೆ ಬೀಳದೇ ಇರುವುದರಿಂದ ಅರಣ್ಯ ಇಲಾಖೆ ಹಾಗೂ ಜನರ ನಿದ್ದೆಗೆಡಿಸಿದೆ.
ನಾಲ್ಕು ಚಿರತೆಗಳ ಪೈಕಿ ಒಂದು ಹೆಣ್ಣು, ಒಂದು ಗಂಡು ಹಾಗೂ ಎರಡು ಮಧ್ಯ ವಯಸ್ಸಿನ ಚಿರತೆಗಳು ಪತ್ತೆಯಾಗಿವೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿರುವ ಪೊದೆಗಳ ಬಳಿ ಯಾರೂ ಹೋಗಬಾರದೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ತುಮಕೂರು: ಉಚಿತ ಕಬ್ಬಿಗಾಗಿ ಮುಗಿ ಬಿದ್ದ ಜನ..!
ನರಹಂತಕ ಚಿರತೆ ಸೆರೆಗಾಗಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕೂಂಬಿಂಗ್ ಸೋಮವಾರ ಕೂಡ ಮುಂದುವರಿದಿದೆ. ಸ್ಪೆಷಲ್ ಟೈಗರ್ ಫೋರ್ಸ್(ಎಸ್‌ಟಿಎಫ್) ನಿಂದ ಚಿರತೆ ಸೆರೆಯ ಕಾರ್ಯಾಚರಣೆ ನಡೆಯುತ್ತಿದ್ದು ಈವರೆಗೂ ಯಾವುದೇ ಸಕಾರಾತ್ಮಕ ಫಲಿತಾಂಶ ಹೊರ ಬಿದ್ದಿಲ್ಲ.
ನರಹಂತಕ ಚಿರತೆ ಮೂರನೇ ಬಲಿ ಪಡೆದ ಗುಬ್ಬಿ ತಾಲೂಕು ಮಣಿಕುಪ್ಪೆ ಗ್ರಾಮದಲ್ಲಿ 60 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದು ಚಿರತೆಗಳ ಬಗ್ಗೆ ನಿಗಾ ಇಟ್ಟಿದ್ದಾರೆ. ಗುಬ್ಬಿ ತಾಲೂಕು ಸಿ.ಎಸ್.ಪುರ ಹೋಬಳಿ ಭಾಗಗಳಲ್ಲೇ 4ಕ್ಕೂ ಹೆಚ್ಚು ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ. ಕೆಲ ತೋಟಗಳಿಂದ ಓಡಿ ಹೋಗಿರುವ ಬಗ್ಗೆ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ.
ತುಮಕೂರು: ಗ್ರಾಮಗಳಲ್ಲೇ ಅಡಗಿವೆಯಂತೆ 20ಕ್ಕೂ ಹೆಚ್ಚು ಚಿರತೆ..!.
ಸ್ಥಳದಲ್ಲಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಕೂಡ ಕೆಲ ಕಾಲ ಇದ್ದು ಸಿಬ್ಬಂದಿಗೆ ಸಾಥ್ ನೀಡಿದರು. ಗುಬ್ಬಿ ತಾಲೂಕು ಮಣಿಕುಪ್ಪೆ ಗ್ರಾಮದಲ್ಲಿ ಬಾಲಕನನ್ನು ಈ ನರಹಂತಕ ಚಿರತೆ ಬಲಿ ತೆಗೆದುಕೊಂಡ ಬಳಿಕ ಜಿಲ್ಲಾಡಳಿತ ಚಿರತೆ ಸೆರೆಗೆ ಕಟ್ಟು ನಿಟ್ಟಿನ ಆದೇಶ ನೀಡಿರುವುದರಿಂದ ಹಗಲಿರುಳು ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಆದರೆ ನರಹಂತಕ ಚಿರತೆ ಬೋನಿನತ್ತ ಸುಳಿಯುತ್ತಿಲ್ಲ. ಸದ್ಯ ಮಣಿಕುಪ್ಪೆ, ದೊಡ್ಡಮಳಲವಾಡಿ, ಚಿಕ್ಕಮಳಲವಾಡಿ, ಸಿಎಸ್ ಪುರ, ಹೆಬ್ಬೂರು ಸುತ್ತಮುತ್ತದ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಯುತ್ತಿದೆ. ಸಿಸಿಎಪ್ ಶಂಕರ್ ಹಾಗೂ ಡಿಎಫ್‌ಓ ಗಿರೀಶ್ ನೇತೃತ್ವದ ಉನ್ನತ ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡು ಬಿಟ್ಟು ಮಾರ್ಗದರ್ಶನ ನೀಡುತ್ತಿದ್ದಾರೆ.