Asianet Suvarna News Asianet Suvarna News

South Western Railway: ಸಮಯಪಾಲನೆಯಲ್ಲಿ ನೈಋುತ್ಯ ರೈಲ್ವೆಗೆ 3ನೇ ಸ್ಥಾನ

*  83 ಹೊಸ ಆಟೋಮ್ಯಾಟಿಕ್‌ ಟಿಕೆಟ್‌ ವೆಂಡಿಂಗ್‌ ಮಷೀನ್‌ ಬಳಕೆ 
*  4385 ಕೋಟಿ ಆದಾಯ: ಸಾಗಣೆ ಹೆಚ್ಚಳ
*  ಡಿ. 21ರ ವರೆಗೆ 31.64 ಟನ್‌ನಷ್ಟು ಸರಕನ್ನು ಸಾಗಿಸಿದ ನೈಋುತ್ಯ ರೈಲ್ವೆ 

3rd Place to South Western Railway in Timekeeping in India grg
Author
Bengaluru, First Published Jan 29, 2022, 4:10 AM IST

ಹುಬ್ಬಳ್ಳಿ(ಜ.29):  ನೈಋುತ್ಯ ರೈಲ್ವೆ(South Western Railway)  ಸಮಯ ಪಾಲನೆಯಲ್ಲಿ ದೇಶದಲ್ಲೇ(India) ಮೂರನೇ ಸ್ಥಾನ ಪಡೆದಿದೆ ಎಂದು ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ತಿಳಿಸಿದರು. ಬುಧವಾರ ನೈಋುತ್ಯ ರೈಲ್ವೆಯ ಕೇಂದ್ರ ಕಚೇರಿಯ ರೈಲ್‌ಸೌಧದಲ್ಲಿ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಯಶವಂತಪುರ ಮತ್ತು ಮಂಗಳೂರು ನಡುವೆ ವಾರದಲ್ಲಿ ಮೂರು ಬಾರಿ ಹಾಗೂ ಯಶವಂತಪುರ-ಕಾರವಾರಗಳ ನಡುವೆ ವಾರದಲ್ಲಿ ಒಂದು ಬಾರಿ ಎರಡು ವಿಸ್ಟಾಡೋಮ್‌ ಬೋಗಿಗಳ ಸೇವೆ ಹಾಗೂ ಯಶವಂತಪುರ ಮತ್ತು ಶಿವಮೊಗ್ಗ ಟೌನ್‌ ನಿತ್ಯ ಸೇವೆಯ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಒಂದು ವಿಸ್ಟಾಡೋಮ್‌(Wistadome) ಬೋಗಿ ಸೇವೆ ಈ ವರ್ಷ ಆರಂಭವಾಗಿದೆ.

Rice Bowl City of Karnataka: ಗಂಗಾವತಿಯಿಂದ ತಮಿಳುನಾಡಿಗೆ ಬತ್ತ ಕಟಾವು ಯಂತ್ರ ಸಾಗಣೆ

ಡಿಜಿಟಲ್‌ ಇಂಡಿಯಾ(Digital India) ಉದ್ದೇಶದೊಂದಿಗೆ 450 ಪಿಒಎಸ್‌, 83 ಹೊಸ ಆಟೋಮ್ಯಾಟಿಕ್‌ ಟಿಕೆಟ್‌ ವೆಂಡಿಂಗ್‌ ಮಷೀನ್‌ ಬಳಸಲಾಗುತ್ತಿದೆ. ಕಳೆದ ವರ್ಷ ನೈಋುತ್ಯ ರೈಲ್ವೆಯು 169 ಕಿಮೀ ಮಾರ್ಗ ದ್ವಿಪಥೀಕರಣ ಮಾಡಲಾಗಿದೆ. ಹುಬ್ಬಳ್ಳಿ ಎಸ್‌ಎಸ್‌ಎಸ್‌ ನಿಲ್ದಾಣದ ಯಾರ್ಡ್‌ ಪುನರ್‌ನವೀಕರಣ ಪೂರ್ಣವಾಗಿವೆ. 147 ಕಿಮೀ ಉದ್ದ ಹಳಿ ನವೀಕರಣ ಮಾಡಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 5 ರಸ್ತೆ ಮೇಲ್ಸೇತುವೆ, 12 ರಸ್ತೆ ಕೆಳಸೇತುವೆ/ಸಬ್‌ ವೇ ನಿರ್ಮಿಸಲಾಗಿದೆ ಎಂದರು.

ಕೋವಿಡ್‌(Covid Management) ನಿರ್ವಹಣೆಗೆ ರೈಲ್ವೆ ಆಸ್ಪತ್ರೆಯ ಎಲ್ಲ 300 ಹಾಸಿಗೆಗೆ ಆಕ್ಸಿಜನ್‌ ಸಂಪರ್ಕ ನೀಡಲಾಗಿದೆ. ಜತೆಗೆ ಎಲ್ಲ ಆಸ್ಪತ್ರೆಯಲ್ಲೂ 500 ಎಲ್‌ಪಿಎಂ ಸಾಮರ್ಥ್ಯದ ಪಿಎಸ್‌ಎ ಆಕ್ಸಿಜನ್‌ ಜನರೇಟರ್‌ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.

ನೈಋುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್‌ ಕುಮಾರ್‌ ಮಿಶ್ರಾ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್‌ ಮಲ್ಖೇಡೆ, ಇನಸ್ಪೆಕ್ಟರ್‌ ಜನರಲ್‌ ಹಾಗೂ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಅಲೋಕ್‌ ಕುಮಾರ್‌, ಪ್ರಧಾನ ಮುಖ್ಯ ಕರ್ಮಚಾರಿ ಅಧಿಕಾರಿ ಅಲೋಕ್‌ ಕುಮಾರ್‌, ಇತರ ಎಲ್ಲಾ ಇಲಾಖಾ ಮುಖ್ಯಸ್ಥರು ಮತ್ತು ಅಧಿಕಾರಿಗಳು ಇದ್ದರು.

ನೈಋುತ್ಯ ರೈಲ್ವೆಯ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಡಾ. ವಂದನಾ ಶ್ರೀವಾಸ್ತವ್‌ ರೈಲ್ವೆ ಪ್ರೌಢಶಾಲೆಯಲ್ಲಿ ಧ್ವಜಾರೋಹಣ ಮಾಡಿದರು. ಸ್ವಚ್ಛತೆ, ಭದ್ರತೆ ಹಾಗೂ ತೋಟಗಾರಿಕೆ ಸಿಬ್ಬಂದಿಗೆ ಆಹಾರದ ಕಿಟ್‌ ವಿತರಿಸಲಾಯಿತು. ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷೆ ಭಾರತಿ ಮಿಶ್ರಾ ಸೇರಿ ಇತರರಿದ್ದರು.

Festive Season: ಹುಬ್ಬಳ್ಳಿ-ವಿಜಯಪುರ ಇಂಟರ್‌ಸಿಟಿ ರೈಲು ಪುನಾರಂಭ

4385 ಕೋಟಿ ಆದಾಯ: ಸಾಗಣೆ ಹೆಚ್ಚಳ

ಕೋವಿಡ್‌-19(Covid-19) ಸವಾಲು ಮಧ್ಯೆಯೂ ನೈಋುತ್ಯ ವಲಯದ ಆದಾಯ ಕಳೆದ ಹಣಕಾಸು ವರ್ಷಕ್ಕಿಂತ ಶೇ. 65ರಷ್ಟುಹೆಚ್ಚಾಗಿದೆ. ಈ ವರ್ಷ 4385 ಕೋಟಿ ಆದಾಯ ಲಭಿಸಿದೆ. ಡಿ. 21ರ ವರೆಗೆ ನೈಋುತ್ಯ ರೈಲ್ವೆಯು 31.64 ಟನ್‌ನಷ್ಟು ಸರಕನ್ನು ಸಾಗಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ. 20ರಷ್ಟು ಹೆಚ್ಚಿನ ಸಾಗಣೆಯಾಗಿದೆ ಎಂದು ಸಂಜೀವ್‌ ಕಿಶೋರ್‌ ತಿಳಿಸಿದರು.

ನೈರುತ್ಯ ರೈಲ್ವೆ: ಜೆಎಸ್‌ಡಬ್ಲು ಜತೆ ಒಪ್ಪಂದ

ಹುಬ್ಬಳ್ಳಿ: ನೈರುತ್ಯ ರೈಲ್ವೆ ಇಲಾಖೆ ಮತ್ತು ವಿಜಯನಗರದ(Vijayanagara) ಜೆಎಸ್‌ಡಬ್ಲು ಸ್ಟೀಲ್‌ ಲಿಮಿಟೆಡ್‌(JSW Steel Limited) ಉದಾರೀಕೃತ ವಿಶೇಷ ಸರಕು ಸಾಗಾಣಿಕೆ ವಿಷಯವಾಗಿ ಒಪ್ಪಂದ ಮಾಡಿಕೊಂಡಿದೆ.
ಕಳೆದ ವರ್ಷ ಅ.13 ರಂದು ಎಚ್‌ಆರ್‌/ಸಿಆರ್‌ಸ್ಟೀಲ್‌ (ಹಾಟ್‌ ರೋಲ್ಡ್‌/ ಕೋಲ್ಡ್‌ ರೋಲ್ಡ್‌ ) ಲೋಡ್‌ ಮಾಡಲು ವಿವಿಧ ಸರ್ಕ್ಯೂಟ್‌ಗಳಲ್ಲಿ ಬಿಎಫ್‌ಎನ್‌ವಿ (ಬೋಗಿ ವರ್ಸ್‌ಟೈಲ್‌ ಕಾಯಿಲ್‌ ವ್ಯಾಗನ್‌) ರೇಕ್‌ಗಳನ್ನು ಪರಿಚಿಯಿಸಲು ಈ ಒಪ್ಪಂದವನ್ನ ಮಾಡಿಕೊಂಡಿತ್ತು.
 

Follow Us:
Download App:
  • android
  • ios