ಮಂಗಳೂರು(ಜೂ.25): ಕೊರೋನಾ ಪ್ರಕರಣ ಹೆಚ್ಚುತ್ತಿರುವ ನಡುವೆಯೇ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ಪರೀಕ್ಷೆ ಬರೆಯುವ ಕೇರಳದ ವಿದ್ಯಾರ್ಥಿಗಳನ್ನು ವಿಶೇಷ ಬಸ್ ಮೂಲಕ ಕರೆ ತರಲಾಗಿದೆ.

"

ಕರ್ನಾಟಕದಲ್ಲಿ ಓದುತ್ತಿರುವ ಕೇರಳ ರಾಜ್ಯದ ಗಡಿಗ್ರಾಮಗಳಿಂದ 367 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕುಳಿತಿದ್ದಾರೆ. ಎಲ್ಲಾ 367 ಮಕ್ಕಳೂ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ. ಅವರನ್ನು ತಲಪಾಡಿ ಚೆಕ್ ಪೋಸ್ಟ್ ನಿಂದ ಬಸ್‌ನಲ್ಲಿ ಸುರಕ್ಷತೆಯೊಂದಿಗೆ ಕರೆತರಲಾಗಿದೆ.

ಶಾಲಾ ಆರಂಭದ ಕುರಿತಂತೆ ಸಚಿವ ಸುರೇಶ್ ಕುಮಾರ್ ಸ್ಪಷ್ಟೀಕರಣ

ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಪಿಯು ಪರೀಕ್ಷೆಯಲ್ಲಾದ  ಲೋಪ ದೋಷಗಳನ್ನು ಸರಿಪಡಿಸಿಕೊಂಡಿದ್ದೇವೆ. ಪೋಷಕರು ಸಹಕಾರ  ಕೊಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಕಾರ್ಯಕರ್ತರು, ಪೊಲೀಸರು ಸಹಕಾರ ಕೊಡುತ್ತಿದ್ದಾರೆ ಎಂದಿದ್ದಾರೆ.

ಆಸ್ಟಿನ್ಟ್ ಟೌನ್ ಯಿಂದ ಸಮಸ್ಯೆ ಬಂತು, ಅದನ್ನು ಸಂಭಂದಟ್ಟವರಿಗೆ ತಿಳಿಸಿ ಬಗೆಹರಿಸಿದ್ದೇನೆ. ವಿಜಯಪುರ ವಾಹನ ಸಮಸ್ಯೆ ಬಂತು ಅದನ್ನ ಸಹ ಡಿಸಿಗೆ ಮಾಹಿತಿ ನೀಡಿ ಪರಿಹಾರ ಮಾಡಿದ್ದೇವೆ. ಪರೀಕ್ಷಾ ಕೇಂದ್ರದ ಹೊರಗಡೆ ಪೋಷಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ.

SSLC ಪರೀಕ್ಷೆ ಶುರುವಾಗಿಲ್ಲ, ಆಗಲೇ ರಿಸಲ್ಟ್ ಡೇಟ್ ಫಿಕ್ಸ್: ಇದು ಸೂಪರ್ ಫಾಸ್ಟ್

ಮಕ್ಕಳನ್ನ ಪರೀಕ್ಷಾ ಕೇಂದ್ರದಲ್ಲಿ ಬಿಟ್ಟು ಹೊರಡಿ ಎಂದು ಸಚಿವ ಸುರೇಶ್ ಕುಮಾರ್ ಪೋಷಕರಲ್ಲಿ ಮತ್ತೆ ಮನವಿ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಚಿವರು ತಿಳಿಸಿದ್ದು, ಈ ಪರೀಕ್ಷೆಯಿಂದ ವಿದ್ಯಾರ್ಥಿಗಳ ಶಿಸ್ತನ್ನು ಪೊಷಕರು ಸಹ ಕಲಿಯಲಿದ್ದಾರೆ ಎಂದಿದ್ದಾರೆ.