Infants Death : 7 ತಿಂಗಳಲ್ಲಿ ಒಂದೇ ಆಸ್ಪತ್ರೆಯಲ್ಲಿ 358 ಶಿಶು ಸಾವು!

  •  7 ತಿಂಗಳಲ್ಲಿ ಒಂದೇ ಆಸ್ಪತ್ರೆಯಲ್ಲಿ 358 ಶಿಶು ಸಾವು!
  •  ಅಪೌಷ್ಟಿಕತೆ, ಅವಧಿಪೂರ್ವ ಹೆರಿಗೆಯಿಂದಾಗಿ ವಿಮ್ಸ್‌ನಲ್ಲಿ ಮಕ್ಕಳು ಕೊನೆಯುಸಿರು
358 infants Dies in7 Month in  Ballary  VIMS hospital snr

 ಬಳ್ಳಾರಿ (ಡಿ.28): ಅಪೌಷ್ಟಿಕತೆ,  ಅವಧಿಪೂರ್ವ ಜನನದಿಂದಾಗಿ ಬಳ್ಳಾರಿ-ವಿಜಯನಗರ (Ballary -Vijayanagar)  ಜಿಲ್ಲೆಗಳಲ್ಲಿ ನೂರಾರು ಹಸು ಗೂಸುಗಳು (Infants) ಜೀವನ್ಮರಣ ಹೋರಾಟ ನಡೆಸಿ, ಸದ್ದಿಲ್ಲದೆ ಉಸಿರು ನಿಲ್ಲಿಸುತ್ತಿರುವ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ (Health Department) ಅಧಿಕಾರಿಗಳೇ ನೀಡುವ ಅಂಕಿ-ಅಂಶಗಳ ಪ್ರಕಾರ, ಅವಿಭಜಿತ ಬಳ್ಳಾರಿ (Ballary)  ಜಿಲ್ಲೆಯಲ್ಲಿ ಏಳು ತಿಂಗಳಲ್ಲಿ 358 ನವಜಾತ ಶಿಶುಗಳು ಮೃತಪಟ್ಟಿವೆ. ಇಷ್ಟೂ ಶಿಶುಗಳು ಬಳ್ಳಾರಿಯ (Ballary)  ವಿಮ್ಸ್‌(ವಿಜಯನಗರ ಇನ್ಸ್‌ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌) ಆಸ್ಪತ್ರೆಯಲ್ಲೇ ಜೀವ ಕಳೆದುಕೊಂಡಿವೆ.

ಸಾವಿಗೀಡಾಗುತ್ತಿರುವ ಮಕ್ಕಳ ಪ್ರಮಾಣದಲ್ಲಿ ಅಪೌಷ್ಟಿಕತೆ  ಹಾಗೂ ಅವಧಿ ಪೂರ್ವ ಹೆರಿಗೆ ಸಮಸ್ಯೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಇದಲ್ಲದೆ ಇಲ್ಲಿ ಸುಸೂತ್ರ ಹೆರಿಗೆಯಾಗದೆ (Delivery) ಮಕ್ಕಳು ತೊಂದರೆಗೆ ಸಿಲುಕಿ ಕೊನೆಯುಸಿರೆಳೆಯುತ್ತಿರುವ ಸಂಖ್ಯೆಯೂ ಸಾಕಷ್ಟಿದೆ.

"

ಕಾರಣ ಏನಿರಬಹುದು?:  ಕಳೆದೆರಡು ವರ್ಷಗಳ ಕಾಲ ಕಾಡಿದ ಕೊರೋನಾ (Corona)  ಸಹ ಮಕ್ಕಳ ಸಾವಿನ ಪ್ರಮಾಣ ಏರಿಕೆಗೆ ಕಾರಣ ಎನ್ನುತ್ತಾರೆ ನಗರದ ಹಿರಿಯ ವೈದ್ಯ ಡಾ.ಯೋಗಾ ನಂದರೆಡ್ಡಿ. ಅಪೌಷ್ಟಿಕತೆ ನಿಯಂತ್ರಿಸಲು ಜಾರಿಯಲ್ಲಿದ್ದ ವಿವಿಧ ಸರ್ಕಾರಿ ಯೋಜನೆಗಳು (Govt Plans)  ಕೋವಿಡ್‌ನಿಂದಾಗಿ Covid)  ಸ್ಥಗಿತಗೊಂಡವು. ಮಕ್ಕಳ ವಿಭಾಗಕ್ಕೆ ನಿಯೋಜಿಸಲಾಗಿದ್ದ ವೈದ್ಯಕೀಯ ಸಿಬ್ಬಂದಿ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು. ಇದರಿಂದ ತಾಯಿ ಆರೋಗ್ಯದ ಪ್ರಾಥಮಿಕ ನಿಗಾ ಕಡಿಮೆಯಾಯಿತು. ಹೀಗಾಗಿ ಗರ್ಭಿಣಿಯರು  ( Pregnant) ಅಪೌಷ್ಟಿಕತೆಯಿಂದ ಬಳಲುವಂತಾಯಿತು. ಇದು ಶಿಶುಗಳು ಅವಧಿ ಮುನ್ನ ಜನನಕ್ಕೆ ಕಾರಣವಾಗಿದೆ. ಬದುಕಿರುವ ಶಿಶುಗಳಲ್ಲೂ ಹಲವು ಶಿಶುಗಳು ಗಂಭೀರ ಸಮಸ್ಯೆ ಎದುರಿಸುತ್ತಿವೆ ಎನ್ನುತ್ತಾರೆ ಡಾ.ಯೋಗಾನಂದರೆಡ್ಡಿ.

ಸಾವಿನ ಪ್ರಮಾಣ ಇಳಿಕೆಯಾಗಿದೆ: ಡಿಎಚ್‌ಒ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (Family wellfare Department) ಅಧಿಕೃತ ಮಾಹಿತಿಯಂತೆ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಒಟ್ಟು 30,835 ಶಿಶುಗಳ ಜನನವಾಗಿದೆ. ಇವುಗಳಲ್ಲಿ ಒಂದು ವರ್ಷದೊಳಗಿನ ಮಕ್ಕಳು 343. ಹಾಗೆ ನೋಡಿದರೆ  ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ದನ್‌ ಸ್ಪಷ್ಟನೆ ನೀಡಿದ್ದಾರೆ.

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಮಕ್ಕಳ ಸಾವಿನ ಪ್ರಮಾಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಕ್ಕಳು ಅಪೌಷ್ಟಿಕತೆಯಿಂದಲೇ ಸತ್ತಿದ್ದಾರೆ ಎನ್ನುವುದನ್ನು ಒಪ್ಪಲಾಗದು. ಮಾಹಿತಿ ತರಿಸಿಕೊಂಡು, ಪರಾಮರ್ಶೆ ಮಾಡಿ, ತನಿಖೆ ಮಾಡುವ ದಿಸೆಯಲ್ಲಿ ಕ್ರಮವಹಿಸಲಾಗುವುದು.

ಹಾಲಪ್ಪ ಆಚಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ

ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಗರ್ಭಿಣಿಯರು, ತಾಯಂದಿರಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತಿದೆ. ಬಳ್ಳಾರಿಯಲ್ಲಿ ನವಜಾತ ಶಿಶುಗಳ ಸಾವಿನ ಮಾಹಿತಿ ಇದೆ. ಅಲ್ಲಿ ತಾಯಂದಿರಿಗೆ ಪೌಷ್ಟಿಕ ಆಹಾರ ನೀಡಲು ಮಹಿಳಾ- ಮಕ್ಕಳ ಇಲಾಖೆ ಜತೆ ಮಾತುಕತೆ ನಡೆಸಲಾಗುತ್ತದೆ.

- ಡಾ. ಕೆ. ಸುಧಾಕರ್‌ ಆರೋಗ್ಯ ಸಚಿವ

ಸಾವು ವಿಮ್ಸ್‌ನಲ್ಲಿ ಕಡಿಮೆ

ವಿಮ್ಸ್‌ನಲ್ಲಿ ನಿತ್ಯ 30ರಿಂದ 35 ಮಕ್ಕಳು ಜನಿಸುತ್ತಿವೆ. ಇಲ್ಲಿ ಮಕ್ಕಳ ಸಾವಿನ ಸಂಖ್ಯೆ ರಾಜ್ಯದಲ್ಲೇ ಕಡಿಮೆ ಇದೆ. ವಿಮ್ಸ್‌ನಲ್ಲಿ ಜನಿಸಿ ಸುರಕ್ಷಿತವಾಗಿ ಮನೆಗೆ ತೆರಳಿದ ಮಕ್ಕಳ ಬಗ್ಗೆ ಗಮನ ನೀಡದೆ 358 ಸಂಖ್ಯೆ ಇಟ್ಟುಕೊಂಡು ವಿಮ್ಸ್‌ನಲ್ಲಿ ಮಕ್ಕಳ ಸಾವು ಎನ್ನುತ್ತಿರುವುದು ಸರಿಯಲ್ಲ.

- ಡಾ. ಗಂಗಾಧರ ಗೌಡ, ವಿಮ್ಸ್‌ ನಿರ್ದೇಶಕ

ಮರಣ ಪ್ರಮಾಣ ಇಳಿಕೆ

ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ 1000 ಶಿಶುಗಳ ಜನನಕ್ಕೆ ಈ ಮೊದಲು 20ಕ್ಕೂ ಹೆಚ್ಚು ಮರಣ ಪ್ರಮಾಣವಿತ್ತು. ಅದೀಗ 12ಕ್ಕೆ ಇಳಿದಿದೆ.

- ಡಾ.  ಜನಾರ್ದನ್‌, ಡಿಎಚ್‌ಒ

Latest Videos
Follow Us:
Download App:
  • android
  • ios