ಕಾಫಿನಾಡಿಗೆ ಬಂದ 340 ಕೆಜಿ ಅಂಬೂರು ಮೀನು: ಖರೀದಿಗೆ ಮುಗಿಬಿದ್ದ ಮತ್ಸ್ಯಪ್ರಿಯರು
ಮತ್ಸ್ಯ ಜಾತಿಯಲ್ಲೇ ಅಪರೂಪ ತಳಿಯಯಾದ ಅಂಬೂರು ಸಮುದ್ರ ಮೀನಿಗಾಗಿ ಚಿಕ್ಕಮಗಳೂರಿನಲ್ಲಿ ಮೀನುಪ್ರಿಯರು ಮುಗಿಬಿದ್ದಿದ್ದಾರೆ. ಬರೋಬ್ಬರಿ 340 ಕೆಜಿ ತೂಕದ ಅಂಬೂರು ಸಮುದ್ರ ಮೀನಿಗೆ ಗ್ರಾಹಕರು ಸರದಿ ಸಾಲಲ್ಲಿ ನಿಂತು ಖರೀದಿಸಿದ್ದಾರೆ.
ಚಿಕ್ಕಮಗಳೂರು (ಆ.20): ಮತ್ಸ್ಯ ಜಾತಿಯಲ್ಲೇ ಅಪರೂಪ ತಳಿಯಯಾದ ಅಂಬೂರು ಸಮುದ್ರ ಮೀನಿಗಾಗಿ ಚಿಕ್ಕಮಗಳೂರಿನಲ್ಲಿ ಮೀನುಪ್ರಿಯರು ಮುಗಿಬಿದ್ದಿದ್ದಾರೆ. ಬರೋಬ್ಬರಿ 340 ಕೆಜಿ ತೂಕದ ಅಂಬೂರು ಸಮುದ್ರ ಮೀನಿಗೆ ಗ್ರಾಹಕರು ಸರದಿ ಸಾಲಲ್ಲಿ ನಿಂತು ಖರೀದಿಸಿದ್ದಾರೆ. ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯ ಮೀನು ಮಳಿಗೆಗೆ ಇದೇ ಮೊದಲ ಬಾರಿಗೆ ಮಂಗಳೂರಿನಿಂದ ಬಂದ ಬರೋಬ್ಬರಿ 340 ಕೆಜಿ ತೂಕದ ಅಂಬೂರು ಸಮುದ್ರ ಮೀನು ಕಂಡು ಗ್ರಾಹಕರು ಹಾಗೂ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಂಗಡಿ ಮಾಲೀಕ ಒಂದು ಕೆಜಿ ಮೀನಿಗೆ 600 ರೂಪಾಯಿ ನಿಗದಿಪಡಿಸಿದ್ದರು. ಗ್ರಾಹಕರು ಹೆಚ್ಚಾದಂತೆ ಬೇಡಿಕೆ ನೋಡಿ ಒಂದು ಸಾವಿರ ರೂಪಾಯಿ ಅಂದರೂ ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ಮೀನನ್ನ ಖರೀದಿಸಿದ್ದಾರೆ. ಕೆಲವರು ಸಾವಿರಕ್ಕಿಂತ ಹೆಚ್ಚು ಕೊಡುತ್ತೇನೆ ಎಂದುರು ಮೀನು ಸಿಕ್ಕಿಲ್ಲ. ಗ್ರಾಹಕರನ್ನ ಸಂಭಾಳಿಸಲು ಅಂಗಡಿ ಮಾಲೀಕ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಗ್ರಾಹಕರಿಗಿಂತ ಸತ್ತ ಮೀನಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಿತ್ತು. ಅವರನ್ನ ಸಂಭಾಳಿಸುವುದೇ ಮಾಲೀಕನಿಗೆ ದೊಡ್ಡ ಸವಾಲಾಗಿತ್ತು.
ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಮುಂದಾಗಿ: ಸಚಿವ ಪ್ರಿಯಾಂಕ್ ಖರ್ಗೆ
ಮೀನನ್ನ ಖರೀಸಿಸುವವರಿಗಿಂತ ನೋಡಿ, ಅಬ್ಬಾ ಅಂದು ಫೋಟೋ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಿತ್ತು. ಈ ಮೀನು ಹೆಚ್ಚಾಗಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಿಗೆ ಭಾರತದಿಂದ ರಫ್ತಾಗುತ್ತದೆ. ಮೊದಲ ಬಾರಿಗೆ ಚಿಕ್ಕಮಗಳೂರಿನ ಗ್ರಾಹಕರ ಬೇಡಿಕೆಗೆ ಮಣಿದು ಅಂಗಡಿ ಮಾಲೀಕ ತರಿಸಿ ಮಾರಾಟಕ್ಕೆ ಮುಂದಾದಾಗ ಗ್ರಾಹಕರ ಉತ್ಸಾಹ ಹಾಗೂ ಬೇಡಿಕೆ ನೋಡಿ ಮೀನಿನ ಅಂಗಡಿ ಮಾಲೀಕ ಫುಲ್ ಖುಷಿಯಾಗಿದ್ದಾರೆ. ಈ ಮೀನು ಹೃದಯ ಸಂಬಂಧಿ ಖಾಯಿಲೆಗೆ ಒಳ್ಳೆಯದು ಎಂದು ಹೇಳಲಾಗುತ್ತಿದೆ.