Asianet Suvarna News Asianet Suvarna News

ಮಂಗ್ಳೂರು ಏರ್‌ಪೋರ್ಟ್‌ನಲ್ಲಿ 33.88 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್ತು ವಶ

ಆರೋಪಿಯನ್ನು ವಶಕ್ಕೆ ಪಡೆದ ಕಸ್ಟಮ್ಸ್‌ ಗುಪ್ತಚರ ಘಟಕದ ಅಧಿಕಾರಿಗಳು| ಚಿನ್ನದ ಬಿಸ್ಕತ್ತುಗಳನ್ನು ವಿಮಾನದ ಒಳಗೆ ಸೀಟಿನ ಅಡಿ ಅಡಗಿಸಿಡಲಾಗಿತ್ತು| ಈ ವಿಮಾನ ದುಬೈ-ಮಂಗಳೂರು-ಹೈದರಾಬಾದ್‌ ನಡುವೆ ಸಂಚಾರ| 

33.88 Lakh Worth of Gold Biscuits Seized in Mangaluru Airport
Author
Bengaluru, First Published Sep 28, 2020, 9:14 AM IST

ಮಂಗಳೂರು(ಸೆ.28): ಇಲ್ಲಿನ ವಿಮಾನ ನಿಲ್ದಾಣದಲ್ಲಿ ದುಬೈಯಿಂದ ಬಂದಿಳಿದ ವಿಮಾನದಿಂದ ಕಸ್ಟಮ್ಸ್‌ ಗುಪ್ತಚರ ಘಟಕದ ಅಧಿಕಾರಿಗಳು ಭಾನುವಾರ 33.88 ಲಕ್ಷ ಮೌಲ್ಯದ 671 ಗ್ರಾಂ. ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. 

ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚಿನ್ನದ ಬಿಸ್ಕತ್ತುಗಳನ್ನು ವಿಮಾನದ ಒಳಗೆ ಸೀಟಿನ ಅಡಿ ಅಡಗಿಸಿಡಲಾಗಿತ್ತು. ಈ ವಿಮಾನ ದುಬೈ-ಮಂಗಳೂರು-ಹೈದರಾಬಾದ್‌ ನಡುವೆ ಸಂಚರಿಸುತ್ತದೆ. ದೇಶೀಯ ಯಾನ ಆಗಿರುವುದರಿಂದ ವಿಮಾನದಲ್ಲಿ ಕಟ್ಟುನಿಟ್ಟಿನ ತಪಾಸಣೆ ಇರಲಾರದು ಎಂದು ಭಾವಿಸಿ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಲಾಗಿತ್ತು.

ಡ್ರಗ್ಸ್‌ ಜಾಲ ಪ್ರಕರಣ: ನಿರೂಪಕಿ ಅನುಶ್ರೀಗೆ ಡೋಪಿಂಗ್‌ ಟೆಸ್ಟ್‌?

ದುಬೈಯಿಂದ ಮಂಗಳೂರು ತನಕ ಅಂತಾರಾಷ್ಟ್ರೀಯ ಯಾನವಾಗಿ ಹಾಗೂ ಮಂಗಳೂರು-ಹೈದರಾಬಾದ್‌ ನಡುವೆ ದೇಶೀಯ ವಿಮಾನವಾಗಿ ಕಾರ್ಯಾಚರಿಸುತ್ತಿದ್ದು, ಮಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ಪ್ರಯಾಣಿಕ ಈ ಚಿನ್ನವನ್ನು ಸಂಗ್ರಹಿಸಿ ಕೊಂಡೊಯ್ಯುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ಆದರೆ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್‌ ಗುಪ್ತಚರ ವಿಭಾಗದವರು ಇದನ್ನು ಪತ್ತೆ ಹಚ್ಚಿದ್ದಾರೆ.
 

Follow Us:
Download App:
  • android
  • ios