ಬೆಂಗಳೂರು(ಜು.13): ಪರಪ್ಪನ ಅಗ್ರಹಾರದಲ್ಲಿನ ಮತ್ತೆ 30 ಮಂದಿ ವಿಚಾರಣಾಧೀನ ಕೈದಿಗಳಿಗೆ ಕೊರೋನಾ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. ಕಳೆದ ಎರಡು ವಾರಗಳಲ್ಲಿ ವಿವಿಧ ಅಪರಾಧ ಪ್ರಕರಣಕ್ಕೆ ಒಳಗಾಗಿ ಕಾರಾಗೃಹಕ್ಕೆ ಬಂದಿರುವ 30 ಮಂದಿಗೆ ಸೋಂಕು ಬಂದಿದೆ.

ಸೋಂಕು ದೃಢಪಟ್ಟವರಲ್ಲಿ ಎಲ್ಲರೂ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಈ ಪೈಕಿ ಓರ್ವ ಮಹಿಳಾ ವಿಚಾರಣಾಧೀನ ಕೈದಿ ಕೂಡ ಸೇರಿದ್ದಾರೆ. ಮಹಿಳೆ ವಿಚಾರಣಾಧೀನ ಕೈದಿಯನ್ನು ರವಿಶಂಕರ್‌ ಗುರೂಜಿ ಆಶ್ರಮಕ್ಕೆ ಹಾಗೂ ಉಳಿದವರನ್ನು ಥಣಿಸಂದ್ರದಲ್ಲಿರುವ ಹಜ್‌ ಭವನಕ್ಕೆ ಕರೆದೊಯ್ದು ಬಿಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸೋಂಕಿತರ ಆರೈಕೆಗೆ 22000 ಹಾಸಿಗೆ

ಬಂಧನಕ್ಕೆ ಒಳಗಾಗಿ ಜೈಲಿಗೆ ಬರುವವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ ಮಾಡಲು 12 ಬ್ಯಾರಕ್‌ ಹಾಗೂ 15 ಸೆಲ್‌ನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಪರೀಕ್ಷೆ ಬಳಿಕ ಇವರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತೋರ್ವ ಮಂತ್ರಿಗೆ ಕೊರೋನಾ ಭೀತಿ: ಇಡೀ ಕುಟುಂಬವೇ ಕ್ವಾರಂಟೈನ್​

ಇವರೊಂದಿಗೆ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.ಕೆಲ ದಿನಗಳ ಹಿಂದಷ್ಟೇ 26 ಮಂದಿ ವಿಚಾರಣಾಧೀನ ಕೈದಿಗಳು, 12 ಮಂದಿ ಅಧಿಕಾರಿ,ಸಿಬ್ಬಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿತ್ತು.