Asianet Suvarna News Asianet Suvarna News

ಕರ್ನಾಟಕದ ಮತ್ತೋರ್ವ ಮಂತ್ರಿಗೆ ಕೊರೋನಾ ಭೀತಿ: ಇಡೀ ಕುಟುಂಬವೇ ಕ್ವಾರಂಟೈನ್​

ಜನಪ್ರತಿನಿಧಿಗಳನ್ನು ಕೊರೋನಾ ಬೆಂಬಿಡದೆ ಕಾಡುತ್ತಿದ್ದು, ಇದೀಗ ಕರ್ನಾಟಕದ ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಅವರ ಕುಟುಂಬ ಕ್ವಾರಂಟೈನ್‌ಗೆ ಒಳಗಾಗಿದೆ.

minister BC patil self quarantined after his relative test positive for Covid19
Author
Bengaluru, First Published Jul 12, 2020, 10:59 PM IST

ಬೆಂಗಳೂರು, (ಜುಲೈ.12):: ಕೃಷಿ ಸಚಿವ ಬಿ.ಸಿ.ಪಾಟೀಲ್​ ಅವರಿಗೂ ಕೊರೋನಾ ಭೀತಿ ಎದುರಾಗಿದ್ದು, ಅವರು ಇಂದಿನಿಂದಲೇ ಸ್ವಯಂ ಕ್ವಾರಂಟೈನ್​ ಆಗಿದ್ದಾರೆ. 

ಬಿಸಿ ಪಾಟೀಲ್ ಸಂಬಂಧಿಕರೊಬ್ಬರಿಗೆ ಕೊರೋನಾ ವೈರಸ್ ಸೋಂಕು ತುಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತ ಅವರ ಇಡೀ ಕುಟುಂಬ ಕ್ವಾರಂಟೈನ್‌ಗೆ ಒಳಗಾಗಿದೆ.

ಸಚಿವರು  ತಮ್ಮ ಕ್ಷೇತ್ರವಾದ ಹಿರೇಕೇರೂರಿನ ನಿವಾಸದಲ್ಲಿ ಕ್ವಾರಂಟೈನ್‌ ಆದ್ರೆ, ಅವರ ಕುಟುಂಬ ಬೆಂಗಳೂರಿನ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದೆ. ಈ ಬಗ್ಗೆ ಸ್ವತಃ ಸಚಿವ ಬಿಸಿ ಪಾಟೀಲ್ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದಾರೆ.

ಕೊರೋನಾ ವೈರಸ್‌ಗೆ ತುತ್ತಾದ ಕರ್ನಾಟಕದ ಪ್ರಮುಖ ರಾಜಕಾರಣಿಗಳಿವರು

 ಈ ಬಗ್ಗೆ ಟ್ವೀಟ್ ಮಾಡಿರುವ ಬಿ.ಸಿ.ಪಾಟೀಲ್​, ಬೆಂಗಳೂರಿನ ಮಿನಿಸ್ಟರ್​ ಕ್ವಾಟರ್ಸ್​​ನಲ್ಲಿ ನನ್ನ ಸಂಬಂಧಿಕರೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ. ನಾನೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಹಾಗಾಗಿ ನಾನು ಮತ್ತು ನನ್ನ ಕುಟುಂಬಸ್ಥರು, ಸಿಬ್ಬಂದಿ ವರ್ಗದವರು ಒಂದು ವಾರಗಳ ಕಾಲ ಕ್ವಾರಂಟೈನ್​ ಆಗುತ್ತಿದ್ದೇವೆ. ಏನಾದರೂ ಅಗತ್ಯವಿದ್ದರೆ 9448467366ಗೆ ಕರೆ ಮಾಡಿ ಎಂದು ಹೇಳಿದ್ದಾರೆ.

ಜನಪ್ರತಿನಿಧಿಗಳನ್ನು ಕೊರೋನಾ ಬೆಂಬಿಡದೆ ಕಾಡುತ್ತಿದೆ. ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿಯವರಲ್ಲಿ ಮೊನ್ನೆಯಷ್ಟೇ ಕೊರೋನಾ ದೃಢಪಟ್ಟಿದ್ದು, ಅವರೂ ಸಹ ತಮ್ಮ ಫಾರ್ಮ್​ ಹೌಸ್​​ನಲ್ಲಿ ಸೆಲ್ಫ್​ ಕ್ವಾರಂಟೈನ್​​ನಲ್ಲಿದ್ದಾರೆ. ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಸಹ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

Follow Us:
Download App:
  • android
  • ios