ಗದಗ(ಸೆ.03): ವಿಷಪೂರಿತ ಸೌತೆಬಳ್ಳಿ ಸೇವಿಸಿ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ರೋಣ ತಾಲೂಕು ನರೇಗಲ್ ಪಟ್ಟಣದ ಬಳಿಯ ಜಮೀನಿನಲ್ಲಿ ಘಟನೆ ನಡೆದಿದ್ದು, ಕುರಿಗಳು ವಿಷಪೂರಿತ ಬಳ್ಳಿ ಸೇವಿಸಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಕಳೆದ ರಾತ್ರಿ ಜಮೀನಿನಲ್ಲಿದ್ದ ವಿಷಪೂರಿತ ಸೌತೆಬಳ್ಳಿಗಳನ್ನು ಸೇವಿಸಿದ್ದ ಕುರಿಗಳು ಸತ್ತುಬಿದ್ದಿವೆ. ಮಾಮೂಲಿಯಾಗಿ ಎಂದಿನಂತೆಯೇ ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳು ಸತ್ತು ಬಿದ್ದಿದ್ದು, ರೈತರನ್ನು ಆತಂಕಕ್ಕೆ ದೂಡಿತ್ತು. ವಿಷಪೂರಿತ ಬಳ್ಳಿಗಳನ್ನು ಸೇವಿಸಿಯೇ ಕುರಿಗಳು ಸತ್ತು ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

8 ಮಂದಿ ಸಾಮೂಹಿಕ ಅತ್ಯಾಚಾರ : ಗರ್ಭಿಣಿ ಮೇಕೆ ಸಾವು

ಕುರಿಗಳು ಬಸಪ್ಪ, ಯಲ್ಲಪ್ಪ, ಹನುಮಪ್ಪ ಹಾಗೂ ಕಳಕಪ್ಪ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ. ಗದಗದ ರೋಣ ತಾಲೂಕಿನ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.