ಯಾದಗಿರಿ: ಅಕ್ರಮ ಮರಳು ಸಾಗಾಟ, 3 ಟಿಪ್ಪರ್‌ ವಶ

ಕರ್ನಾಳ ಸೀಮಾಂತರದ ನದಿಪಾತ್ರದಿಂದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ನಗರ ಸಮೀಪದ ಸತ್ಯಂಪೇಟ ಕ್ರಾಸ್‌ನಲ್ಲಿ ಸಿಪಿಐ ಆನಂದ ವಾಗ್ಮೋಡೆ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ 2 ಟಿಪ್ಪರ್‌, ಇಬ್ಬರು ಚಾಲಕರನ್ನು ಮತ್ತೊಂದೆಡೆ ಲಕ್ಷ್ಮಿಪುರ ಕ್ರಾಸ್‌ನಲ್ಲಿ ಪಿಎಸ್‌ಐಗಳಾದ ಕೃಷ್ಣ ಸುಬೇದಾರ ನೇತೃತ್ವದಲ್ಲಿ ದಾಳಿ ನಡೆಸಿ ಟಿಪ್ಪರ್‌, ಓರ್ವ ಚಾಲಕನನ್ನು ಮಂಗಳವಾರ ಬೆಳಿಗ್ಗೆ ಲಕ್ಷ್ಮಿಪುರ ಕ್ರಾಸ್‌ ಬಳಿ ವಶಕ್ಕೆ ಪಡೆಯಲಾಗಿದೆ.

3 Tipper Seized Due to Illegal Sand Transport at Surapura in Yadgir grg

ಸುರಪುರ(ಜು.12):  ತಾಲೂಕಿನ ಕೃಷ್ಣಾ ನದಿ ಪಾತ್ರದಿಂದ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಪೊಲೀಸರು ವಿವಿಧೆಡೆ ದಾಳಿ ನಡೆಸಿ 3 ಟಿಪ್ಪರ್‌ಗಳನ್ನು ವಶಪಡಿಸಿಕೊಂಡ ಘಟನೆ ಸುರಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ತಾಲೂಕಿನ ಕರ್ನಾಳ ಸೀಮಾಂತರದ ನದಿಪಾತ್ರದಿಂದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ನಗರ ಸಮೀಪದ ಸತ್ಯಂಪೇಟ ಕ್ರಾಸ್‌ನಲ್ಲಿ ಸಿಪಿಐ ಆನಂದ ವಾಗ್ಮೋಡೆ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ 2 ಟಿಪ್ಪರ್‌, ಇಬ್ಬರು ಚಾಲಕರನ್ನು ಮತ್ತೊಂದೆಡೆ ಲಕ್ಷ್ಮಿಪುರ ಕ್ರಾಸ್‌ನಲ್ಲಿ ಪಿಎಸ್‌ಐಗಳಾದ ಕೃಷ್ಣ ಸುಬೇದಾರ ನೇತೃತ್ವದಲ್ಲಿ ದಾಳಿ ನಡೆಸಿ ಟಿಪ್ಪರ್‌, ಓರ್ವ ಚಾಲಕನನ್ನು ಮಂಗಳವಾರ ಬೆಳಿಗ್ಗೆ ಲಕ್ಷ್ಮಿಪುರ ಕ್ರಾಸ್‌ ಬಳಿ ವಶಕ್ಕೆ ಪಡೆಯಲಾಗಿದೆ. ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಸಿದ್ಧಲಿಂಗ ಭಾಗಣ್ಣ, ಶಹಾಪುರ ತಾಲೂಕಿನ ವಿಭೂತಿಹಳ್ಳಿಯ ಚಾಲಕರಾದ ಮಲ್ಲಪ್ಪ ರಾಮಣ್ಣ ಕಪಲಬೆಂಚಿ, ನಿಂಗಪ್ಪ ಹಣಮಂತ ಪೂಜಾರಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಯಾದಗಿರಿ: ಮಳೆ ಕೊರತೆ, ಬರದ ಭೀತಿ​ಯಲ್ಲಿ ಸುರ​ಪು​ರ ತಾಲೂಕು?

ರಾಯಲ್ಟಿ ಪಾವತಿಸದ ಎರಡು ಟಿಪ್ಪರ್‌ಗಳಲ್ಲಿ ಮರಳನ್ನು ಕರ್ನಾಳ ದಿಂದ ಸತ್ಯಂಪೇಟ ಮಾರ್ಗವಾಗಿ ಸಾಗಿಸಲಾಗುತ್ತಿತ್ತು. ಮರಳು ತುಂಬಿದ ಲಾರಿಗಳನ್ನು ತಡೆದು ಪರಿಶೀಲಿಸಿದಾಗ ರಾಯಲ್ಟಿತುಂಬದಿರುವುದು ಕಂಡುಬಂದಿದೆ. ಬಳಿಕ ಇಬ್ಬರು ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಸುರಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಟಿಪ್ಪರ್‌ಗಳ ಚಾಲಕರು ಮತ್ತು ಮಾಲೀಕರು ಸೇರಿಕೊಂಡು ಸರಕಾರದ ಸ್ವತ್ತಾದ ನೈಸರ್ಗಿಕ ಮರಳನ್ನು ಕಳ್ಳತನ ಮಾಡಿ ಸರಕಾರಕ್ಕೆ ರಾಜಧನ ತುಂಬದೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು. ಇದನ್ನು ಮನಗಂಡು ದಾಳಿ ನಡೆಸಿ ಲಾರಿ ಮತ್ತು ಚಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಪಿಐ ಆನಂದ ವಾಗ್ಮೋಡೆ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios