ಬಂಡೀಪುರ : ತಾಯಿಯಿಂದ ಬೇರ್ಪಟ್ಟ 3 ಹುಲಿ ಮರಿ ರಕ್ಷಣೆ - ಎರಡು ಸಾವು
ತಾಯಿಯಿಂದ ಬೇರ್ಪಟ್ಟಿದ್ದ ಮೂರು ಹುಲಿ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದು, ಅದರಲ್ಲಿ ಎರಡು ಹುಲಿ ಮರಿಗಳು ಸಾವನ್ನಪ್ಪಿವೆ
ಮೈಸೂರು (ಮಾ.29):ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ತಾಯಿಯಿಂದ ಬೇರ್ಪಟ್ಟ ಹುಲಿ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ತಾಯಿಯಿಂದ ಬೇರ್ಪಟ್ಟು ಶೋಚನೀಯ ಸ್ಥಿತಿಯಲ್ಲಿದ್ದ ಎರಡು ಹುಲಿ ಮರಿ ಹಾಗೂ ಸ್ಥಳದಲ್ಲೆ ಸಾವನಪ್ಪಿದ ಮತ್ತೊಂದು ಹುಲಿ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ತಂದಿದ್ದಾರೆ.
ಸಫಾರಿಗೆ ಹೋಗಿದ್ದವರಿಗೆ ಕಾಣ ಸಿಕ್ತು ಹುಲಿ ಬೇಟೆಯಾಡುವ ಅಪರೂಪದ ಈ ದೃಶ್ಯ.!
ಮೈಸೂರು ಜಿಲ್ಲೆಯ ಹೆಡಿಯಾಲ ಉಪವಿಭಾಗದ ನಗು ವಲಯದಲ್ಲಿ ಮರಿಗಳು ಪತ್ತೆಯಾಗಿದೆ. ಹುಲಿ ಮರಿಗಳನ್ನು ಮೃಗಾಲಯಕ್ಕೆ ತಂದು ಚಿಕಿತ್ದೆ ನೀಡಲಾಗಿದೆ. ಈ ವೇಳೆ ಒಂದು ಮರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.
ಮೂರು ಹುಲಿಮರಿಗಳಲ್ಲಿ ಎರಡು ಹುಲಿಮರಿಗಳು ಸಾವನ್ನಪ್ಪಿದ್ದು ಮತ್ತೊಂದು ಹುಲಿಮರಿ ಸುರಕ್ಷಿತವಾಗಿದೆ.
ಸ್ಥಳದಲ್ಲಿ ತಾಯಿ ಹುಲಿಗಾಗಿ ಕೂಂಬಿಂಗ್ ನಡೆಸಲಾಗಿದ್ದು ಸ್ಥಳದಲ್ಲಿ ಹುಲಿಯ ಹೆಜ್ಜೆಗಳು ಪತ್ತೆಯಾಗಿದೆ.