ಬಳ್ಳಾರಿ, (ಜೂನ್.06): ಎರಡು ಬೈಕ್​​​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೂರ್ಲಗುಂದಿ ಕ್ರಾಸ್​​ ಬಳಿ ನಡೆದಿದೆ.

ನಜೀರಸಾಬ(30), ಪಂಪಾಪತಿ (48) ಮತ್ತು ಅಖಿಲ್​​​​​ (04) ಮೃತ ದುರ್ದೈವಿಗಳು. ಗುರುವಾರ ಮಧ್ಯಾಹ್ನ ಅತಿ ವೇಗವಾಗಿ ಬಂದ ಎರಡು ಬೈಕ್​ಗಳು ಡಿಕ್ಕಿಯಾಗಿವೆ. 

ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರೆ, ಓರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.  ಗಾಯಾಳು ನಗರದ ಮಿಮ್ಸ್​​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.