ಎರಡೂವರೆ ತಿಂಗಳ ಕೂಸು ಸೇರಿ ಮೂವರ ಬಿಡುಗಡೆ
ಶುಕ್ರವಾರ ದಾವಣಗೆರೆಗೆ ಶುಭವಾಗಿ ಪರಿಣಮಿಸಿದ್ದು, ಎರಡೂವರೆ ಮಗು ಸೇರಿ ಮೂರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸದಾಗಿ ಯಾವೊಂದು ಪ್ರಕರಣವು ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಜೂ.13): ಕೊರೋನಾ ಸೋಂಕಿನಿಂದ ಗುಣಮುಖವಾದ ಎರಡೂವರೆ ತಿಂಗಳ ಹಸುಗೂಸು ಸೇರಿದಂತೆ ಮೂವರು ಜಿಲ್ಲಾ ಕೋವಿಡ್19 ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಹೊಸದಾಗಿ ಯಾವುದೇ ಕೇಸ್ ವರದಿಯಾಗಿಲ್ಲ.
ಕೂಸು ಪಿ-3638 ಹಾಗೂ ಪಿ-3640, 4339 ಸೋಂಕಿನಿಂದ ಗುಣಮುಖದ್ದಾರೆ. ವೈದ್ಯರು 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ, ಯಾರೊಂದಿಗೂ ಸಂಪರ್ಕದಲ್ಲಿ ಬರದಂತೆ ಕೂಸಿನ ತಾಯಿ ಇತರೇ ಇಬ್ಬರು ಗುಣಮುಖರಿಗೂ ಸಲಹೆ ನೀಡಿ, ಬೀಳ್ಕೊಟ್ಟರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 223 ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಇದರಲ್ಲಿ 6 ಜನರು ಸಾವನ್ನಪ್ಪಿದ್ದು, 171 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯಕ್ಕೆ ಒಟ್ಟು 46 ಸಕ್ರಿಯ ಕೇಸ್‌ಗಳು ಮಾತ್ರ ಇವೆ. ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಕೊರೋನಾ ವೈರಸ್ ಪರೀಕ್ಷೆಗೆ ಹೊಸ ಮಾನದಂಡ?
ಪಾಸಿಟಿವ್ ಪ್ರಕರಣಗಳು ಕಂಡುಬಂದ ಇಲ್ಲಿನ ರೈತರ ಬೀದಿ, ಆನೆಕೊಂಡ, ಎಸ್‌ಜೆಎಂ ನಗರ, ವಿನಾಯಕ ನಗರ, ಜಾಲಿ ನಗರ, ಶಿವಕುಮಾರಸ್ವಾಮಿ ಬಡಾವಣೆ, ಶೇಖರಪ್ಪ ನಗರ, ತರಳಬಾಳು ಬಡಾವಣೆ, ಬಸವರಾಜ ಪೇಟೆ, ಕೆಟಿಜೆ ನಗರ ಪೊಲೀಸ್ ಕ್ವಾರ್ಟಸ್, ಎಸ್ ಸ್ಕೆ$್ವಯರ್ ಅಪಾರ್ಟ್‌ಮೆಂಟ್, ದೇವರಾಜ ನಗರ, ಭಗತ್ ಸಿಂಗ್ ನಗರ, ನಾಡಿಗೇರ ಕಣ್ಣಿನ ಆಸ್ಪತ್ರೆ ರಸ್ತೆಗಳನ್ನು 14 ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ನಿತ್ಯ ಜ್ವರ, ಐಎಲ್‌ಐ, ಸಾರಿ ಸಮೀಕ್ಷೆ, 3 ದಿನಕ್ಕೊಮ್ಮೆ ಬಫರ್ ಝೋನ್ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.