ಮಂಡ್ಯ, [ಡಿ.02]: ಮಂಡ್ಯಕ್ಕೆ ಎದುರಾಗಿದ್ಯಾ ನಾಲೆ ಗಂಡಾಂತರ ಎಂಬ ಅನುಮಾನ ಜನರಲ್ಲಿ ಹುಟ್ಟತೊಡಗಿದೆ. ಯಾಕಂದ್ರೆ ಜಿಲ್ಲೆಯಲ್ಲಿ ನಾಲೆ ಬಳಿಯೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 1 ವಾರದಲ್ಲಿ ನಾಲೆ ಬಳಿಯೇ ಸಂಭವಿಸಿದ ಅಪಘಾತದಲ್ಲಿ 33 ಜನ ಸಾವನ್ನಪ್ಪಿದ್ದಾರೆ.

ತಡವಾಗಿ ಬೆಳಕಿಗೆ ಬಂತು ಮಂಡ್ಯ ದುರಂತದ ಹಿಂದಿನ ಕಾರಣ!

ನ.24ರಂದು ಮಂಡ್ಯದ ಕನಗನಮರಡಿಯಲ್ಲಿ ಖಾಸಗಿ ಬಸ್ಸೊಂದು ವಿ.ಸಿ.ನಾಲೆಗೆ ಬಿದ್ದು 30 ಮಂದಿ ಮೃತಪಟ್ಟಿದ್ದು, ಇಡೀ ಕರ್ನಾಟಕವೇ ಕಣ್ಣೀರು ಸುರಿಸಿತ್ತು. ಇದರ ಕರಾಳ ನೆನಪುಗಳು ಮಾಸವ ಮುನ್ನವೇ ಇಂದು [ಭಾನುವಾರ] ಮತ್ತೊಂದು ದುರಂತ ಸಂಭವಿಸಿದೆ.

ಮಂಡ್ಯ ತಾಲೂಕಿನ ಹೆಬ್ಬಕವಾಡಿಯ ವಿಸಿ ನಾಲೆಗೆ ಬೈಕ್ ಉರುಳಿ ಬಿದ್ದು, ಒಂದೇ ಕಟುಂಬದ ಮೂವರು ಅಜ್ಜಿ, ಮಗಳು, ಮೊಮ್ಮಗಳು ಸಾವನ್ನಪ್ಪಿದ್ದಾರೆ. ಲೋಕಸರದ ನಾಗಮ್ಮ, ಅಂಬಿಕಾ, ಮಾನ್ಯತಾ ಮೃತರ ದುರ್ದೈವಿಗಳು.  

ಮಹದೇಶ್ವರ ದೇವಾಲಯದಿಂದ ವಾಪಾಸ್ಸಾಗುತ್ತಿದ್ದಾಗ ರಸ್ತೆ ಕ್ರಾಸಿಂಗ್ ವೇಳೆ ಬೈಕ್ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದೆ. ನಾಲೆಯಲ್ಲಿ ನೀರು ತುಂಬಿದ್ರಿಂದ ಹೊರಬರಲಾಗದೇ ಮೂವರು ಸಾವನ್ನಪ್ಪಿದ್ದಾರೆ.