ಬೆಂಗಳೂರು ( ಏ. 01)  ಬಿಬಿಎಂಪಿ ಆಯುಕ್ತರನ್ನು ಬದಲಾಯಿಸದ್ದ ಸರ್ಕಾರ ಮತ್ತಷ್ಟು ಐಎಎಸ್ ಮತ್ತು ಐಪಿಎಸ್ ವರ್ಗಾವಣೆ ಮಾಡಿದೆ.  ಶಿವಮೊಗ್ಗ ಎಸ್‌ಪಿ ಕೆಎಂ ಶಾಂತರಾಜು ಅವರನ್ನು ಪಶ್ಚಿಮ ವಿಭಾಗದ ಟ್ರಾಫಿಕ್ ಡೆಪ್ಯೂಟಿ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ಬಿಎಂ ಲಕ್ಷ್ಮೀ ಪ್ರಸಾದ್ ಅವರನ್ನು ಶಿವಮೊಗ್ಗ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ. ಯಾದಗಿರಿ ಜಿಲ್ಲೆ ಎಸ್‌ಪಿ ಸೋನಾವನೆ ಋಷಿಕೇಶ್ ಭಗವಾನ್  ಅವರನ್ನು ದಕ್ಷಿಣ ಕನ್ನಡ ಎಸ್‌ಪಿ ಯಾಗಿ ನೇಮಕ ಮಾಡಲಾಗಿದೆ.

ಬಿಬಿಎಂಪಿ ಆಯುಕ್ತರ ಬದಲಾವಣೆ ಮಾಡಿದ ಸರ್ಕಾರ, ಹೊಸಬರು ಯಾರು?

ಇನ್ನೂ ಐಎಎಸ್ ಅಧಿಕಾರಿಗಳ ವರ್ಗಾವಣೆಯೂ ನಡೆದಿದೆ. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಜಿ ಕುಮಾರ್ ಅವರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿಯಾಗಿದ್ದ ಮಣಿವಣ್ಣನ್ ಅವರನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.