ಬೆಂಗಳೂರು (ಮಾ.​ 31) ರಾಜ್ಯ ಸರ್ಕಾರ  ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು ಮೇಜರ್ ಸರ್ಜರಿ ಮಾಡಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ 17 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. 

ಮಂಜುನಾಥ್​ ಪ್ರಸಾದ್​ ಆಯುಕ್ತರಾದ ನಂತರ ಬಿಬಿಎಂಪಿಯಲ್ಲಿ  ಬದಲಾವಣೆ ಗಾಳಿ  ಬೀಸಿತ್ತು ಎಂದು ವರದಿಗಳಾಗಿದ್ದವು. ಬಿಬಿಎಂಪಿ ಜನಪ್ರತಿನಿಧಿಗಳ ಆಡಳಿತಾವಧಿ ಸಹ ಮುಗಿದಿತ್ತು.  ಪ್ರಸಾಸ್ ಅವರನ್ನು ಬಿಬಿಎಂಪಿಯಿಂದ ಎತ್ತಂಗಡಿ ಮಾಡಿದ್ದು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ.

UPSC  ಹೊಸ ಹುದ್ದೆಗಳಿವೆ, ಅರ್ಜಿ ಹಾಕಿ

ಮಂಜುನಾಥ್​ ಪ್ರಸಾದ್​ ಸ್ಥಾನದಲ್ಲಿ ಮತ್ತೋರ್ವ ಹಿರಿಯ ಐಎಎಸ್​ ಅಧಿಕಾರಿ ಗೌರವ್​ ಗುಪ್ತಾ ಅವರನ್ನು ನೇಮಕ ಮಾಡಲಾಗಿದ್ದು ಬಿವಿಎಂಪಿ ಆಯುಕ್ತರಾಗಿದ್ದಾರೆ. . ಇದಲ್ಲದೆ, ಎಚ್. ಎನ್ ಗೋಪಾಲಕೃಷ್ಣ ಅವರನ್ನು ಐಟಿಬಿಟಿ ನಿರ್ದೇಶಕರನ್ನಾಗಿ, ಎಸ್. ಹೊನ್ನಾಂಬ ಅವರನ್ನು ಗಣಿ ಮತ್ತು ಭೂ ವಿಜ್ಞಾನ ನಿರ್ದೇಶಕಿಯನ್ನಾಗಿ, ಸಿಂಧು ಬಿ ರೂಪೇಶ್ ಅವರನ್ನು ಪ್ರವಾಸೋದ್ಯಮ‌‌ ಇಲಾಖೆ ನಿರ್ದೇಶಕಿಯನ್ನಾಗಿ ನೇಮಕ ಮಾಡಿ ಆದೇಶ   ಹೊರಡಿಸಲಾಗಿದೆ.