ಮಂಡ್ಯ(ಜ.14): ಮಂಡ್ಯ ಹಾಗೂ ನಾಗಮಂಗಲ ತಾಲೂಕಿನ ಗ್ರಾಮಗಳ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ಈ ಕುರಿತಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ದುದ್ದ ಹೋಬಳಿಯ ಕೊಪ್ಪಲು ಗ್ರಾಮದ ನಿವಾಸಿ ಭವ್ಯಶ್ರೀ(18) ಎಂಬುವವರು 2019 ನವೆಂಬರ್‌ 15 ರಿಂದ ಕಾಣೆಯಾಗಿದ್ದಾರೆ.

ಈ ಬಗ್ಗೆ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭವ್ಯಶ್ರೀ 5.1 ಅಡಿ ಎತ್ತರ, ಗೋಧಿ ಮೈ ಬಣ್ಣ ಹಾಗೂ ಸಾಧಾರಣ ಮೈಕಟ್ಟನ್ನು ಹೊಂದಿದ್ದಾರೆ. ಕಾಣೆಯಾದ ದಿನದಂದು ಚೂಡಿದಾರ್‌ ಧರಿಸಿದ್ದರು. ಪಿಂಕ್‌ ಬಣ್ಣದ ಪ್ಯಾಂಟ್‌, ನೀಲಿ ಬಣ್ಣದ ಟಾಪ್‌ ಹಾಗೂ ಪಿಂಕ್‌ ಬಣ್ಣದ ಜರ್ಕಿನ್‌ ಧರಿಸಿದ್ದರು.

ಪ್ರಶಾಂತವಾಗಿದೆ ಬೇಬಿಬೆಟ್ಟ, ಮೆಷಿನ್, ಕ್ರಷರ್‌ಗಳು ನಿಶ್ಯಬ್ದ..!

ತಾಲೂಕಿನ ಎಸ್‌.ಕೆ.ಕೋಡಿಹಳ್ಳಿಯ ನಿವಾಸಿ ಪಲ್ಲವಿ(30) ಜನವರಿ 2 ರಂದು ಕಾಣೆಯಾಗಿದ್ದಾರೆ. ಈ ಬಗ್ಗೆ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಲ್ಲವಿ 5.1 ಅಡಿ ಎತ್ತರ, ಎಣ್ಣೆಗೆಂಪು ಹಾಗೂ ದುಂಡು ಮುಖವನ್ನು ಹೊಂದಿದ್ದಾರೆ. ಕಾಣೆಯಾದ ದಿನದಂದು ಪಿಂಕ್‌ ಬಣ್ಣದ ಪ್ಯಾಂಟ್‌, ಸಿಲ್ವರ್‌ ಬಣ್ಣದ ಟಾಪ್‌ ಹಾಗೂ ಸಿಲ್ವರ್‌ ಬಣ್ಣ ಮಿಶ್ರಿತ ವೇಲ್ ಧರಿಸಿದ್ದರು.

ನಾಗಮಂಗಲ ತಾಲೂಕು ಒಣಕೆರೆ ಹೋಬಳಿಯ ಚಿಣ್ಯ ಗ್ರಾಮದ ನಿವಾಸಿ ಪುಷ್ಪ(25) ಎಂಬುವವರು 2019 ಡಿಸೆಂಬರ್‌ 1 ರಂದು ಕಾಣೆಯಾಗಿದ್ದಾರೆ. 5 ಅಡಿ ಎತ್ತರ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟನ್ನು ಹೊಂದಿದ್ದಾರೆ. ಕಾಣೆಯಾದ ದಿನದಂದು ನೀಲಿ ಬಣ್ಣದ ಚುಡಿದಾರ್‌ ಟಾಪ್‌ ಹಾಗೂ ಕೆಂಪು ಬಣ್ಣದ ಪ್ಯಾಂಟ್‌ ಧರಿಸಿದ್ದರು. ಇವರುಗಳ ಸುಳಿವು ಸಿಕ್ಕಲ್ಲಿ ಪಶ್ಚಿಮ ಪೊಲೀಸ್‌ ಠಾಣೆ ದೂರವಾಣಿ ಸಂಖ್ಯೆ: 08232-224666ಗೆ ಮಾಹಿತಿ ನೀಡಲು ಕೋರಲಾಗಿದೆ.

ತುಮಕೂರು: ಗ್ರಾಮದಲ್ಲೇ ರಾಜಾರೋಷವಾಗಿ ಓಡಾಡ್ತಿವೆ ಚಿರತೆಗಳು..!