ಪ್ರಶಾಂತವಾಗಿದೆ ಬೇಬಿಬೆಟ್ಟ, ಮೆಷಿನ್, ಕ್ರಷರ್‌ಗಳು ನಿಶ್ಯಬ್ದ..!
ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ಬಹುದಿನಗಳಿಂದ ನಡೆಯುತ್ತಿದ್ದ 31 ಗಣಿಗಾರಿಕೆ ಹಾಗೂ ಸ್ಟೋನ್ ಕ್ರಷರ್‌ಗಳನ್ನು ಜಿಲ್ಲಾಡಳಿತ ಯಾವುದೇ ಮುಲಾಜಿಲ್ಲದೇ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಬೇಬಿ ಬೆಟ್ಟದ ಗಣಿಗಾರಿಕೆ ಸಂಪೂರ್ಣವಾಗಿ ಸ್ಥಬ್ಧಗೊಂಡಿದೆ. ಬೆಟ್ಟಪ್ರಶಾಂತವಾಗಿದೆ.
ಮಂಡ್ಯ(ಜ.14): ಕೃಷ್ಣರಾಜ ಸಾಗರ ಜಲಾಶಯದ ಆಯುಷ್ಯ ವೃದ್ಧಿಯಾಗಬೇಕಿದ್ದರೆ ಬೇಬಿ ಬೆಟ್ಟದ ಸುತ್ತಮುತ್ತಲಿನಲ್ಲಿ ಅವ್ಯಾಹತ ಮತ್ತು ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಗೆ ನಿರ್ಬಂಧ ಹೇರುವ ಅನಿವಾರ್ಯತೆ ಇತ್ತು ಎನ್ನುವುದು ಈಗ ಮನದಟ್ಟಾಗಿದೆ.
ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ಬಹುದಿನಗಳಿಂದ ನಡೆಯುತ್ತಿದ್ದ 31 ಗಣಿಗಾರಿಕೆ ಹಾಗೂ ಸ್ಟೋನ್ ಕ್ರಷರ್‌ಗಳನ್ನು ಜಿಲ್ಲಾಡಳಿತ ಯಾವುದೇ ಮುಲಾಜಿಲ್ಲದೇ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಬೇಬಿ ಬೆಟ್ಟದ ಗಣಿಗಾರಿಕೆ ಸಂಪೂರ್ಣವಾಗಿ ಸ್ಥಬ್ಧಗೊಂಡಿದೆ. ಬೆಟ್ಟಪ್ರಶಾಂತವಾಗಿದೆ.
ಅಧಿಕಾರ ಸಾಬೀತು:
ಜಿಲ್ಲಾಡಳಿತದ ಅಧಿಕಾರ ಮತ್ತು ತಾಕತ್ತನ್ನು ಸಾಬೀತು ಅವಕಾಶವನ್ನು ಸರಿಯಾದ ಸಮಯಕ್ಕೆ ಉಪಯೋಗಿಸಿಕೊಳ್ಳಲಾಗಿದೆ. ಈ ಹಿಂದೆ ಅನೇಕ ಜನ ಜಿಲ್ಲಾಧಿಕಾರಿಗಳು ಗಣಿ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದರು. ನಾಲ್ಕು ದಿನ ಗಣಿ ನಿಂತು ಹೋಗುತ್ತಿತ್ತು. ನಂತರ ಮತ್ತೆ ಹಗಲು ರಾತ್ರಿ ಎನ್ನದೇ ಗಣಿಗಾರಿಕೆ ಮಾಡಿ ಸಾಕಷ್ಟುದಂಧೆ ಮಾಡುತ್ತಿದ್ದರು. ಆದರೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತೆಗೆದುಕೊಂಡ ನಿಲುವು, ನಿರ್ಧಾರುಗಳು ಜಿಲ್ಲೆಯ ಪ್ರಕೃತಿ ಸಂಪತ್ತನ್ನು ಉಳಿಸಿದೆ.
ಎಲ್ಲವೂ ನಿಶ್ಯಬ್ಧ:
ಈಗ ಬೇಬಿ ಬೆಟ್ಟದ ಗಣಿಗಾರಿಕೆಗೆ ಬ್ರೇಕ್ ಹಾಕಿದ ಮೇಲೆ ಸದ್ಯಕ್ಕೆ ಗಣಿಗಾರಿಕೆ ಪ್ರದೇಶದಲ್ಲಿ ಯಾವುದೇ ಗಣಿ ಚಟುವಟಿಕೆಗಳು ನಡೆಯುತ್ತಿಲ್ಲ. ಬೆæಟ್ಟದಲ್ಲಿ ಯಾವುದೇ ಕ್ರಷರ್ ಮತ್ತು ಗಣಿ ಸ್ಫೋೕಟದ ಶಬ್ಧ ಈಗ ಕೇಳುತ್ತಿಲ್ಲ. ಧೂಳು ಇಲ್ಲದೆ ಪ್ರಶಾಂತ ವಾತಾವರಣ ಕಾಣಬಹುದು. ಎಲ್ಲವೂ ನಿಶ್ಯಬ್ಧ. ಒಂದು ವೇಳೆ ಜಿಲ್ಲಾಡಳಿತದ ಆದೇಶವನ್ನು ಮೀರಿ ಯಾರೂದರೂ ಅಕ್ರಮವಾಗಿ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದರೆ ತೆಗೆದುಕೊಳ್ಳುವ ಕಾನೂನು ಕ್ರಮಗಳಿಗೆ ಯಾರೂ ಹೊಣೆಯಲ್ಲ ಎಂಬ ಖಡಕ್ ಸೂಚನೆ ಎಲ್ಲರಿಗೂ ಬಿಸಿ ಮುಟ್ಟಿದೆ. ಅದನ್ನು ಮೀರಿ ಯಾರಾದರೂ ಗಣಿಗಾರಿಕೆ ನಡೆಸಿದರೆ ಕ್ರಿಮಿನಲ… ಮೊಕದ್ದಮೆ ಎದುರಿಸಬೇಕಾಗುತ್ತದೆ. ಈ ಎಚ್ಚರಿಕೆ ಎಲ್ಲರಲ್ಲೂ ಭಯ ಹುಟ್ಟಿಸಿದೆ.
ಅಧಿಕಾರಿಗಳ ತಂಡದ ಗಸ್ತು:
ತಾಲೂಕು ಆಡಳಿತ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಆ ಪ್ರದೇಶದಲ್ಲಿ ಕಂದಾಯ, ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಮೂರು ತಂಡಗಳನ್ನು ರಚಿಸಿದೆ. ಈ ತಂಡ ಸದಾ ಗಣಿಗಾರಿಕೆ ಪ್ರದೇಶದಲ್ಲಿ ಗಸ್ತು ಬಿಟ್ಟಿದ್ದಾರೆ. ಗಣಿಗಾರಿಕೆ ಪ್ರದೇಶಕ್ಕೆ ನಿರ್ಬಂಧ ಹಾಕುತ್ತಿದ್ದಂತೆಯೇ ಗಣಿಗಾರಿಕೆ ಪ್ರದೇಶದ ಸುತ್ತಲು ಜೆಸಿಬಿಗಳಿಂದ ಟ್ರಂಚ್ ತೆಗೆಸಿ ಯಾವುದೇ ವಾಹನಗಳು ಸಂಚರಿಸಂತೆ ಕ್ರಮವಹಿಸಿದ್ದಾರೆ. ಇದರಿಂದಾಗಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆಗೆ ಸಂಪೂರ್ಣವಾಗಿ ಬೇಕ… ಬಿದ್ದಂತಾಗಿದೆ.
ಕೂಲಿ ಕಾರ್ಮಿಕರ ಬದುಕು ದುಸ್ಥರ:
ಬೇಬಿಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯ ಕೆಲಸವನ್ನೇ ನಂಬಿಕೊಂಡಿದ್ದ ನೂರಾರು ಕೂಲಿಕಾರ್ಮಿಕರು, ಕೈಕುಳಿ ಮಾಡುವ ಕಲ್ಲು ಕುಟಿಕರು, ಟ್ರಾಕ್ಟರ್, ಟಿಪ್ಪರ್ ಮಾಲೀಕರು ಜೀವನ ನಡೆಸುವುದು ಕಷ್ಟವಾಗಿದೆ. ಕೆಲಸಕ್ಕಾಗಿ ಸ್ಥಳೀಯರು ಸೇರಿದಂತೆ ದೂರದ ಊರುಗಳಿಂದಲೂ ಸಹ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸಿ ಕೂಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈಗ ಕುಟುಂಬಗಳು ಕಷ್ಟದಲ್ಲಿವೆ.
ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಯ ಕಥೆ-ವ್ಯಥೆ
- ಬೇಬಿಬೆಟ್ಟದ ಅಮೃತ ಮಹಲ್ ಕಾವಲು ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಗಣಿಗಾರಿಕೆ
- ಮೆಗ್ಗರ್ ಹಾಗೂ ಬೋರ್ ಬ್ಲಾಸ್ಟರ್‌ಗಳನ್ನು ಬಳಸಿ ಅಕ್ರಮ ಗಣಿಗಾರಿಕೆ
- ಅಕ್ರಮ ಸ್ಟೋನ್ ಕ್ರಷರ್‌ಗಳನ್ನು ಸಹ ತೆರೆದು ಕಲ್ಲು ಕ್ರಷಿಂಗ್
- ಇಲ್ಲಿವೆ 40ಕ್ಕೂ ಅಧಿಕ ಕ್ರಷರ್‌ಗಳು, ಕೇವಲ 13-15 ಕ್ರಷರ್‌ಗಳಿಗೆ ಮಾತ್ರ ಫಾರಂ ‘ಸಿ’ ಹೊಂದಿವೆ. ಉಳಿದ ಕ್ರಷರ್‌ಗಳು ಅನುಮತಿ ಹೊಂದಿಲ್ಲ, ಇದು ಸರ್ಕಾರದ ಬೊಕ್ಕಸಕ್ಕೂ ವಂಚನೆ
- ಗಣಿಕಾರಿಕೆಯಿಂದ ಬರುವ ಶಬ್ಧದಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮನೆಗಳು ಬಿರುಕು, ಕ್ರಷರ್‌ನ ಧೂಳು ಮನುಷ್ಯರ ಆರೋಗ್ಯದ ಅಡ್ಡ ಪಡಿಣಾಮ, ಕೃಷಿಯ ಮೇಲೂ ಕರಿನೆರಳು
- ರೈತರ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ ಆರೋಪ
- ಇದನ್ನು ಪುಷ್ಟೀಕರಿಸುವಂತೆ ಕೆಆರ್‌ಎಸ್ ಆಸುಪಾಸಿನಲ್ಲಿ 2-3 ಸಲ ಭಾರೀ ಸದ್ದು
- ಶಬ್ಧದ ಪತ್ತೆಗೆ ಪ್ರಾಕೃತಿಕ ವಿಪತ್ತು ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ
- ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಿಂದಲೇ ಕೇಳಿಬಂದಿದೆ ಎಂಬ ವರದಿ
- ಬೇಬಿಬೆಟ್ಟದ ಗಣಿಗಾರಿಕೆಯನ್ನು ಸ್ಥಗಿತಕ್ಕೆ ಪ್ರಗತಿಪರ ಸಂಘಟನೆಗಳ ಹೋರಾಟ
- ಬೇಬಿಬೆಟ್ಟದ ರಾಮಯೋಗೀಶ್ವರಮಠದಲ್ಲಿ ನಿರ್ಮಾಣವಾಗುತ್ತಿರುವ ಗದ್ದುಗೆಯ ಸೆಂಟ್ರಿಂಗ್ ಕಂಬಗಳು ಗಣಿಗಾರಿಕೆಯ ಶಬ್ಧದಿಂದ ನೆಲಕ್ಕುರುಳಿವೆ.
- ಸಿಎಂ ಯಡಿಯೂರಪ್ಪ ಅವರ ಖಡಕ್ ಸೂಚನೆ ಮೇರೆಗೆ ಗಣಿಗಾರಿಕೆ ನಿಲ್ಲಿಸಿದ ಜಿಲ್ಲಾಡಳಿತ
ಬೇಬಿಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ನಿತ್ಯವೂ ನಾನು ಸೇರಿದಂತೆ ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸುತ್ತಿದ್ದೇವೆ. ಜತೆಗೆ ಅಧಿಕಾರಿಗಳ ತಂಡಗಳನ್ನು ಸಹ ನಿಯೋಜಿಸಲಾಗಿದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ತಿಳಿಸಿದ್ದಾರೆ.
ತುಮಕೂರು: ಉಚಿತ ಕಬ್ಬಿಗಾಗಿ ಮುಗಿ ಬಿದ್ದ ಜನ..!
ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದು ಸೂಕ್ತವಾಗಿದೆ. ಇದರಿಂದಾಗಿ ಕರಗಿಹೋಗುತ್ತಿದ್ದ ಬೇಬಿಬೆಟ್ಟಉಳಿದುಕೊಂಡಂತಾಗಿದೆ. ಪರಿಸರವು ರಕ್ಷಣೆಯಾಗಿದೆ. ಕೆಆರ್‌ಎಸ್ ಅಣೆಕಟ್ಟೆಅಪಾಯದಿಂದ ಮುಕ್ತವಾಗಿದೆ.
-ಬಿ.ಎಸ್. ಜಯರಾಮು