ಕಲಬುರಗಿ :  ಜಮೀನು ಹಂಚಿಕೆ ವಿಚಾರವಾಗಿ ದಾಯಾದಿಗಳ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. 

ಕಲಬುರಗಿಯ ಮೇದಕ ಗ್ರಾಮದಲ್ಲಿ  ತಂದೆ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈಯ್ಯಲಾಗಿದೆ.  ತೀವ್ರವಾಗಿ ಗಾಯಗೊಂಡ ಮತ್ತೋರ್ವ ಮಗ ಸೇಡಂ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. 

ಇದನ್ನೂ ಓದಿ | ಬೀದರ್: ದೇವಸ್ಥಾನದ ಕಲ್ಯಾಣ ಮಂಟಪದೊಳಗೆ ಪೂಜಾರಿ ಹತ್ಯೆ

ಹತರಾದವರನ್ನು ಮಲ್ಕಪ್ಪ ಚಿನ್ನಯ್ಯ (60), ಶಂಕ್ರಪ್ಪ ಮಲ್ಕಪ್ಪ (26) ಮತ್ತು ಚಿನ್ನಪ್ಪ ಮಲ್ಕಪ್ಪ (27) ಎಂದು ಗುರುತಿಸಲಾಗಿದೆ. ಜಮೀನು ವಿವಾದವೇ ದಾಯಾದಿಗಳ ನಡುವಿನ ಭೀಕರ ಹಿಂಸೆಗೆ ಕಾರಣ ಎನ್ನಲಾಗಿದೆ. 

ಸದ್ಯ ಸ್ಥಳಕ್ಕೆ ಮುಧೋಳ ಸಿಪಿಐ ತಮ್ಮಾರಾಯ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ.