ಬೀದರ್, [ಜೂನ್. 11]: ಬೀದರ್​ನ ಐತಿಹಾಸಿಕ ಶ್ರೀ ಕ್ಷೇತ್ರ ಪಾಪನಾಶ ಶಿವಲಿಂಗ ದೇವಸ್ಥಾನದ ಅರ್ಚಕರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ರಮೇಶ್ ಸ್ವಾಮಿ(52) ಕೊಲೆಯಾದ ಅರ್ಚಕ. ಬೀದರ್ ನಗರದಲ್ಲಿರುವ ಪ್ರಸಿದ್ಧ ಪಾಪನಾಶ ಶಿವಲಿಂಗ ದೇವಸ್ಥಾನದ ಕಲ್ಯಾಣ ಮಂಟಪದೊಳಗೆ ದುಷ್ಕರ್ಮಿಗಳು ರಮೇಶ್​ರನ್ನು ಹತ್ಯೆ ಮಾಡಿದ್ದಾರೆ. 

ಕೊಲೆಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಪೊಲೀಸ್​ ತನಿಖೆಯ ನಂತರವಷ್ಟೇ ಪ್ರಕರಣದ ಹಿಂದಿನ ಕಾರಣ ಬಹಿರಂಗವಾಗಲಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೀದರ್ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.