ಬಳ್ಳಾರಿ(ಫೆ.25): ಒಂದೇ ತಿಂಗಳಲ್ಲಿ ಒಂದೇ ಕುಟುಂಬದ ಮೂರು ಜನ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಇದೀಗ ಮನೆಯಲ್ಲಿ ಉಳಿದ ಮಂದಿ ಮನೆ ಬದಲಾಯಿಸಿ ವಾಸಿಸುತ್ತಿದ್ದಾರೆ.

ಮರಿಯಮ್ಮನಹಳ್ಳಿ ಕಾರು ಅಪಘಾತ ಘಟನೆಯಲ್ಲಿ ಸಾವಿಗೀಡಾಗಿದ್ದ ರವಿನಾಯ್ಕ್ ಮನೆಯಲ್ಲಿ ಸೂತಕದ ಛಾಯೆ ತಪ್ಪುತ್ತಿಲ್ಲ. ರವಿನಾಯ್ಕ್ ಸಾವಿಗೀಡಾದ ಹತ್ತು ದಿನದಲ್ಲೇ ರವಿನಾಯ್ಕ್ ಅಜ್ಜಿ ಕೂಡ ಮೃತಪಟ್ಟಿದ್ದಾರೆ. ರವಿ ನಾಯ್ಕ್ ಸಾವಿನ ನಂತರ ಹಾಸಿಗೆ ಹಿಡಿದಿದ್ದ ಅಜ್ಜಿ ಕೊಟ್ರಿಬಾಯಿ (65) ಮೃತಪಟ್ಟಿದ್ದಾರೆ. ಒಂದು ತಿಂಗಳ ಹಿಂದೆ ರವಿ ಸಹೋದರ ಮಂಜುನಾಯ್ಕ್ ಮೃತಪಟ್ಟಿದ್ದರು.

ಶಿಕಾರಿಪುರದಲ್ಲಿ ಭೀಕರ ಅಪಘಾತ: ಮೂವರು ಮಹಿಳೆಯರು ಸಾವು

ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವಿಗೀಡಾಗಿದ್ದ ಮಂಜು ಸಾವನ್ನಪ್ಪಿದ್ದರು. ಮುಂಜುನಾಯ್ಕ ಸಾವಿನ ಬಳಿಕ ರವಿ ನಾಯ್ಕ ಮೃತಪಟ್ಟಿದ್ದನು. ಇದೀಗ ಅಜ್ಜಿ ಕೊಟ್ರಿಬಾಯಿ ಸಾವನ್ನಪ್ಪಿದ್ದಾಳೆ. ಒಂದು ತಿಂಗಳ ಅವಧಿಯಲ್ಲಿ ಮೂರು ಸಾವು ನಡೆದಿದೆ. ಸಾವಿ‌ನ ಮೇಲೆ ಸಾವು ಕಾಣ್ತಿರೋ ರವಿನಾಯ್ಕ್ ಕುಟುಂಬ ಸಾಲು ಸಾಲು ಸಾವುಗಳಿಂದಾಗಿ ಸ್ವಂತ ಮನೆ ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.