ಶಿವಮೊಗ್ಗ(ಫೆ.25): ಶಿಕಾರಿಪುರದ ಕೊಪ್ಪದ ಕೆರೆಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದ ಮೂವರು ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ. ಮಹಿಳೆಯರು ಟಾಟಾ ಏಸ್‌ನಲ್ಲಿ ಸಂಚರಿಸುತ್ತಿದ್ದರು.

ಶಿಕಾರಿಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಶಿಕಾರಿಪುರದ ಕೊಪ್ಪದ ಕೆರೆಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದ ಟಾಟಾ ಏಸ್‌ ವಾಹನಕ್ಕೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

10 ತಿಂಗಳ ಹಸುಗೂಸನ್ನು ನೀರಿಗೆ ಮುಳುಗಿಸಿ, ತಾಯಿ ಆತ್ಮಹತ್ಯೆ

ಟಾಟ ಏಸ್ 15 7483 ಕ್ರಮ ಸಂಖ್ಯೆಯ ವಾಹನಕ್ಕೆ ಕೆಎ15 8478 ಕ್ರಮ ಸಂಖ್ಯೆ ಬಸ್ ಹಿಂಬದಿಯ ಡಿಕ್ಕಿಯಾಗಿದೆ. ಟಾಟಾ ಏಸ್‌ನಲ್ಲಿದ್ದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಕುಮಧ್ವತಿ ಸೇತುವೆ ಬಳಿ ನಡೆದ ಅಪಘಾತದಲ್ಲಿ ಶಿಕಾರಿಪುರದ ಜಯನಗರ ನಿವಾಸಿಗಳಾದ ಚಂದ್ರಕಲಾ (40), ಲಕ್ಷ್ಮೀ (40) ಹಾಗೂ ರೇಖಾ (45) ಮೃತ ಪಟ್ಟಿದ್ದಾರೆ. ಇತರ ಮೂವರಿಗೂ ಗಾಯಗಳಾಗಿವೆ.