ಬೆಂಗಳೂರು (ನ.15): ಇಂದಿನಿಂದ ಮೂರು ದಿನಗಳ ಕಾಲ ದಕ್ಷಿಣ ಒಳನಾಡಿದ ಕೆಲವೆಡೆ ಮಲೆಯಾಗುವ ಬಗ್ಗೆ ಹವಾಮನಾ ಇಲಾಖೆ ಮುನ್ಸೂಚನೆ ನೀಡಿದೆ. 

ಈಶಾನ್ಯ ಮಾರುತಗಳ ಎಪೆಕ್ಟ್ ನಿಂದಾಗಿ ಮೂರು ದಿನಗಳ ಕಾಲ  ದಕ್ಷಿಣ ಒಳನಾಡಿನಲ್ಲಿ ಮಳೆ ಸುರಿಯಲಿದೆ ಎಂದು ಸೂಚನೆ ನೀಡಲಾಗಿದೆ.

ಮಳೆ ಕೊಯ್ಲು ಅಳವಡಿಸಿಕೊಳ್ಳದವರಿಂದ ಕೋಟ್ಯಂತರ ರೂ. ವಸೂಲಿ..! ..

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ರಾಮನಗರದಲ್ಲಿ ಮಳೆಯಾಗಲಿದ್ದು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡದಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ. 

ಗದಗ: ಮನೆ ಬಿದ್ದು ವರ್ಷವಾದರೂ ಸಿಕ್ಕಿಲ್ಲ ಪರಿಹಾರ..!

ಹಗುರದಿಂದ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.  ಈಶಾನ್ಯ ಮಾರುತಗಳು ಬಂಗಾಳ ಉಪಸಾಗರದ ಮೂಲಕ ಹಾದು ಬರುವಾಗ ತೇವಾಂಶ ಹೊತ್ತು ತರುತ್ತವೆ . ಇದೇ ಕಾರಣದಿಂದ ಕೆಲವೆಡೆ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.