Asianet Suvarna News Asianet Suvarna News

ಮದ್ಯ ಪ್ರಿಯರಿಗೆ ಶಾಕ್ - 3 ದಿನ ಮದ್ಯ ಮಾರಾಟ ಬಂದ್ : ಎಲ್ಲಿ..?

ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಅಲ್ಲದೇ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. 

3 Days Liquor Sale Ban in Tumakuru  snr
Author
Berlin, First Published Oct 30, 2020, 2:23 PM IST

ತುಮಕೂರು (ಅ.30):  ಶಿರಾ ವಿಧಾನಸಭಾ ಉಪ ಚುನಾವಣಾ ಮತದಾನವು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ನಡೆಯಲು ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನವೆಂಬರ್‌ 1ರ ಸಂಜೆ 6 ಗಂಟೆಯಿಂದ ನವೆಂಬರ್‌ 3ರ ಮಧ್ಯರಾತ್ರಿ 12 ಗಂಟೆಯವರೆಗೆ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲಾ ಮದ್ಯದಂಗಡಿಗಳನ್ನು (ಸಿರಾ ಕೆಎಸ್‌ಬಿಸಿಎಲ್‌ ಡಿಪೋ ಒಳಗೊಂಡಂತೆ) ಮುಚ್ಚಿಸಿ ಮದ್ಯ ಮಾರಾಟ, ಸಾಗಾಣಿಕೆ, ಹಂಚಿಕೆ, ಶೇಖರಣೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ: ಕೆ. ರಾಕೇಶ್‌ ಕುಮಾರ್‌ ಅವರು ಆದೇಶಿಸಿದ್ದಾರೆ.
 
ಚೆಕ್‌ಪೋಸ್ಟ್‌ಗಳಿಗೆ ಸಿಇಒ ಭೇಟಿ

ತುಮಕೂರು: ಶಿರಾ ತಾಲೂಕು ವಿಧಾನ ಸಭಾ ಉಪ ಚುನಾವಣಾ ಸಂಬಂಧ ಕಳ್ಳಂಬೆಳ್ಳ - ಸೀಬಿ ಅಗ್ರಹಾರ ಮತ್ತು ಉಜ್ಜನಕುಂಟೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾ ಪಂಚಾಯತಿ ಸಿಇಒ ಶುಭಾ ಕಲ್ಯಾಣ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ಮದ್ಯ ಪ್ರಿಯರಿಗೆ ಶಾಕಿಂಗ್‌ ಸುದ್ದಿ: ಎಣ್ಣೆ ಮಾರಾಟ ಬಂದ್‌..! .

ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ / ಸಿಬ್ಬಂದಿಗಳ ಕಾರ್ಯನಿರ್ವಹಣೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಚಟುವಟಿಕೆಗಳ ವಿರುದ್ದ ಕ್ರಮವಹಿಸಿರುವ ಬಗ್ಗೆ ಪರಿಶೀಲಿಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಲು ಅವರು ಸೂಚಿಸಿದರು.

ಎಲ್ಲ ಸಿಬ್ಬಂದಿ/ಅಧಿಕಾರಿಗಳು ಕೋವಿಡ್‌-19ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಿರುವ ಸಿಸಿ ಟಿವಿಗಳ ಸುಸ್ಥಿತಿಯ ಬಗ್ಗೆ ಪ್ರತಿದಿನ ಪರಿಶೀಲನಾ ಕಾರ್ಯ ಕೈಗೊಳ್ಳಬೇಕು ಹಾಗೂ ಲಾಗ್‌ ಪುಸ್ತಕವನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ/ಪೋಲೀಸ್‌ ಹಾಗೂ ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು/ಸಿಬ್ಬಂದಿ ಹಾಜರಿದ್ದರು.

Follow Us:
Download App:
  • android
  • ios