ರಾಮನಗರ [ಜ.09]: ವಿದ್ಯುತ್ ಕಂಬಕ್ಕೆ ಕ್ಸೈಲೋ ಕಾರು ಡಿಕ್ಕಿಯಾಗಿ ಮೂವರು ಶಬರಿಮಲೆ ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ರಾಮನಗರದಲ್ಲಿ ನಡೆದಿದೆ. 

ರಾಮನಗರ ಜಿಲ್ಲೆ ಮಾಗಡಿ ತಲೂಕಿನ ಗುಡೇಮಾರನಹಳ್ಳಿ ಬಳಿಯಲ್ಲಿ ಶಬರಿಮಲೆಯಿಂದ ವಾಪಸಾಗುತ್ತಿದ್ದವರ ಕಾರು ಅಪಘಾತಕ್ಕೆ ಈಡಾಗಿದೆ. ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು , 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. 

ಮೂವರು ಗಾಯಾಳುಗಳ ಗುರುತು ಪತ್ತೆಯಾಗಿದ್ದು, ಕೇಶವ, ಮಹಾಬಲ, ರಾಘವೇಂದ್ರ ಎನ್ನಲಾಗಿದ್ದು, ಎಲ್ಲರೂ ಮಂಗಳೂರು ಅಂಕಿ ಮೂಲದವರೆನ್ನಲಾಗಿದೆ. 

ಸಿನಿಮಾ ನಿರ್ದೇಶಕನ ಜತೆ ಪರಾರಿಯಾದ ನಟಿ: ಅಜ್ಜಿ ಆತ್ಮಹತ್ಯೆ...

ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ. 

ಚಾಲಕ ನಿದ್ದೆ ಮಂಪರಿನಲ್ಲಿದ್ದು, ವಾಹನ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.