ಕನಕಪುರದಲ್ಲಿ ಕ್ರೈಸ್ತ ಧರ್ಮದ ಮತಾಂತರ : VHP‌ ಕಾರ್ಯಕರ್ತರಿಂದ ಬೆಳಕಿಗೆ

ಹಿಂದೂ ಧರ್ಮೀಯರನ್ನು ಪುಸಲಾಯಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿರುವ ಘಟನೆ VHP ಹಾಗೂ ಭಜರಂಗದಳದ ಕಾರ್ಯಕರ್ತರಿಂದ ಬೆಳಕಿಗೆ ಬಂದಿದೆ. 

3 arrested for trying to convert family into Christianity snr

ಕನಕಪುರ (ಫೆ.01): ಇಲ್ಲಸಲ್ಲದ ಭಪವಸೆ, ಆಮಿಷಗಳನ್ನು ಒಡ್ಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಕ್ರೈಸ್ತ ಮಿಷನರಿಯ ಮೂವರನ್ನು ಭಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಭಾನುವಾರ ನಡೆದಿದೆ. 

ತಾಲೂಕಿನ ಶ್ರೀನಿವಾಸನ ಹಳ್ಳಿ ಗ್ರಾಮದ ನಿವಾಸಿ ರಾಮಕೃಷ್ಣ, ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಶ್ಯಾಮ್ ಹಾಗೂ ಆಂಧ್ರ ಮೂಲದ ಧನರಾಜ್ ಮತಾಂತರ ನಡೆಸುತ್ತಿದ್ದ ಆರೋಪಿಗಳು.

ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ! ..

 ನಗರದ ರಾಜಾರಾವ್‌ ರಸ್ತೆಯಲ್ಲಿ ಬಾಡಿಗೆಗೆ ಮನೆ ಪಡೆದು ಬಡವರು, ದೀನ ದಲಿತರು, ಅಲ್ಪಸಂಖ್ಯಾತ ಮುಗ್ಧ ಜನರಿಗೆ ಹಣ ಹಾಗೂ ಇಲ್ಲಸಲ್ಲದ ಭರವಸೆ, ಆಮಿಷಗಳನ್ನು ಒಡ್ಡಿ ಮತಾಂತರ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಬುದ್ಧಿಮಾತು ಹೇಳಿ ಬಿಡುಗಡೆಗೊಳಿಸಿದ್ದಾರೆ.

Latest Videos
Follow Us:
Download App:
  • android
  • ios