ಕೋವಿಡ್‌ ಅನು​ದಾನ ವಂಚನೆ ಪ್ರಕ​ರ​ಣ: ಮೂವರು ಅರೆಸ್ಟ್

ತಹಸಿಲ್ದಾರ್ ನಕಲಿ ಸಹಿ ಬಳಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರನ್ನು ಅರೆಸ್ಟ್ ಮಾಡಲಾಗಿದೆ. 

3 Arrested For Covid Compensation Fraud Case snr

ಯಾದಗಿರಿ (ಅ.05): ಸುರಪುರ ತಹಸೀಲ್ದಾರರ ನಕಲಿ ಸಹಿ ಬಳಸಿ ಕೋವಿಡ್‌ ಖರ್ಚಿಗೆಂದು ಮೀಸಲಿರಿಸಿದ್ದ ಅನುದಾನ .75.59 ಲಕ್ಷ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ‘ಸೆನ್‌’(ಸೈಬರ್‌ ಎಕಾನಾಮಿಕ್‌ ನಾರ್ಕೋಟಿಕ್‌ ಕ್ರೈಂ ಪೊಲೀಸ್‌ ಸ್ಟೇಷನ್‌) ಪೊಲೀಸರು ಇದೀಗ 75.15 ಲಕ್ಷ ರು. ಜಪ್ತಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

 ತಹಸೀಲ್ದಾರರ ಖಾತೆ ಇರುವ ಆ್ಯಕ್ಸಿಸ್‌ ಬ್ಯಾಂಕಿನ ಸಿಬ್ಬಂದಿ ಮತ್ತು ಮಹಾಲಕ್ಷ್ಮಿ ಎಂಟರ್‌ಪ್ರೈಸೆಸ್‌ನ ಇಬ್ಬರನ್ನು ಬಂಧಿಸಿರುವ ಬಗ್ಗೆ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಮತ್ತೆ 10 ಸಾವಿರ ಕೇಸ್, ಎಲ್ಲಿಗೆ ಹೋಗ್ತಿದೆ ಕರ್ನಾಟಕದ ಲೆಕ್ಕ! ...

 ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ‘ಸೆನ್‌’ ಪೊಲೀಸರು, ಇದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಪಾತ್ರ ಇರಬಹುದೇನೋ ಎಂಬ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಭಾರತದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳಿದ್ದು. ಸಾವಿರಾರು ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ

Latest Videos
Follow Us:
Download App:
  • android
  • ios