ಬೆಂಗಳೂರು (ಅ. 04) ಅನ್ ಲಾಕ್ ಕೊನೆಯ ಹಂತಕ್ಕೆ ಕೆಲ ದಿನ ಮಾತ್ರ ಬಾಕಿ ಉಳಿದಿದೆ. ಆದರೆ ಕರ್ನಾಟಕದಲ್ಲಿ ಕೊರೋನಾ ಮಾತ್ರ ಕಂಟ್ರೋಲ್ ಗೆ ಸಿಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.  ಭಾನುವಾರ ಮತ್ತೆ ದಾಖಲೆಯ  10,145 ಮಂದಿಗೆ  ಕೊರೋನಾ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,40,661 ತಲುಪಿದೆ.

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ  67 ಮಂದಿ  ಸಾವು ಕಂಡಿದ್ದಾರೆ.  ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9,286ಕ್ಕೆ ಏರಿಕೆಯಾಗಿದೆ.

ನಂದಿ ಬೆಟ್ಟಕ್ಕೆ ಹೋಗುವವರು ಎಲ್ಲ ಮರೆತರು

ಬೆಂಗಳೂರು ನಗರದಲ್ಲಿ 4,340 ಹೊಸ ಪ್ರಕರಣಗಳು ದಾಖಲಾಗಿದ್ದು ಭಾನುವಾರದ ಲೆಕ್ಕ.  ಬೆಂಗಳೂರಿನ ಸೋಂಕಿತರ ಸಂಖ್ಯೆ 2,50,040ಕ್ಕೆ ಏರಿಕೆಯಾಗಿದೆ.

ಇಂದು 7,287 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 5,15,782ಕ್ಕೆ ಏರಿಕೆಯಾಗಿದೆ. 1,15,574 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನ್ ಲಾಕ್ ಕೊನೆಯ ಹಂತ ಅಕ್ಟೋಬರ್ 15 ಕ್ಕೆ ತೆರೆದುಕೊಳ್ಳಲಿದ್ದು ಸಿನಿಮಾ ಮಂದಿರಗಳು, ಈಜುಕೋಳ ಮತ್ತು ಕ್ರೀಡಾ ತರಬೇತಿ ಶಿಬಿರಗಳು ಆರಂಭವಾಗಲಿದೆ ಎಂದು ಈ ಹಿಂದೆಯೇ ಕೇಂದ್ರ ಸರ್ಕಾರ ತಿಳಿಸಿದೆ.