ಭಟ್ಕಳದಲ್ಲಿ ಒಂದೇ ವಾರದಲ್ಲಿ 29 ಸೋಂಕಿತರು!
ಭಟ್ಕಳದಲ್ಲಿ ಮತ್ತೊಂದು ಕೋವಿಡ್-19ರ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಕಳೆದ ಎಂಟು ದಿನಗಳಲ್ಲಿ ಒಟ್ಟೂಭಟ್ಕಳ ತಾಲೂಕಿನದ್ದೇ 29 ಪ್ರಕರಣವಾದಂತಾಗಿದೆ.
ಉತ್ತರ ಕನ್ನಡ(ಮೇ 14): ಭಟ್ಕಳದಲ್ಲಿ ಮತ್ತೊಂದು ಕೋವಿಡ್-19ರ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಕಳೆದ ಎಂಟು ದಿನಗಳಲ್ಲಿ ಒಟ್ಟೂಭಟ್ಕಳ ತಾಲೂಕಿನದ್ದೇ 29 ಪ್ರಕರಣವಾದಂತಾಗಿದೆ.
ದಿನದಿಂದ ದಿನಕ್ಕೆ ಕೋವಿಡ್-ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದು ಭಟ್ಕಳದ ಜನರಲ್ಲಿ ಸಹಜವಾಗಿ ಆತಂಕ ಸೃಷ್ಟಿದೆ. 786 ಕೋವಿಡ್ ಸೋಂಕಿತ ವ್ಯಕ್ತಿಯಿಂದಾಗಿ 2 ವರ್ಷದ ಮಗುವಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 54 ಜನರನ್ನು ಬುಧವಾರ ಅಂಜುಮನ್ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದೆ. ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದವರ ವರದಿ ಇನ್ನೂ ಕೆಲವರದ್ದು ಬರಬೇಕಾಗಿದೆ. ಈ ಮಧ್ಯೆ ಜಾಲಿ ರಸ್ತೆಯಲ್ಲಿ ಕ್ಲಿನಿಕ್ ಹೊಂದಿ ಹಲವರಿಗೆ ಕೆಮ್ಮ, ಜ್ವರಕ್ಕೆ ಔಷಧಿ ನೀಡಿದ್ದ ಎನ್ನಲಾದ ಹೋಮಿಯೋಪತಿ ವೈದ್ಯನ ಆರೋಗ್ಯ ವರದಿ ನೆಗೆಟಿವ್ ಎಂದು ಹೇಳಲಾಗಿದೆ.
ಲಾಕ್‌ಡೌನ್ ಎಫೆಕ್ಟ್: ಕೂಲಿ ಮಾಡಿ ಬಡ ಕುಟುಂಬ ಸಲಹುತ್ತಿರುವ ಪದವೀಧರೆ..!
ಕೋವಿಡ್-19 ಲಕ್ಷಣ ಹೊಂದಿದವರನ್ನು ಖಡ್ಡಾಯವಾಗಿ ಕ್ವಾರಂಟೈನ್‌ನಲ್ಲಿಟ್ಟಿರುವುದರಿಂದ ಅವರ ಮನೆಯವರು ಮತ್ತು ಹತ್ತಿರದ ಸಂಬಂಧಿಕರು ಹೊರತುಪಡಿಸಿ ಸಮುದಾಯಕ್ಕೆ ಹರಡಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೂ ತೀವ್ರ ನಿಗಾ ಇಡಲಾಗಿದೆ. ಹೊರರಾಜ್ಯದಿಂದ ಬಂದವರನ್ನು ಹೋಟೆಲ್ ಕ್ವಾರಂಟೈನ್‌ನಲ್ಲಿಡಲಾಗಿದ್ದರೆ. ಹೊರ ಜಿಲ್ಲೆಯಿಂದ ಬಂದವರನ್ನು ಮನೆಯಲ್ಲೇ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಭಟ್ಕಳ ಕೋವಿಡ್-19ರ ಪ್ರಕರಣದಲ್ಲಿ ಹಾಟ್‌ಸ್ಪಾಟ್ ಆಗಿರುವುದರಿಂದ ಸೀಲ್‌ಡೌನ್‌ನಂತಹ ಬಿಗು ಕ್ರಮ ಕೈಗೊಳ್ಳಲಾಗಿದೆ.
ಮೇನಲ್ಲೇ ದೇಶಕ್ಕೆ ಮುಂಗಾರು ಮಳೆ? ವಾಡಿಕೆಗಿಂತ ಮೊದಲೇ ಪ್ರವೇಶ ಸಾಧ್ಯತೆ
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನರೂ ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಇದ್ದಾರೆ. ಕೇಂದ್ರ ಸರ್ಕಾರ ಮೇ 17ರ ನಂತರವೂ ಲಾಕಡೌನ್ ಮುಂದುವರಿಯುವುದು ಎಂದು ಘೋಷಣೆ ಮಾಡಿರುವುದರಿಂದ ರೆಡ್‌ಝೋನ್‌ನಲ್ಲಿರುವ ಭಟ್ಕಳಿಗರು ಮತ್ತಷ್ಟುದಿನ ಕೋವಿಡ್ ಸೋಂಕನ್ನು ಓಡಿಸಲು ಮನೆಯಲ್ಲೇ ಇರಬೇಕಾಗಿರುವುದು ಅನಿವಾರ್ಯವಾಗಿದೆ.