ಒತ್ತುವರಿದಾರರ ವಿರುದ್ಧ ಅರಣ್ಯ ಕಾಯ್ದೆ ಅನ್ವಯ ಮೊಕದ್ದಮೆ ದಾಖಲು ಮಾಡಿ ವಿಚಾರಣೆ ನಡೆಸಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರು ನಗರ ವಿಭಾಗದಲ್ಲಿ 18 ಪ್ರಕರಣಗಳಲ್ಲಿ ಒತ್ತುವರಿದಾರರು ಒತ್ತುವರಿ ತೆರವು ಮಾಡದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ
ವಿಧಾನ ಪರಿಷತ್(ಜು.11): ಬೆಂಗಳೂರು ನಗರ ಜಿಲ್ಲೆಯಲ್ಲಿ 1978ರ ನಂತರ 1051 ಪ್ರಕರಣಗಳಲ್ಲಿ 2871.37 (ಎಕರೆ-ಗುಂಟೆ) ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬಿಜೆಪಿಯ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 1978ರ ಪೂರ್ವದಲ್ಲಿ ಬೆಂಗಳೂರು ನಗರ ಹಾಗೂ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದಲ್ಲಿ ಯಾವುದೇ ಒತ್ತುವರಿ ಪ್ರಕರಣ ಪ್ರಕರಣಗಳು ಇಲ್ಲ. ಆದರೆ 1978ರ ನಂತರ ಬೆಂಗಳೂರು ಉತ್ತರ ತಾಲೂಕಿನಲ್ಲಿ 65 ಪ್ರಕರಣಗಳಲ್ಲಿ 45.01 ಎಕರೆ, ಬೆಂಗಳೂರು ಉತ್ತರ (ಅಪರ) ಯಲಹಂಕ 20 ಪ್ರಕರಣದಲ್ಲಿ 59 ಎಕರೆ, ಬೆಂಗಳೂರು ಪೂರ್ವ 250 ಪ್ರಕರಣಗಳಲ್ಲಿ 570 ಎಕರೆ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 283 ಪ್ರಕರಣಗಳಲ್ಲಿ 1277.33 ಹಾಗೂ ಆನೇಕಲ್ ತಾಲೂಕಿನಲ್ಲಿ 86 ಪ್ರಕರಣದಲ್ಲಿ 332.28 ಎಕರೆ ಒತ್ತುವರಿಯಾಗಿದೆ. ಅದೇ ರೀತಿ ಬನ್ನೇರುಘಟ್ಟರಾಷ್ಟ್ರೀಯ ಅರಣ್ಯ ವಿಭಾಗದಲ್ಲಿ 347 ಪ್ರಕರಣಗಳಲ್ಲಿ 587.15 (ಎಕರೆ-ಗುಂಟೆ) ಒತ್ತುವರಿಯಾಗಿದೆ ಎಂದು ವಿವರಿಸಿದರು.
ಕಲಬುರಗಿ ಹಸಿರೀಕರಣಕ್ಕೆ ಹೆಚ್ಚು ಕೆಲ್ಸ ಮಾಡಿ: ಖಂಡ್ರೆ ಕರೆ
ಒತ್ತುವರಿದಾರರ ವಿರುದ್ಧ ಅರಣ್ಯ ಕಾಯ್ದೆ ಅನ್ವಯ ಮೊಕದ್ದಮೆ ದಾಖಲು ಮಾಡಿ ವಿಚಾರಣೆ ನಡೆಸಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರು ನಗರ ವಿಭಾಗದಲ್ಲಿ 18 ಪ್ರಕರಣಗಳಲ್ಲಿ ಒತ್ತುವರಿದಾರರು ಒತ್ತುವರಿ ತೆರವು ಮಾಡದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮುನಿರಾಜುಗೌಡ ಅವರು, ಬೆಂಗಳೂರು ನಗರದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಸಾವಿರಾರು ಎಕರೆ ಅರಣ್ಯಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಮಾಡಿ 19 ವರ್ಷವಾದರೂ ತೆರವು ಮಾಡಲು ಆಗುತ್ತಿಲ್ಲ. ಇದರಲ್ಲಿ ಶಾಮೀಲು ಆದ ಅಧಿಕಾರಿಗಳು ಹಾಗೂ ಬಲಾಢ್ಯರನ್ನು ಮಟ್ಟಹಾಕಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಸದಸ್ಯರ ಮಾತಿಗೆ ಸ್ಪಂದಿಸಿದ ಸಚಿವ ಖಂಡ್ರೆ ಪೂಜೆ, ಆರಾಧನೆ ಸಲ್ಲಿಸಲು ಅವಕಾಶ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಅರಣ್ಯದ ಅಂಚಿನಲ್ಲಿ ವಾಸಿಸುವವರ ಅರಣ್ಯದೊಳಗೆ ತಮ್ಮ ಕುಟುಂಬದಲ್ಲಿ ಅಗಲಿದವರ ಸಮಾಧಿಗಳು ಇವೆ. ಅಲ್ಲಿ ಪೂಜೆ ಮಾಡಲು ಬಿಡುತ್ತಿಲ್ಲ. ಕೆಲವು ಕಡೆ ದೇವಸ್ಥಾನಗಳು ಇವೆ. ಅಲ್ಲಿ ಪೂಜೆ ಸಲ್ಲಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಹಾಗಾಗಿ ಅವರಿಗೆ ನಂಬಿಕೆಗೆ ಧಕ್ಕೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಅಂತ ಶಾಸಕ ಮುನಿರಾಜುಗೌಡ ತಿಳಿಸಿದ್ದಾರೆ.
