Mysuru : ಅ. 28ಕ್ಕೆ ನಡೆಯಲಿದೆ ಗ್ರಾಪಂ ಉಪಚುನಾವಣೆ

ಜಿಲ್ಲಾಧಿಕಾರಿ ಕಾರ್ಯಾಲಯ ವತಿಯಿಂದ ಜಿಲ್ಲೆಯ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ-1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ 41 ಇಜಿಪಿ-2022 ಅನ್ನು 2022 ರ ಅ. 3 ರಲ್ಲಿ ವೇಳಾಪಟ್ಟಿಪ್ರಕಟಿಸಲಾಗಿದೆ.

28 by election for the vacant  Grama Panchayat member seats in Mysuru snr

 ಮೈಸೂರು (ಅ.12) :  ಜಿಲ್ಲಾಧಿಕಾರಿ ಕಾರ್ಯಾಲಯ ವತಿಯಿಂದ ಜಿಲ್ಲೆಯ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ-1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ 41 ಇಜಿಪಿ-2022 ಅನ್ನು 2022 ರ ಅ. 3 ರಲ್ಲಿ ವೇಳಾಪಟ್ಟಿಪ್ರಕಟಿಸಲಾಗಿದೆ.

ಜಿಲ್ಲಾಧಿಕಾರಿಗಳು ಅ. 13 ರಂದು ಚುನಾವಣಾ ((Election)  ಅಧಿಸೂಚನೆ ಹೊರಡಿಸಲಿದ್ದು, ಅ. 18 ನಾಮಪತ್ರ (Nomination) ಸಲ್ಲಿಕೆಗೆ ಕೊನೆಯ ದಿನ, ಅ. 19 ರಂದು ನಾಮಪತ್ರ ಪರಿಶೀಲನೆ, ಅ. 22 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನ. ಮತದಾನ ಅವಶ್ಯವಿದ್ದರೆ ಅ. 28 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಅನಿವಾರ್ಯವಾದರೆ ಅ. 30 ರಂದು ಮರು ಮತದಾನ ನಡೆಯಲಿದೆ. ಅ. 31 ರಂದು ಮತ ಎಣಿಕೆ ನಡೆಯುವುದು.

ಜಿಲ್ಲೆಯಲ್ಲಿ (Mysuru ) ವಿವಿಧ ಕಾರಣಗಳಿಂದ ತೆರವಾಗಿರುವ ಸಂಬಂಧ ಉಪಚುನಾವಣೆ ನಡೆಯುವ 4 ಗ್ರಾಪಂಗಳಲ್ಲಿನ 4 ಸದಸ್ಯ ಸ್ಥಾನಗಳ ವಿವರ: ನಂಜನಗೂಡು ತಾಲೂಕು ರಾಂಪುರ ಗ್ರಾಪಂನ ರಾಂಪುರ-2 ಕ್ಷೇತ್ರ, ಬಿಳಿಗೆರೆ ಗ್ರಾಪಂನ ಕಾಮಹಳ್ಳಿಯಲ್ಲಿ ತೆರವಾಗಿರುವ ಕ್ಷೇತ್ರದಲ್ಲಿ ಖಾಲಿ ಇರುವ ಒಂದು ಸ್ಥಾನ, ಟಿ.ನರಸೀಪುರ ತಾಲೂಕು ಕೊತ್ತೇಗಾಲ ಗ್ರಾಪಂನ ಕೊತ್ತೇಗಾಲದಲ್ಲಿ ತೆರವಾದ ಕ್ಷೇತ್ರದಲ್ಲಿ ಖಾಲಿ ಇರುವ ಸ್ಥಾನ 1, ಕೆ.ಆರ್‌. ನಗರ ತಾಲೂಕು ಹಳಿಯಾರು ಗ್ರಾಪಂನ ಜವರೇಗೌಡನ ಕೊಪ್ಪಲಿನಲ್ಲಿ ತೆರವಾಗಿರುವ ಕ್ಷೇತ್ರದಲ್ಲಿ ಖಾಲಿ ಇರುವ ಸ್ಥಾನ 1ಕ್ಕೆ ಚುನಾವಣೆ ನಡೆಯಲಿದೆ.

ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಚುನಾವಣಾ ವೇಳಾಪಟ್ಟಿಯಂತೆ ಸಂಬಂಧಿಸಿದ ಗ್ರಾಪಂ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲು ನಿಗದಿಪಡಿಸಿರುವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವರು. ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಸಂಬಂಧಿಸಿದ ಗ್ರಾಪಂ ಕಚೇರಿ ವೇಳಾಪಟ್ಟಿಯಲ್ಲಿ ಸಲ್ಲಿಸಬಹುದು.

ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಗ್ರಾಪಂ ಚುನಾವಣೆಗಳ ಮತಪತ್ರದಲ್ಲಿ ನೋಟಾ (ಮೇಲಿನ ಯಾರೊಬ್ಬರಿಗೂ ಇಲ್ಲ) ಎಂದು ಮತ ಚಲಾಯಿಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದ್ದಾರೆ.

 -ನಿಯಂತ್ರಣ ಕೊಠಡಿ--

ಗ್ರಾಪಂ ಉಪಚುನಾವಣೆ-2022ರ (ಮೇ ಮಾಹೆ) ಸಂಬಂಧ ಯಾವುದೇ ಮಾಹಿತಿಗಳು ಹಾಗೂ ದೂರುಗಳ ನಿರ್ವಹಣೆಗಾಗಿ ಈ ಕೆಳಕಂಡಂತೆ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಯಾವುದೇ ದೂರು ಅಥವಾ ಮಾಹಿತಿ ನೀಡಲು ನಿಯಂತ್ರಣ ಕೊಠಡಿಗಳ ದೂರವಾಣಿಯನ್ನು ಸಂಪರ್ಕಿಸಬಹುದು.

ಜಿಲ್ಲಾಧಿಕಾರಿ ಕಚೇರಿ, ಕಂಟ್ರೋಲ್‌ ರೂಂ. 1077,ಉಪ ವಿಭಾಗಾಧಿಕಾರಿಗಳು, ಮೈಸೂರು ಉಪವಿಭಾಗ, ಮೈಸೂರು 0821-2422100, ಹುಣಸೂರು ಉಪ ವಿಭಾಗದ ಉಪ ವಿಭಾಗಾಧಿಕಾರಿ ದೂ. 08222-252073, ನಂಜನಗೂಡು ತಾಲೂಕು ಕಚೇರಿ 08221-223108, ಟಿ.ನರಸೀಪುರ ತಾಲೂಕು ಕಚೇರಿ ದೂ. 08227-260210, ಕೆ.ಆರ್‌. ನಗರ ತಾಲೂಕು ಕಚೇರಿ ದೂ. 08223-262234 ಸಂಪರ್ಕಿಸಬಹುದು.

-- ಚುನಾವಣಾ ನೀತಿ ಸಂಹಿತೆ-

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ, 1993ರ ಪ್ರಕರಣ 308ಎಸಿ ರಂತೆ ಚುನಾವಣಾ ಸಂಹಿತೆಯು ಅ. 13 ರಿಂದ 31 ರವರೆಗೆ ಜಾರಿಯಲ್ಲಿರುತ್ತದೆ. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ.

ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆ ಮೊದಲ ಅವಧಿವರೆಗೆ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಬೀಗವನ್ನು ್ನ ಜಿಲ್ಲಾಧಿಕಾರಿ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಪ್ರೇಟರಿಗೆ ಒಪ್ಪಿಸಬೇಕು.

Latest Videos
Follow Us:
Download App:
  • android
  • ios