ಶಿವಮೊಗ್ಗ(ಸೆ.15): ಗಣಪತಿ ವಿಸರ್ಜನೆ ವೇಳೆ ಬಂದೋಬಸ್ತಿಗೆಂದು ಹೊರ ಜಿಲ್ಲೆಗಳಿಂದ ಬಂದಿದ್ದ ಪೊಲೀಸರ ಮೊಬೈಲ್‌ ಮತ್ತು ಹಣ ಕಳವಾಗಿರುವ ಪ್ರಸಂಗ ನಡೆದಿದೆ. 

 ಹಿಂದೂ ಮಹಾಮಂಡಳಿಯ ಗಣಪತಿ ವಿಸರ್ಜನೆಯ ವೇಳೆ ಬಂದೋಬಸ್ತಿಗೆಂದು ಹೊರ ಜಿಲ್ಲೆಯಿಂದ ಸಾಕಷ್ಟು ಪೊಲೀಸರು ಆಗಮಿಸಿದ್ದರು. 

ಇವರಿಗೆ ಉಳಿದುಕೊಳ್ಳಲು ಆರ್‌ಎಂಎಲ್‌ ನಗರದ ಕಲ್ಯಾಣ ಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ತಡರಾತ್ರಿ ವೇಳೆ ಪೊಲೀಸರು ಗಾಢನಿದ್ದೆಗೆ ಜಾರುತ್ತಿದ್ದಂತೆ ಸುಮಾರು 3-4 ಗಂಟೆ ವೇಳೆಯಲ್ಲಿ ಪೊಲೀಸರಿಗೆ ಸೇರಿದ ಒಟ್ಟು 27 ಮೊಬೈಲ್‌ ಹಾಗೂ ಒಟ್ಟು 25 ಸಾವಿರ ನಗದು ಕಳವಾಗಿದೆ. 

ಕಳ್ಳರು ಸ್ಮಾರ್ಟ್‌ ಫೋನ್‌ಗಳಷ್ಟೇ ಕಳವಾಗಿದ್ದು, ಬೇಸಿಕ್‌ ಸೆಟ್‌ ಅನ್ನು ಮುಟ್ಟಿಲ್ಲ. ಈ ಬಗ್ಗೆ ಪೊಲೀಸರೇ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.