Ammonia Leakage: ಮಂಗ್ಳೂರಿನ ಸೀ ಫುಡ್ ಘಟಕದಲ್ಲಿ ಅನಿಲ ಸೋರಿಕೆ: 26 ಮಂದಿ ಅಸ್ವಸ್ಥ
* ಪ್ರದೇಶದಲ್ಲಿರುವ ಸೀ ಫುಡ್ ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆ
* ಅಮೋನಿಯಾ ಸೋರಿಕೆಯನ್ನು ನಿಯಂತ್ರಣಕ್ಕೆ ತಂದ ಅಗ್ನಿಶಾಮಕದಳದ ಸಿಬ್ಬಂದಿ
* ಎವರೆಸ್ಟ್ ಸೀಫುಡ್ ಫ್ಯಾಕ್ಟರಿಯಲ್ಲಿ ನಡೆದ ಘಟನೆ

ಮಂಗಳೂರು(ಜ.12): ಮಂಗಳೂರಿನ(Mangaluru) ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸೀ ಫುಡ್ ಸಂಸ್ಕರಣಾ ಘಟಕದಲ್ಲಿ(Sea Food Processing Plant) ಅಮೋನಿಯಾ ಸೋರಿಕೆಯಾದ(Ammonia Leakage) ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಆದರೆ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.
ಎವರೆಸ್ಟ್ ಸೀಫುಡ್ ಫ್ಯಾಕ್ಟರಿಯಲ್ಲಿ(Everest Seafood Factory) ಬೆಳಗ್ಗೆ ಅಮೋನಿಯಾ ರಾಸಾಯನಿಕ ಸೋರಿಕೆಯಾಗಿತ್ತು. ತಕ್ಷಣ ಫ್ಯಾಕ್ಟರಿಯಲ್ಲಿ ಸೈರನ್ ಮೊಳಗಿಸಿ ಅಲರ್ಟ್ ಮಾಡಲಾಯಿತು. ಇದರಿಂದಾಗಿ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದ(Employees) ನೌಕರರು ತುರ್ತಾಗಿ ಹೊರಗೆ ಬಂದಿದ್ದಾರೆ. ಈ ಫ್ಯಾಕ್ಟರಿಯಲ್ಲಿ ಸುಮಾರು 80 ಮಂದಿ ಉದ್ಯೋಗಿಗಳಿದ್ದು, ಇದರಲ್ಲಿ 26 ಮಂದಿ ಅಸ್ವಸ್ಥಗೊಂಡಿದ್ದಾರೆ(Unwell). ಅವರನ್ನು ಸ್ಥಳೀಯ ಮುಕ್ಕ ಖಾಸಗಿ ಆಸ್ಪತ್ರೆಗೆ(Hospital) ಸೇರಿಸಲಾಗಿದೆ. ಇವರಲ್ಲಿ 10 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಸ್ವಸ್ಥಗೊಂಡವರಲ್ಲಿ ಕರ್ನಾಟಕ(Karnataka) ಸೇರಿದಂತೆ ವಿವಿಧ ರಾಜ್ಯದವರಿದ್ದಾರೆ.
Crime News ಆನ್‌ಲೈನ್ ಲೋನ್‌ನವರು ಬಂದ್ರೆ ಹೇಳಿ ಅಂತ ಆಫೀಸ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿದ್ದು, ಅಮೋನಿಯಾ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಫ್ಯಾಕ್ಟರಿಯಲ್ಲಿದ್ದ ಎಲ್ಲ ನೌಕರರನ್ನು ಹೊರಗೆ ಕಳುಹಿಸಲಾಗಿದೆ. ಅಮೋನಿಯಾ ಹೇಗೆ ಸೋರಿಕೆಯಾಗಿದೆ ಎಂಬ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ. ಸೂಕ್ತ ತನಿಖೆ ನಡೆಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ದೇಗುಲ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿ 28 ಮಂದಿ ಅಸ್ವಸ್ಥ
ಕೋಲಾರ: ದೇವಸ್ಥಾನವೊಂದರಲ್ಲಿ (Temple) ಪ್ರಸಾದ ಸೇವಿಸಿದ 19 ಮಕ್ಕಳೂ ಸೇರಿ 28ಕ್ಕೂ ಹೆಚ್ಚು ಭಕ್ತಾದಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ (Hospital) ದಾಖಲಾಗಿರುವ ಘಟನೆ ಜ. 02ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ ತಯಾರಿಸಿದ ಇಬ್ಬರನ್ನು ಪೊಲೀಸರು (Police) ವಶಕ್ಕೆ ಪಡೆಯಲಾಗಿತ್ತು. ಯಲ್ದೂರು ಹೋಬಳಿಯ ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಸ್ಥಾನದಲ್ಲಿ ಗ್ರಾಮಸ್ಥರು ರಾತ್ರಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಭಕ್ತಾದಿಗಳಿಗೆ ಚಿತ್ರಾನ್ನ ಮತ್ತು ಕೇಸರಿ ಬಾತ್ ಪ್ರಸಾದ (Prasada) ವಿತರಿಸಲಾಗಿತ್ತು. ಇದನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ವಾಂತಿಯಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಗ್ರಾಮಸ್ಥರು ಆ್ಯಂಬುಲೆನ್ಸ್ ಮತ್ತು ಇತರೆ ವಾಹನಗಳ (Vehicle ) ಮೂಲಕ ಅಸ್ವಸ್ಥರನ್ನು ರಾತ್ರಿ 10ರ ವೇಳೆಗೆ ಶ್ರೀನಿವಾಸಪುರ (Shrinivaspura) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದರು.
Brown Rice: ದ.ಕ, ಉಡುಪಿ ಪಡಿತರದಾರರಿಗೆ ಸಂತಸದ ಸುದ್ದಿ ನೀಡಿದ ಕೇಂದ್ರ ಸರ್ಕಾರ
ಅಸ್ವಸ್ಥಗೊಂಡವರಲ್ಲಿ ವಿವಿಧ ಶಾಲೆಗಳ 19 ಮಕ್ಕಳು ಹಾಗೂ 9 ಮಂದಿ ವಯಸ್ಕರಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ 28 ಜನರಿಗೂ ಚಿಕಿತ್ಸೆ ಮುಂದೆವರೆದಿದ್ದು ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ. ಅಸ್ವಸ್ಥಗೊಂಡವರು ಆಸ್ಪತ್ರೆಗೆ ಬರುತ್ತಿದ್ದಂತೆ ವಿಷಯ ತಿಳಿದ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಸಿ. ವಿಜಯ ಹಾಗೂ ಟಿಹೆಚ್‌ಒ (THO) ಜಗದೀಶ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ದೇವಾಲಯಗಳು ಪ್ರಸಾದದಿಂದಲೇ ಫೇಮಸ್ :
ಭಾರತವು (India) ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಭಿನ್ನವಾಗಿರುವಂತೆಯೇ ಆಹಾರದ ವಿಚಾರದಲ್ಲಿಯೂ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಹಾಗೆಯೇ ರುಚಿಕರವಾದ ಅಡುಗೆಯನ್ನು ತಯಾರಿಸುವಲ್ಲೂ ಭಾರತೀಯರು ಎತ್ತಿದ ಕೈ. ಇಲ್ಲಿನ ದೇವಾಲಯಗಳಲ್ಲೂ ವೈವಿಧ್ಯಮಯ ರೀತಿಯ ಪ್ರಸಾದ ಹಂಚುವುದನ್ನು ನೋಡಿರಬಹುದು. ಭಾರತದಲ್ಲಿನ ದೇವಾಲಯಗಳು ಅತ್ಯಂತ ರುಚಿಕರವಾದ ಆಹಾರವನ್ನು ನೀಡುತ್ತವೆ. ಕೆಲವು ದೇವಾಲಯಗಳು ನಿಮಗೆ ಪ್ರಸಾದವನ್ನು ನೀಡುತ್ತವೆ. ಕೆಲವು ಆರೋಗ್ಯಕರವಾದ ಭೋಜನವನ್ನು ನೀಡುತ್ತವೆ. ಹಾಗಾದರೆ ಅತ್ಯಂತ ರುಚಿಕರವಾದ, ವಿಭಿನ್ನವಾದ ಪ್ರಸಾದನ್ನು ವಿತರಿಸುವ ಭಾರತದ ದೇವಾಲಯಗಳು ಯಾವೆಲ್ಲಾ..?