Crime News ಆನ್‌ಲೈನ್ ಲೋನ್ನವರು ಬಂದ್ರೆ ಹೇಳಿ ಅಂತ ಆಫೀಸ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ
* ಆಫೀಸ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ
* ಆನ್‌ಲೈನ್ ಲೋನ್ ಬಂದ್ರೆ ಹೇಳಿ ಎಂದು ಡೆತ್ ನೋಟ್ ಪತ್ತೆ
* ಮಂಗಳೂರಿನ ಕಿನ್ನಿಗೋಳಿ ಬಳಿಯ ಪಕ್ಷಿಕೆರೆ ನಿವಾಸಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಮಂಗಳೂರು, (ಜ.10): 26 ವರ್ಷದ ಯುವಕನೊಬ್ಬ ಡೆತ್ ನೋಟ್ ಬರೆದುಟ್ಟು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಮಂಗಳೂರು (Mangaluru) ಹೊರವಲಯದ ಕುಳಾಯಿ ಎಂಬಲ್ಲಿ ನಡೆದಿದೆ.
ಮಂಗಳೂರಿನ ಕಿನ್ನಿಗೋಳಿ ಬಳಿಯ ಪಕ್ಷಿಕೆರೆ ನಿವಾಸಿ ಸುಶಾಂತ್(26) ಇಂದು(ಸೋಮವಾರ) ಕಚೇರಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Suicide Cases: ಟಿವಿ ನೊಡ್ಬೇಡ ಅಂದಿದ್ದಕ್ಕೆ ಚಾಕು ಇರಿದುಕೊಂಡು ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡಿರುವ ಕುಳಾಯಿಯ ತನ್ನ ಸನ್ ರೈಸ್ ಕಾರ್ಪೋರೇಷನ್ ಕಚೇರಿಯಲ್ಲಿ ಸಾವಿಗೆ ಕಾರಣ ತಿಳಿಸಿ ಬರೆದ ಡೆತ್ ನೋಟ್ (Death Note) ಪತ್ತೆಯಾಗಿದ್ದು. ಆನ್ ಲೈನ್ ಲೋನ್ ಪಡೆದು ಸಮಸ್ಯೆಗೆ ಸಿಲುಕಿರುವ ಬಗ್ಗೆ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ.
'ಎಲ್ಲರೂ ಕ್ಷಮಿಸಿ, ನನಗೆ ಯಾರ ನಂಬಿಕೆಯನ್ನೂ ಉಳಿಸಲು ಆಗಲಿಲ್ಲ. ಹಣದ ವಿಷಯದಲ್ಲಿ ತುಂಬಾ ಸಮಸ್ಯೆ ಆಗಿದೆ. ಆನ್ ಲೈನ್ ಲೋನ್ ನವರು ಕರೆ ಮಾಡಿದ್ರೆ ಸತ್ತು ಹೋಗಿದ್ದಾನೆ ಅಂತ ತಿಳಿಸಿ ಎಂದು ಡೆತ್ ನೋಟ್‌ನಲ್ಲಿದೆ. ಈ ಬಗ್ಗೆ ನಿಖರ ಕಾರಣ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.
ಟಿವಿ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ವಿಚಿತ್ರ ಆತ್ಮಹತ್ಯೆ ಪ್ರಕರಣವೊಂದು ದಾಖಲಾಗಿದೆ. ಹೌದು, ಟಿವಿ ನೊಡ್ಬೇಡ ಅಂದಿದ್ದಕ್ಕೆ ಯುವಕನೊಬ್ಬ ಚಾಕು ಇರಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಜೆ.ಜೆ. ನಗರದ 11 ನೇ ಕ್ರಾಸ್ ನಲ್ಲಿ ಘಟನೆ ಕಳೆದ ರಾತ್ರಿ(ಭಾನುವಾರ) ನಡೆದಿದೆ. ಸಯ್ಯದ್ ಸಾಹೀಲ್ (23) ಎಂಬಾರನೇ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.
ಸಯ್ಯದ್ ಸಾಹೀಲ್ ಪ್ರತಿ ನಿತ್ಯ ಟೀವಿ ನೋಡವುದರಲ್ಲೇ ಮಗ್ನನಾಗಿರುತ್ತಿದ್ದನಂತೆ. ಹೀಗಾಗಿ ಸಯ್ಯದ್‌ನ ವರ್ತನೆಯಿಂದ ರೊಚ್ಚಿಗೆದ್ದ ತಂದೆ ಟೀವಿ ನೋಡಬೇಡ ಅಂತ ವಾರ್ನಿಂಗ್ ಮಾಡಿದ್ದರು. ಇಷ್ಟಕ್ಕೆ ಕುಪಿತಗೊಂಡ ಸಯ್ಯದ್ ಸ್ವತಃ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
ಅನಾರೋಗ್ಯದಿಂದ ಮನನೊಂದು ವ್ಯಕ್ತಿ ಸಾವು
ದಾಬಸ್‌ಪೇಟೆ(Dabaspet): ಅನಾರೋಗ್ಯದಿಂದ(Illness) ಬಳಲುತ್ತಿದ್ದ ವ್ಯಕ್ತಿಯೊಬ್ಬ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಂಪುರ ಹೋಬಳಿ ಕಂಬಾಳು ಗ್ರಾಮದ ಯತೀಶ್(32) ಆತ್ಮಹತ್ಯೆಗೊಳಗಾದ ದುರ್ದೈವಿಯಾಗಿದ್ದು, 9 ತಿಂಗಳುಗಳ ಹಿಂದೆ ವಿವಾಹವಾಗಿತ್ತು(Marriage) ಎನ್ನಲಾಗಿದೆ.
ಮೃತಪಟ್ಟ ಯತೀಶ್ ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಬಹಳ ದಿನಗಳಿಂದ ಅನಾರೋಗ್ಯಕ್ಕಿಡಾಗಿದ್ದರು ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕಡಿಮೆಯಾಗದ ಕಾರಣ ಮಾನಸಿಕವಾಗಿ ನೊಂದು ಜ.7ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ರಿಮಿನಾಶಕ ಸೇವಿಸಿ ಯುವತಿ ಆತ್ಮಹತ್ಯೆ
ಗೋಕರ್ಣ(Gokarna): ವಿಷ(Poison) ಸೇವಿಸಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ರುದ್ರಪಾದದ ಯುವತಿ ಕವಿತಾ ದೇವು ಗೌಡ (20) ಮೃತಪಟ್ಟ ಯುವತಿ. ಶನಿವಾರ ಮಧ್ಯಾಹ್ನ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು, ಆನಂತರ ಹೆಚ್ಚಿನ ಚಿಕಿತ್ಸೆಗೆ ಕುಮಟಾಕ್ಕೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸ ಫಲಕಾರಿಯಾಗಿಲ್ಲ. ಕುಮಟಾ(Kumta) ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು, ಪಿ.ಐ. ವಸಂತ ಆಚಾರ್ಯ, ಪಿಎಸ್‌ಐ ಸುಧಾ ಅಘನಾಶಿನಿ ಕುಮಟಾಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಯುವತಿ ಈ ಹಿಂದೆ ಸಹ ಆತ್ಮಹತ್ಯೆಗೆ ಯತ್ನಿಸಿ ಬದುಕಿದ್ದರು. ಅವರು ಪ್ರೀತಿಸುತ್ತಿದ್ದ ಹುಡುಗ ಏಳು ತಿಂಗಳ ಹಿಂದೆ ಸಮುದ್ರದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದರು ಎಂದು ತಿಳಿದು ಬಂದಿದೆ.