Chamarajanagar: ಚರ್ಮಗಂಟು ರೋಗಕ್ಕೆ 26 ಜಾನುವಾರು ಬಲಿ
ಚರ್ಮಗಂಟು ರೋಗಕ್ಕೆ ತಾಲೂಕಿನಾದ್ಯಂತ 26 ಜಾನುವಾರು ಬಲಿಯಾಗಿದ್ದು ಚರ್ಮಗಂಟು ರೋಗಕ್ಕೆ ಜಾನುವಾರುಗಳ ಮರಣ ಮೃದಂಗಕ್ಕೆ ರೈತರು ಆತಂಕಕ್ಕೀಡಾಗಿದ್ದಾರೆ. ಹೈನುಗಾರಿಗೆ ನಂಬಿ ಸಾವಿರಾರು ಮಂದಿ ಕುಟುಂಬ ಜೀವನ ಸಾಗುತ್ತಿದ್ದಾರೆ.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ (ಡಿ.04): ಚರ್ಮಗಂಟು ರೋಗಕ್ಕೆ ತಾಲೂಕಿನಾದ್ಯಂತ 26 ಜಾನುವಾರು ಬಲಿಯಾಗಿದ್ದು ಚರ್ಮಗಂಟು ರೋಗಕ್ಕೆ ಜಾನುವಾರುಗಳ ಮರಣ ಮೃದಂಗಕ್ಕೆ ರೈತರು ಆತಂಕಕ್ಕೀಡಾಗಿದ್ದಾರೆ. ಹೈನುಗಾರಿಗೆ ನಂಬಿ ಸಾವಿರಾರು ಮಂದಿ ಕುಟುಂಬ ಜೀವನ ಸಾಗುತ್ತಿದ್ದಾರೆ. ಚರ್ಮಗಂಟು ರೋಗ ತಾಲೂಕಿನಲ್ಲಿ ಅರ್ಭಟ ಹೆಚ್ಚಿದ್ದು ರೋಗ ಉಲ್ಬಣಕ್ಕೆ ರಾಸುಗಳು ಬಲಿಯಾಗುತ್ತಿವೆ. 45 ಗ್ರಾಮಗಳ ಸುತ್ತ 5 ಕಿಮಿ ವ್ಯಾಪ್ತಿಯಲ್ಲಿ ಈ ಚರ್ಮಗಂಟು ರೋಗ ಹರಡಿದೆ. ಇದು ಸಹಜವಾಗಿಯೇ ತಾಲೂಕಿನಲ್ಲಿ ಹೈನುಗಾರಿಕೆ ನಂಬಿದ ಕುಟುಂಬ ತತ್ತರಿಸಿ ಹೋಗಿವೆ.
ಕಾಲು ಬಾಯಿ ಜ್ವರದ ರೀತಿಯಲ್ಲಿ ಚರ್ಮಗಂಟು ರೋಗ ಇದೀಗ ಜಾನುವಾರುಗಳನ್ನು ಸಾವಿನ ಅಂಚಿಗೆ ತಳ್ಳುತ್ತಿದೆ. ಬೇಗೂರು ಹೋಬಳಿಯಲ್ಲಿ ಈ ರೋಗ ಬಾಧೆ ಹೆಚ್ಚಿದೆ. 73616 ಜಾನುವಾರುಗಳಲ್ಲಿ 45 ಕೇಂದ್ರೀಕೃತ ಗ್ರಾಮಗಳಲ್ಲಿ 27354 ಜಾನುವಾರಗಳಿವೆ. 1954 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಬಂದಿದೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ್‌ಕುಮಾರ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ಡಿ.3 ಶನಿವಾರ ಒಂದೇ ದಿನ 70 ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ.
Chamarajanagar: ಬಿಜೆಪಿ ಭದ್ರಕೋಟೆ ಸೃಷ್ಟಿಗೆ ಕೈ ಜೋಡಿಸಿ: ಸಚಿವ ಸೋಮಣ್ಣ
ಇಲ್ಲಿಯ ತನಕ ತಾಲೂಕಿನಲ್ಲಿ 26 ಜಾನುವಾರು ಸಾವನ್ನಪ್ಪಿವೆ. ಅಲ್ಲದೆ 665 ಜಾನುವಾರು ಚಿಕಿತ್ಸೆ ನೀಡಲಾಗುತ್ತಿದೆ. 45 ಕೇಂದ್ರೀಕೃತ ಗ್ರಾಮಗಳ 1263 ಜಾನುವಾರುಗಳು ಚರ್ಮಗಂಟು ರೋಗದಿಂದ ಗುಣಮುಖವಾಗಿವೆ. ಚರ್ಮಗಂಟು ರೋಗ ಇರುವ ಜಾನುವಾರುಗಳನ್ನು ಪಶು ಆಸ್ಪತ್ರೆಗೆ ತರದಂತೆ ರೈತರಿಗೆ ಹೇಳಿದ್ದು, ರೈತರ ಮನೆಗೆ ತೆರಳಿ ಚರ್ಮಗಂಟು ರೋಗ ಇರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಜಾನುವಾರುಗಳ ಜೊಲ್ಲಿನಿಂದ ರೋಗ ಹರಡುತ್ತದೆ ಎಂದು ಆಸ್ಪತ್ರೆಗೆ ಬರುವುದು ಬೇಡ ಎಂದು ರೈತರಿಗೆ ತಿಳಿಸಲಾಗಿದೆ ಎಂದರು.
ಲಸಿಕೆಗೆ ಬೇಡಿಕೆ ಸಲ್ಲಿಕೆ: ಚರ್ಮಗಂಟು ರೋಗದ ಹಿನ್ನಲೆ 25248 ಜಾನುವಾರುಗಳಿಗೆ ಚರ್ಮಗಂಟು ರೋಗದ ಲಸಿಕೆ ಹಾಕಲಾಗಿದೆ. 15 ಸಾವಿರ ಲಸಿಕೆ ಸ್ಟಾಕ್ ಇದೆ. ಇನ್ನೂ 25630 ಲಸಿಕೆ ಬೇಕು ಎಂದು ಬೇಡಿಕೆ ಇಲಾಖೆಗೆ ಸಲ್ಲಿಸಲಾಗಿದೆ ಎಂದರು.
ಬೇಗೂರಲ್ಲಿ ಹೆಚ್ಚು ಕೇಸು: ಬೇಗೂರಿನಲ್ಲಿ ಚರ್ಮಗಂಟು ರೋಗ ಹೆಚ್ಚಿದ್ದು ಅನೇಕ ಜಾನುವಾರು ಬಲಿಯಾಗಿವೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕಿನ ಮೂಲಕ ಚರ್ಮಗಂಟು ರೋಗ ಬಂದಿದೆ ಎನ್ನಲಾಗಿದ್ದು, ಸರಗೂರು ಭಾಗದ ಜಾನುವಾರು ಬೇಗೂರು ಭಾಗಕ್ಕೆ ಬಂದಾಗ ರೋಗ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಮುಂದುವರಿದ ಸಂತೆ ನಿಷೇಧ: ಗುಂಡ್ಲುಪೇಟೆ: ಜಾನುವಾರುಗಳಿಗೆ ಚರ್ಮಗಂಟು ರೋಗ ಹರುಡುತ್ತಿರುವ ಹಿನ್ನಲೆ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದ್ದ ಸಂತೆ ಹಾಗೂ ಜಾತ್ರೆಗೆ ಜಾನುವಾರುಗಳಿಗೆ ನಿಷೇಧ ಹೇರಲಾಗಿದೆ. ಚರ್ಮಗಂಟು ರೋಗ ಹತೋಟಿಗೆ ಬಾರದ ಹಿನ್ನಲೆ ಸಂತೆ ನಿಷೇಧ ಮುಂದುವರಿದಿದೆ.
ಕಾಲು ಬಾಯಿ ಜ್ವರ ನಿಯಂತ್ರಣಕ್ಕೆ ತಾಲೂಕಿನಾದ್ಯಂತ ಲಸಿಕೆ ಅಭಿಯಾನ ನಡೆದಿದೆ. ಈಗ ಚರ್ಮಗಂಟು ರೋಗದ ಬಗ್ಗೆ ರೈತರಿಗೆ ಇಲಾಖೆ ಜಾಗೃತಿ ಮೂಡಿಸಿದೆ. ಚರ್ಮಗಂಟು ರೋಗ ತಡೆಗೆ ಇಲಾಖೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ.
-ಡಾ.ಮೋಹನ್‌ಕುಮಾರ್, ಸಹಾಯಕ ನಿರ್ದೇಶಕ, ಪಶು ವೈದ್ಯಕೀಯ ಇಲಾಖೆ
Bandipur: ಬೇಸಿಗೆಯಲ್ಲಿ ಜೀರೋ ಫೈರ್‌ಗೆ ಸೂಚನೆ
ಸಿಬ್ಬಂದಿ ಕೊರತೆ ನಡುವೆಯೂ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಚರ್ಮಗಂಟು ರೋಗ ತಡೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಗಡಿ ಬೇಗೂರು ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ.
-ಡಾ. ಶಿವಣ್ಣ, ಉಪನಿರ್ದೇಶಕರು, ಪಶು ವೈದ್ಯಕೀಯ ಇಲಾಖೆ