ಬೆಂಗಳೂರು(ಮೇ  23)  ಕೊರೋನಾ ಲಸಿಕೆ  ನೀಡಿಕೆ ವಿಚಾರದಲ್ಲಿ ಕೆಲವು ಗೊಂದಲಗಳು ಕಾಡುತ್ತಿದ್ದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ
* ಕೋವಿಶೀಲ್ಡ್; ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆನ್ ಲೈನ್ ನೋಂದಣಿ ಮೂಲಕ ಲಸಿಕೆ ಪಡೆದುಕೊಳ್ಳಬಹುದು
* ಎರಡನೇ ಡೋಸ್ ಪಡೆಯುವವರು ನೇರವಾಗಿ ಹತ್ತಿರದ ಸೆಂಟರ್ ಗೆ ತೆರಳಬಹುದು
* ಕೋವ್ಯಾಕ್ಸಿನ್ ಮೊದಲನೇ ಡೋಸ್ ಲಭ್ಯ ಇಲ್ಲ
* 'ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆಯಬೇಕಾದವರಿಗೆ ಎಸ್‌ಎಂಎಸ್ ಬರಲಿದೆ.  ಎಸ್ ಎಂಎಸ್ ನಲ್ಲಿ ತಿಳಿಸಲಾಗುವ ಕೇಂದ್ರಕ್ಕೆ ತೆರಳಿ ಪಡೆದುಕೊಳ್ಳಬಹುದು

ಭಾರತೀಯ ಸೇನೆಯಿಂದ ಬೆಂಗಳೂರಲ್ಲಿ ಕೋವಿಡ್ ಕೇರ್ ಸೆಂಟರ್

18-44  ವರ್ಷದವರಿಗೆ ಲಸಿಕೆ
* ಸದ್ಯಕ್ಕೆ ಲಸಿಕೆ ಲಭ್ಯ ಇಲ್ಲ
*ಕೊರೋನಾ ವಾರಿಯರ್ಸ್ ಗೆ ಆದ್ಯತೆ ಮೇರೆಗೆ ನೋಡಲ್ ಅಧಿಕಾರಿಗಳ ಮೂಲಕ ನೀಡಲಾಗುತ್ತಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್  ಸ್ಪಷ್ಟೀಕರಣ ನೀಡಿದ್ದಾರೆ. ಲಸಿಕೆಗಳು ಪ್ರಸ್ತುತ ಲಭ್ಯವಿಲ್ಲ ಮತ್ತು ಮುಂಚೂಣಿ ಕಾರ್ಯಕರ್ತರು, ದುರ್ಬಲ ವರ್ಗದಂತಹಾ ಆದ್ಯತೆಯವರಿಗೆ ಗುರುತಿಸಲಾಗಿರುವ ಸದಸ್ಯರಿಗೆ ಲಸಿಕೆ ನೀಡುವ ದಿನಾಂಕ ಮತ್ತು ಸಮಯದ ಬಗ್ಗೆ ನೋಡಲ್ ಅಧಿಕಾರಿಗೆ ತಿಳಿಸಲಾಗುವುದು ಎಂದಿದ್ದಾರೆ.

ರೆಮ್ ಡೆಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದ್ದು ಸೋಂಕಿತ ವ್ಯಕ್ತಿಯ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗಿದೆ ಎಂದು SMS ಕಳುಹಿಸಲಾಗುತ್ತದೆ.  ಸಾರ್ವಜನಿಕರು ಪಾರದರ್ಶಕವಾಗಿ ಮಾಹಿತಿ ಪಡೆದುಕೊಳ್ಳಬಹುದು ಎಂಬ ವಿಚಾರವನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.