Asianet Suvarna News Asianet Suvarna News

Mysuru Development work : ನನ್ನ ಕ್ಷೇತ್ರಕ್ಕೆ 25 ಕೋಟಿ ರು.ಬಿಡುಗಡೆ : ಶಾಸಕ ಜಿ.ಟಿ. ದೇವೇಗೌಡ

  •  ಅಭಿವೃದ್ಧಿಗೆ  25 ಕೋಟಿ ರು.ಬಿಡುಗಡೆ : ಶಾಸಕ ಜಿ.ಟಿ. ದೇವೇಗೌಡ
  •  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
     
25 Crore released For Development Works in chamundeshwari snr
Author
Bengaluru, First Published Jan 5, 2022, 12:46 PM IST

 ಮೈಸೂರು (ಜ.05): ವಿಜಯನಗರ (Vijayanagar)  ಮೂರನೇ ಹಂತ ಸೇರಿ ಚಾಮುಂಡೇಶ್ವರಿ (Chamundeshwari) ಕ್ಷೇತ್ರದ ವ್ಯಾಪ್ತಿಯ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು . 25 ಕೋಟಿ ಬಿಡುಗಡೆ ಆಗಿದೆ ಎಂದು ಶಾಸಕ ಜಿ.ಟಿ. ದೇವೇಗೌಡ (GT  Devegowda)  ಹೇಳಿದರು.  ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರ ಪಾಲಿಕೆ -  ಎಂಡಿಎ (MDA) ವ್ಯಾಪ್ತಿಗೆ ಬಡಾವಣೆ ಸಿಲುಕಿದ್ದರಿಂದ ನಿವಾಸಿಗಳು ಎದುರಿಸುತ್ತಿದ್ದ ಅತಂತ್ರ ಪರಿಸ್ಥಿತಿ ನಿವಾರಣೆ ಆಗಿದೆ. ಎಂಡಿಎಗೆ ಹೋಗಬೇಕಿದ್ದವರು ನಗರ ಪಾಲಿಕೆಗೆ ತೆರಳಿ ತಮ್ಮ ಖಾತೆ, ಕಂದಾಯ ಪಾವತಿಸಬಹುದು. ವಿಜಯನಗರ (Vijayanagar), ಆಶ್ರಯ ಕಾಲೋನಿ, ಬೋಗಾದಿ, ಹಿನಕಲ್‌ ಹೊಸ ಬಡಾವಣೆ ಸೇರಿ ಇತರ ಕಡೆಗಳಲ್ಲಿ ರಸ್ತೆ, ಚರಂಡಿ, ಯುಜಿಡಿ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು, ಫೆಬ್ರವರಿಯಿಂದ ಕೆಲಸ ಆರಂಭ ಆಗಲಿದೆ ಎಂದರು.

ಉಂಡುವಾಡಿ ಕುಡಿಯುವ ನೀರು (Drinking water)  ಯೋಜನೆ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಚಾಮುಂಡೇಶ್ವರಿ (Chamundeshwari) ಕ್ಷೇತ್ರದಲ್ಲಿ ಮುಂದಿನ 50 ವರ್ಷಗಳವರೆಗೆ ನೀರಿನ ಸಮಸ್ಯೆ ನಿವಾರಣೆ ಆಗಲಿದೆ. ಈಗ ಬಡಾವಣೆಯು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಆಗಲಿದೆ. ಉಸ್ತುವಾರಿ ಸಚಿವರು ಈ ಸಮಸ್ಯೆ ಪರಿಗಣಿಸಿ ಶಾಶ್ವತ ಪರಿಹಾರ ನೀಡುವುದಾಗಿ ಹೇಳಿದರು.

ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌ ಮಾತನಾಡಿ, ನಗರದಲ್ಲಿ ಬೀದಿ ದೀಪಗಳಿಗೆ ಎಲ್‌ಇಡಿ (LED) ಬಲ್ಪ್‌ ಅಳವಡಿಸಲು 109 ಕೋಟಿ ಮಂಜೂರಾಗಿದೆ. ಹೊಸ ಬಡಾವಣೆಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು (Drinking water) ಮುಂತಾದ ಅಭಿವೃದ್ಧಿ ಕೆಲಸವನ್ನು  377 ಕೋಟಿ ಅನುದಾನದಲ್ಲಿ ಎಂಡಿಎದಿಂದ (MDA) ಒಂದು ಬಾರಿಗೆ ಮಾತ್ರ ಮಾಡುವ ಕೆಲಸಗಳಿವೆ. ಕೆಲವು ಕಾಮಗಾರಿ ಈಗಾಗಲೇ ನಗರ ಪಾಲಿಕೆಗೆ ಹಸ್ತಾಂತರಿಸಿರುವ ಬಡಾವಣೆಯಲ್ಲಿ ಇವೂ ಕೂಡ ಸೇರಿವೆ. ನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗೆ ಎಂಡಿಎ ಅನುದಾನ ಏಕೆ ಎಂದು ಸರ್ಕಾರದ ಹಂತದಲ್ಲಿ ಕೇಳಿದರು. ಕೆಲವು ಮೂಲಭೂತ ಸೌಲಭ್ಯ ಒದಗಿಸುವ ಮುನ್ನವೇ ನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಎಂಡಿಎಯಿಂದ ಆ ಕೆಲಸ ಮಾಡುವುದು ಅನಿವಾರ್ಯ ಎಂಬುದನ್ನು ಸಚಿವರಿಗೆ (Minister) ಮನವರಿಕೆ ಮಾಡಿ, ಎಲ್ಲಾ ಕಾಮಗಾರಿಯನ್ನು ತೆಗೆದುಕೊಳ್ಳಲು ಅನುಮೋದನೆ ಕೊಡಿಸಿದ್ದಾಗಿ ಅವರು ತಿಳಿಸಿದರು.

ಬಿದರಗೂಡಿನಿಂದ 120 ಎಂಎಲ್‌ಡಿ (MLD) ನೀರು ತರುವ ಯೋಜನೆ ಆರಂಭವಾಗಿದೆ. ಈ ಕಾಮಗಾರಿ ಮುಗಿದರೆ ನಗರದ ಹೊರ ವಲಯದ ಅರ್ಧ ಬಡಾವಣೆ ಸಮಸ್ಯೆ ಇತ್ಯರ್ಥವಾಗಲಿದೆ. ಬಹು ಮಹಡಿ ಮನೆಗಳ ನಿರ್ಮಾಣದ ಯೋಜನೆಯು ಸರ್ಕಾರದ (Govt) ಮುಂದಿದ್ದೂ ಶೀಘ್ರದಲ್ಲಿಯೇ ಅನುಮೋದನೆ ಕೊಡಿಸಬೇಕು ಎಂದು ಅವರು ಕೋರಿದರು.

ಎಂಡಿಎ ಆಯುಕ್ತ ಡಾ.ಡಿ.ಬಿ. ನಟೇಶ್‌ ಮೊದಲಾದವರು ಇದ್ದರು.

ವಿಜಯನಗರ (Vijayanagar)  3ನೇ ಹಂತವು ಎಂಡಿಎಯಿಂದ ನಗರಪಾಲಿಕೆ ವ್ಯಾಪ್ತಿಗೆ ಸೇರಿಸಿರುವುದು ಸಂತೋಷದ ಸಂಗತಿ. ಆದರೆ ಕಂದಾಯ ಪಾವತಿ, ಕಟ್ಟಡ ರಹದಾರಿ ಕೊಡುವಾಗ ಹೆಚ್ಚುವರಿ ದಂಡ ಹಾಕದಂತೆ ನೋಡಿಕೊಳ್ಳಬೇಕು. ಗರುಡಾಚಾರ್‌ ಬಡಾವಣೆ, ಸುಬ್ರಹ್ಮಣ್ಯೇಶ್ವರ ನಗರ, ಕಾವೇರಿ (cauvery) ಬಡಾವಣೆ ಸಮಸ್ಯೆ ನಿವಾರಿಸಬೇಕು. ಯುಜಿಡಿ ನೀರನ್ನು ಸಂಸ್ಕರಿಸಿ ಮಳೆ ನೀರು ಚರಂಡಿಗೆ ಬಿಡುವಂತೆ ಮಾಡಬೇಕು.

- ಬೆಕ್ಯಾ ರವಿಕುಮಾರ್‌, ಅಧ್ಯಕ್ಷರು, ವಿಜಯನಗರ ಕ್ಷೇಮಾಭಿವೃದ್ಧಿ ಸಂಘ.

  •  ಅಭಿವೃದ್ಧಿಗೆ  25 ಕೋಟಿ ರು.ಬಿಡುಗಡೆ : ಶಾಸಕ ಜಿ.ಟಿ. ದೇವೇಗೌಡ
  •  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
  • ವಿಜಯನಗರ ಮೂರನೇ ಹಂತ ಸೇರಿ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಬಡಾವಣೆಗಳಿಗೆ ಮೂಲ ಸೌಕರ್ಯ
  • ನಗರ ಪಾಲಿಕೆ- ಎಂಡಿಎ ವ್ಯಾಪ್ತಿಗೆ ಬಡಾವಣೆ ಸಿಲುಕಿದ್ದರಿಂದ ನಿವಾಸಿಗಳು ಎದುರಿಸುತ್ತಿದ್ದ ಅತಂತ್ರ ಪರಿಸ್ಥಿತಿ ನಿವಾರಣೆ 
  • ಎಂಡಿಎಗೆ ಹೋಗಬೇಕಿದ್ದವರು ನಗರ ಪಾಲಿಕೆಗೆ ತೆರಳಿ ತಮ್ಮ ಖಾತೆ, ಕಂದಾಯ ಪಾವತಿಸಬಹುದು
Follow Us:
Download App:
  • android
  • ios