ಮಹಾತ್ಮ ಗಾಂಧೀಜಿ ನಗರ ವಿಕಾಸ ಯೋಜನೆಯಡಿ 150 ಕೋಟಿ ಅಭಿವೃದ್ಧಿಗೆ ನೀಡಿದ್ದು, ಕೆ.ಆರ್‌.ಕ್ಷೇತ್ರಕ್ಕೆ 25 ಕೋಟಿ ನೀಡಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದರು. 

ಮೈಸೂರು (ಸೆ.23): ಮಹಾತ್ಮ ಗಾಂಧೀಜಿ ನಗರ ವಿಕಾಸ ಯೋಜನೆಯಡಿ 150 ಕೋಟಿ ಅಭಿವೃದ್ಧಿಗೆ ನೀಡಿದ್ದು, ಕೆ.ಆರ್‌.ಕ್ಷೇತ್ರಕ್ಕೆ 25 ಕೋಟಿ ನೀಡಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಅಂಗವಾಗಿ ಕೆ.ಆರ್‌. ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಎ.ರಾಮದಾಸ್‌ ಅವರು ಆಯೋಜಿಸಿರುವ ಮೋದಿ ಯುಗ ಉತ್ಸವದಲ್ಲಿ ಫಲಾನುಭವಿಗಳಿಗೆ ವಿವಿಧ ರೀತಿಯ ಸೌಲಭ್ಯ ವಿತರಿಸಿ ಅವರು ಮಾತನಾಡಿದರು. ಎಸ್‌ಎಚ್‌ಪಿ ಅಡಿ . 50 ಕೋಟಿ ನೀಡಿದ್ದೇವೆ. ಮಳೆ ಬಂದಾಗ ಅನಾಹುತ ನಿವಾರಿಸಲು . 46 ಕೋಟಿ ನೀಡಿದ್ದೇವೆ. 

ಪಿಡಬ್ಲ್ಯೂಡಿ ವತಿಯಿಂದ ಸಿಎಂ ಮನವೊಲಿಸಿ 50 ಕೋಟಿ ನೀಡಿದ್ದು ಕೂಡ ಚಾಲನೆ ಆಗಿದೆ. ಎಂಡಿಎ ವತಿಯಿಂದ ಒಟಿಎಂ ನಿರ್ಮಾಣಕ್ಕೆ . 20 ಕೋಟಿ ಸೇರಿ ಇನ್ನಿತರ ಅಭಿವೃದ್ಧಿ ಕಾರ್ಯಕ್ಕೆ 35 ಕೋಟಿ ನೀಡಿದ್ದೇವೆ. ಕೆ.ಆರ್‌. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಕೊಡುಗೆ ನೀಡಿದ್ದೇವೆ ಎಂದರು. ನಗರಕ್ಕೆ 69 ಸಾವಿರ ಬಲ್ಬ್‌ ಅಳವಡಿಸಿದ್ದೇವೆ. ರಿಂಗ್‌ ರಸ್ತೆ ಕತ್ತಲಲ್ಲಿತ್ತು. ನಾನು ಬಂದ ಬಳಿಕ ಆ ಸಮಸ್ಯೆ ಬಗೆಹರಿಸಿದ್ದೇವೆ. ನಗರದ ಕುಡಿಯುವ ನೀರಿಗೆ ಉಂಡುವಾಡಿ ಯೋಜನೆಗೆ 531 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದೇವೆ. ಕಬಿನಿಯಿಂದ ನೀರು ತರಲು 150 ಕೋಟಿ ಪ್ರಸ್ತಾವನೆ ಬಂದಿದೆ. ಅದೂ ಕೂಡ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

Mysuru: ಸುತ್ತಾಟವಿಲ್ಲದೆ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಸಚಿವ ಆರ್‌.ಅಶೋಕ್‌

ಮೈಸೂರು ಪಾರಂಪರಿಕ ನಗರವಾಗಿದ್ದು, ಅದಕ್ಕೆ ಚ್ಯುತಿ ಬಾರದಂತೆ ನಾವು ನಡೆದುಕೊಳ್ಳಬೇಕು. ನಮ್ಮ ದೇಶದ ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬರುತ್ತಿದ್ದು, ಅವರ ಆಗಮನದ ವೇಳೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ವಿರೋಧ ಪಕ್ಷದವರಿಗೆ ಮಾತನಾಡಲು ಎನೂ ಇಲ್ಲದೆ, ಆಧಾರ ರಹಿತ ಮಾತು ಆಡುತ್ತಿದ್ದಾರೆ. ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಬೇಕು. ಮುಖ್ಯಮಂತ್ರಿಗಳು 15 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಗೆ ನೀಡಿದ್ದಾರೆ. ರಾಜ್ಯದಲ್ಲಿ ಸಮೃದ್ಧಿಯಾಗಿ ಮಳೆಯಾಗಿದ್ದು, ಇದಕ್ಕೆ ನಾಡ ದೇವತೆ ಚಾಮುಂಡೇಶ್ವರಿಯ ಕೃಪೆ ಇದೆ ಎಂದರು.

ರಾಮದಾಸ್‌ರಿಂದ ವಿಶೇಷ ಕಾರ್ಯಕ್ರಮ: ರಾಜ್ಯದಲ್ಲಿ ರಾಮದಾಸ್‌ ಅವರು ಏನಾದರೂ ಒಂದು ವಿಶೇಷ ಕಾರ್ಯಕ್ರಮ ಮಾಡುತ್ತಾರೆ. ಮೋದಿ ಅವರ ಸಂಕಲ್ಪದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆ ತಲುಪಬೇಕು ಎಂಬ ಆಶಯ ಈಡೇರಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಬೆಂಗಳೂರಿನವನಾದರೂ ಇಂತಹ ಕಾರ್ಯಕ್ರಮ ಮಾಡಲು ಆಗುತ್ತಿಲ್ಲ. ಕ್ಷೇತ್ರದ ರಸ್ತೆ ಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್‌ ಕೊಡುವುದು, ಹೊಲಿಗೆ ಯಂತ್ರ ವಿತರಿಸುವ ಮೂಲಕ ಭದ್ಧತೆಯ ಜೀವನ ನಡೆಸಲು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಶಾಸಕ ಎಸ್‌.ಎ. ರಾಮದಾಸ್‌, ಮೋದಿ ಅವರ ಇಚ್ಛೆಯಂತೆ ದೇಶದ ಸರ್ವೋತೋಮುಖ ಅಭಿವೃದ್ಧಿಯ ಚಿಂತನೆಯನ್ನು ಇಟ್ಟುಕೊಂಡು ದಿನಕ್ಕೊಂದು ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು. ತಾಯಿ ಗರ್ಭದಿಂದ ಭೂ ಗರ್ಭದವರೆಗಿನ ಕಾರ್ಯಕ್ರಮಗಳನ್ನು ಜೋಡಿಸಿ ಜನರನ್ನು ತಲುಪುವ ಕೆಲಸ ಮಾಡಿದ್ದೇವೆ. 11 ಕೋಟಿ ವೆಚ್ಚದಲ್ಲಿ 17 ಸ್ಮಶಾನಗಳ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಿ ಟೆಂಡರ್‌ ಕರೆಯಲಾಗಿದೆ. ಮೋದಿ ಅವರ ಕನಸಿನ ಯೋಜನೆಯಾದ ಈ ಶ್ರಮ್‌ ಯೋಜನೆ ಕಾರ್ಡ್‌ ಅನ್ನು ನಿರಂತರವಾಗಿ ಕೊಡುತ್ತಿದ್ದೇವೆ ಎಂದು ಅವರು ಹೇಳಿದರು.

ನಗರಪಾಲಿಕೆಯಿಂದ .2 ಕೋಟಿ ವೆಚ್ಚದಲ್ಲಿ ಮೂರು ಎಕರೆ ಜಾಗದಲ್ಲಿ ಶ್ವಾನಗಳ ಚಿಕಿತ್ಸೆ ಮತ್ತು ಪುನರ್ವಸತಿ ಕೇಂದ್ರ, ಎಂಡಿಎ ವತಿಯಿಂದ . 61.55 ಕೋಟಿ ವೆಚ್ಚದಲ್ಲಿ 28 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದರೊಟ್ಟಿಗೆ ಕಳೆದ ಕೋವಿಡ್‌ನಲ್ಲಿ ಸಂಘ- ಸಂಸ್ಥೆಗಳ ಜತೆಗೂಡಿ ಮಂಗಗಳಿಗೆ ನೆರವು ನೀಡಿದ್ದೇವು ಎಂಬುದಾಗಿ ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತರೆಡ್ಡಿ, ಎಂಡಿಎ ಆಯುಕ್ತ ದಿನೇಶ್‌, ಕೆ.ಆರ್‌. ಕ್ಷೇತ್ರ ಬಿಜೆಪಿ ಅಧ್ಯಕ್ಷ ವಡಿವೇಲು, ನಗರ ಪಾಲಿಕೆ ಸದಸ್ಯರಾದ ಮಾ.ವಿ. ರಾಮಪ್ರಸಾದ್‌, ಬಿ.ವಿ. ಮಂಜುನಾಥ್‌, ಪಿ.ಟಿ. ಕೃಷ್ಣ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್‌, ನಾಗೇಂದ್ರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ, ಚಂಪಕಾ, ಸೌಮ್ಯಾ ಈಶ್ವರ, ಶಾರದಮ್ಮ ಈಶ್ವರ್‌, ಎಂಡಿಎ ಸದಸ್ಯ ಲಿಂಗಣ್ಣ ಮೊದಲಾದವರು ಇದ್ದರು.

Dasara Flower Show 2022: ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ ನಿರ್ಮಾಣ

ಮಾದರಿ ಉಡುಗೊರೆ ನೀಡಿದ ಪ್ರಾಧಿಕಾರ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಕ್ಕೆ ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರ ವಿಶೇಷ ಉಡುಗೊರೆ ನೀಡಿದೆ. ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 8 ರಿಂದ ಸಂಜೆ 7 ರವರೆಗೆ ಎರಡು ದಿನಗಳ ಕಾಲ ನಗರಾಭಿವೃದ್ಧಿ ಇಲಾಖೆಯ ಎಲ್ಲಾ ಐಎಎಸ್‌ 560 ಮಂದಿ ಅಧಿಕಾರಿಗಳು ಅಲ್ಲಿ ಭಾಗವಹಿಸಿದ್ದರು. ಅಲ್ಲಿ ಮೋದಿಯವರ ಕಾರ್ಯವೈಖರಿ ಮೆಚ್ಚಿ ಇಲ್ಲಿನ ಅಧಿಕಾರಿಗಳು ರಾಜ್ಯ ನಗರಾಭಿವೃದ್ಧಿ ಕಚೇರಿಯನ್ನು ಬೆಳಗ್ಗೆ 8ಕ್ಕೆ ತೆರೆದು ಸೇವೆ ನೀಡುವ ಮೂಲಕ ಮೋದಿಗೆ ಜನ್ಮ ದಿನಕ್ಕೆ ವಿಶೇಷ ಉಡೂಗೊರೆ ನೀಡುತ್ತಿರುವುದು ರಾಜ್ಯವೇ ಮೆಚ್ಚುವ ಕೆಲಸ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.