Asianet Suvarna News Asianet Suvarna News

ಹುನಗುಂದ: ಪೌರಾಡಳಿತ ಇಲಾಖೆಯಿಂದ ಬಾಗಲಕೋಟೆ ಜಿಲ್ಲೆಗೆ 240 ಕೋಟಿ, ಎಂಟಿಬಿ ನಾಗರಾಜ

ಅಮೃತ ಯೋಜನೆಯಡಿಯಲ್ಲಿ ಹುನಗುಂದ ಮತಕ್ಷೇತ್ರಕ್ಕೆ 15 ರಿಂದ 20 ಕೋಟಿ ಅನುದಾನ ಈಗಾಗಲೇ ನೀಡಲಾಗಿದೆ. ಶೋಷಿತ ಸಮಾಜಗಳ ಬಗ್ಗೆ ಧ್ವನಿ ಎತ್ತಿ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು: ಎಂಟಿಬಿ ನಾಗರಾಜ

240 Crores to Bagalkot from Municipal Administration Department Says MTB Nagaraj grg
Author
First Published Dec 11, 2022, 8:00 PM IST

ಹುನಗುಂದ(ಡಿ.11): ಬಾಗಲಕೋಟಿ ಜಿಲ್ಲೆಗೆ ಪೌರಾಡಳಿತ ಇಲಾಖೆಯಿಂದ 240 ಕೋಟಿ ರೂ ಅನುದಾನವನ್ನು ನೀಡಿಲಾಗಿದೆ.ಅದರಲ್ಲಿ ಇಳಕಲ್ಲ ನಗರಸಭೆಗೆ ನಗರೋತ್ಥಾನ 4 ನೆಯ ಹಂತಕ್ಕೆ 30 ಕೋಟಿ ಮತ್ತು ಹುನಗುಂದ ಪುರಸಭೆಗೆ 10 ಕೋಟಿ ಅನುದಾನವನ್ನು ನೀಡಲಾಗಿದ್ದು. ಇನ್ನು ಒಂದು ತಿಂಗಳಲ್ಲಿ 2 ರಿಂದ 3 ಕೋಟಿ ವಿಶೇಷ ಅನುದಾನವನ್ನು ಕೂಡಾ ನೀಡಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಹೇಳಿದರು.

ಶುಕ್ರವಾರ ಪಟ್ಟಣದ ಟಿಸಿಎಚ್‌ ಕಾಲೇಜು ಮೈದಾನದಲ್ಲಿ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ ಹಾಲಮತ ಸಮಾಜದ ವತಿಯಿಂದ ನಡೆದ ಕನಕ ಜಯಂತೋತ್ಸವ ಮತ್ತು ಸಂತ ಶ್ರೇಷ್ಠ ಭಕ್ತ ಕನಕದಾಸರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಮೃತ ಯೋಜನೆಯಡಿಯಲ್ಲಿ ಹುನಗುಂದ ಮತಕ್ಷೇತ್ರಕ್ಕೆ 15 ರಿಂದ 20 ಕೋಟಿ ಅನುದಾನ ಈಗಾಗಲೇ ನೀಡಲಾಗಿದೆ. ಶೋಷಿತ ಸಮಾಜಗಳ ಬಗ್ಗೆ ಧ್ವನಿ ಎತ್ತಿ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು. ಜಾತಿ, ಧರ್ಮ, ಮತ, ಪಂಥಗಳನ್ನು ಬದಿಗೊತ್ತಿ ಸರ್ವ ಸಮಾಜಗಳಿಗೆ ಸಮಾನ ನ್ಯಾಯವನ್ನು ಕೊಡಿಸುವ ಜನರ ಬಗ್ಗೆ ಪ್ರೀತಿ, ವಿಶ್ವಾಸ, ಕಳಕಳಿಯುಳ್ಳ ಮತ್ತು ತಾಲೂಕಿನ ಅಭಿವೃದ್ದಿ ಕಾರ್ಯವನ್ನು ಮಾಡುವ ವ್ಯಕ್ತಿಗೆ ನಿಮ್ಮ ಬೆಂಬಲವನ್ನು ನೀಡಬೇಕು.ರಾಜಕಾರಣ ವ್ಯಾಪಾರೀಕರಣವಲ್ಲ ಮೌಲ್ಯಾಧರಿತ ಪ್ರಜಾ ಸೇವೆಯಾಗಿದೆ.ಸರ್ವ ಸಮಾಜಕ್ಕೆ ಒಳ್ಳೆತು ಮಾಡಿದ ಮಹಾಪುರಷರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬೇಡಿ. ಹುನಗುಂದದಲ್ಲಿ ಇರುವ ಹಾಲಮತ ಸಮಾಜಕ್ಕೆ ಸೇರಿದ 3 ಎಕರೆ ಜಮೀನನಲ್ಲಿ 3 ಕೋಟಿ ಅನುದಾನದಲ್ಲಿ ಕನಕ ಭವನ ನಿರ್ಮಾಣಕ್ಕೆ ಸರ್ಕಾರದ ಅನುದಾನ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ನನ್ನ ವೈಯಕ್ತಿಕವಾಗಿ ಅವಳಿ ತಾಲೂಕಿನ ಕನಕ ಭವನಕ್ಕೆ ತಲಾ 10 ಲಕ್ಷ ರೂ ನೀಡುತ್ತನೆ ಎಂದರು.

ಹುನಗುಂದ: ಸಿದ್ದರಾಮಯ್ಯಗೆ ಕಾಂಗ್ರೆಸ್‌ ತತ್ವ ಒಪ್ಪುವುದಿಲ್ಲ, ಗೋವಿಂದ ಕಾರಜೋಳ

ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ ಸಂತ ಶ್ರೇಷ್ಠ ಕನಕದಾಸರ ಕಛಿನ ಮೂರ್ತಿ ಅನಾವರಣಗೊಳಿಸಿ ಮಾತನಾಡಿ ಕಾಡಿನಲ್ಲಿ ಕುರಿ ಮೇಯಿಸುವ ಕುರಬ ಸಮಾಜದವರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರದಿಂದ 300 ಕೋಟಿ ರೂ ವಿಶೇಷ ಅನುದಾನ ನೀಡಲಾಗಿದೆ. ಸಮಾಜದ ಏಳ್ಗೆಗೆ ಬೇಕು ಬೇಡಿಕೆಗಳನ್ನು ಈಡೇರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಮಾನವಕುಲದ ಏಳ್ಗೆಗಾಗಿ ಶ್ರಮಿಸಿದ ಮಹಾಪುರಷರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸದೇ ಸರ್ವ ಸಮಾಜದವರು ಸ್ಮರಿಸುವಂತಾಗಬೇಕು. ತಾಲೂಕಿನ ಜನರ ಆಶೀರ್ವಾದಿಂದ 3 ಬಾರಿ ಶಾಸಕನ್ನಾಗಿ ಕ್ಷೇತ್ರದ ಅಭಿವೃದ್ದಿ ಮಾಡಲಾಗಿದೆ.ಅಂದಿನ ಕಾಲದ ಜಾತಿ ವ್ಯವಸ್ಥೆಯಲ್ಲಿ ಉಡುಪಿ ಶ್ರೀಕೃಷ್ಣ ದೇವಸ್ಥಾನದೊಳಗೆ ಭಕ್ತ ಶ್ರೇಷ್ಠ ಕನಕದಾಸರನ್ನು ಒಳಗೆ ಬಿಡಿದಿದ್ದಾಗ ಶ್ರೀಕೃಷ್ಣ ಕನಕದಾಸರ ಭಕ್ತಿಗೆ ಮೆಚ್ಚಿ ದೇವಸ್ಥಾನದ ಹಿಂಬದಿಯಿಂದ ದರ್ಶನವನ್ನು ನೀಡಿದ ನಿರ್ಧಶನವಿದೆ ಅಚಿತ ಮಹಾನ ಸಂತರ ಮೂರ್ತಿಯನ್ನು ಅವಳಿ ತಾಲೂಕಿನಲ್ಲಿ ಅನಾವರಣಗೊಳಿಸಿದ್ದು ಸಂತಸ ತಂದಿದೆ ಎಂದರು.ಧಾರವಾಡ ಮನಸೂರಮಠದ ಬಸವರಾಜು ದೇವರು ಮತ್ತು ಸರೂರದ ಜಗದ್ಗುರು ರೇವಣಸಿದ್ದೇಶ್ವರ ಶಾಂತಮಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.ವಿ.ಪ.ಸದಸ್ಯ ಹನಮಂತ ನಿರಾಣಿ ಮಾತನಾಡಿದರು.

ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು, ತಿಂಥಣಿಯ ಸಿದ್ದರಾಮಾನಂದಪುರಿ, ಹುಲಜಂತಿಮಠದ ಮಹಾಳಿಂಗರಾಯ ಮಹಾರಾಜರು, ಬಾದಿಮನಾಳ ಶಿವಸಿದ್ದೇಶ್ವರ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು.ಸಮಾಜದ ಮುಖಂಡರಾದ ರಾಜುಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಮಂಜುನಾಥ ಆಲೂರ,ಮಂಜುನಾಥ ಗೌಡರ, ಮಲ್ಲಿಕಾರ್ಜುನ ಚೂರಿ,ಮಹಾಂತೇಶ ಚಿತ್ತವಾಡಗಿ,ನಗರಸಭೆ ಅಧ್ಯಕ್ಷ ಲಕ್ಷ್ಮಣ ಗುರಂ,ಪುರಸಭೆ ಸದಸ್ಯರಾದ ಮಹೇಶ ಬೆಳ್ಳಿಹಾಳ,ಶಾಂತಪ್ಪ ಹೊಸಮನಿ,ಶ್ರೀದೇವಿ ಚೂರಿ,ಬಸಮ್ಮ ಚಿತ್ತವಾಡಗಿ,ರಾಜಕುಮಾರ ಬಾದವಾಡಗಿ,ಅಪ್ಪು ಆಲೂರ,ಎನ್‌.ಜಿ.ರಾಮವಾಡಗಿ,ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ,ಎ.ಆರ್‌.ನಡುವಿನಮನಿ,ಪಂಪನಗೌಡ ಪಾಟೀಲ,ಸಂಗಣ್ಣ ಚಿನವಾಲರ,ಬಿ.ವ್ಹಿ.ಪಾಟೀಲ,ಲಕ್ಷ್ಮೀಬಾಯಿ ಮುಕ್ಕಣ್ಣವರ,ಸುಭಾಸ ಮುಕ್ಕಣ್ಣವರ,ಸಿದ್ದಪ್ಪ ಹೊಸೂರ,ತಹಶೀಲ್ದಾರ ಬಸಲಿಂಗಪ್ಪ ನೈಕೋಡಿ,ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಸೇರಿದಂತೆ ಅನೇಕರು ಇದ್ದರು.
 

Follow Us:
Download App:
  • android
  • ios