ಕೋಲಾರ (ಮೇ.18): ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಲಾರದಲ್ಲಿಂದು 24 ವರ್ಷದ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ ಸೋಂಕಿಗೆ ತುತ್ತಾಗಿದ್ದಾರೆ.  

"

ಕೋಲಾರ ಮೂಲದ PSI ಶಾಮಿಲಿ (24) ಇಂದು ಕೊರೋನಾ ಮಹಾಮಾರಿಯಿಂದ ಚಿಕಿತ್ಸೆ ಫಲಕಾರಿಯಾಗದೇ ಇಲ್ಲಿನ ಜಾಲಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಮಿಲಿ ಕಳೆದ ಮೇ.1 ರಂದು ಅನಾರೋಗ್ಯದ ಕಾರಣ ತಮ್ಮ ಹುಟ್ಟೂರಾದ ಕೋಲಾರಕ್ಕೆ ಆಗಮಿಸಿ ಇಲ್ಲಿನ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು.  18 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 

ಕೋಲಾರದಲ್ಲೇಕೆ ಕೋವಿಡ್ ಕೇಸ್‌ಗಳು ಏರುತ್ತಿವೆ ..?

ಇದೇ ವರ್ಷ ಜನವರಿ 11 ರಂದು ದಕ್ಷಿಣ ಕನ್ನಡದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಆಗಿ ಸೇರ್ಪಡೆಯಾಗಿದ್ದ  ಶಾಮಿಲಿ ಐದೇ ತಿಂಗಳಲ್ಲಿ ತಮ್ಮ ಪಯಣ ಮುಗಿಸಿದ್ದಾರೆ. 

 

ಶಾಮಿಲಿ ನಿಧನಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದ್ದು, ಮಹಾಮಾರಿಯಿಂದ ದೂರವಿರಿ, ಎಚ್ಚರ ವಹಿಸಿ ನೀವು ಸುರಕ್ಷಿತವಾಗಿದ್ದು, ನಿಮ್ಮವರನ್ನು ಸುರಕ್ಷಿತವಾಗಿಡಿ ಎಂದು ಕಳಕಳಿಯ ಮನವಿ ಮಾಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona