ಕೋಲಾರದಲ್ಲೇಕೆ ಕೋವಿಡ್ ಕೇಸ್‌ಗಳು ಏರುತ್ತಿವೆ ..?
- ರಾಜ್ಯದ ಗಡಿಯಾಗಿರುವುದರಿಂದ ಸಂಚಾರ ಜಾಸ್ತಿ
- ಕೋಲಾರದಲ್ಲಿ ಏರಿಕೆಯಾಗುತ್ತಲಿವೆ ಕೋವಿಡ್ ಕೇಸ್
- ಸಚಿವ ಸುಧಾಕರ್ ಭೇಟಿ ಮಾಡಿದ ಸಂಸದ ಮುನಿಸ್ವಾಮಿ
ಕೋಲಾರ ( ಮೇ.13) : ರಾಜ್ಯದ ಗಡಿಯಾಗಿರುವುದರಿಂದ ಇಲ್ಲಿ ಸಂಚಾರ ಜಾಸ್ತಿ ಇದ್ದು ಪ್ರಕರಣಗಳು ದಿನದಿನವೂ ಹೆಚ್ಚಾಗುತ್ತಿದೆ ಎಂದು ಕೋಲಾರದಲ್ಲಿ ಪ್ರಕರಣಗಳು ಜಾಸ್ತಿ ಆಗುತ್ತಿರುವ ಬಗ್ಗೆ ಸಂಸದ ಮುನಿಸ್ವಾಮಿ ವಿವರಿಸಿದರು.
ಕೋಲಾರದಲ್ಲಿಂದು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ ಸಂಸದ ಮುನಿಸ್ವಾಮಿ ಕೋಲಾರದಲ್ಲಿ ಪ್ರಕರಣಗಳು ಹೆಚ್ಚಾಗುತ್ತಲೇ ಒದೆ. ಗಡಿಭಾಗದಲ್ಲಿ ಕೆಲಸಕ್ಕೆ ಹೋಗುವವರ ಸಂಖ್ಯೆ ಅಧಿಕವಿರಿರುವುದೇ ಕಾರಣ ಎಂದರು.
ಬೆಂಗ್ಳೂರಿಗೆ ಬಂದು ಆಕ್ಸಿಜನ್ ಒಯ್ದ ಕೋಲಾರ ಸಂಸದ ಮುನಿಸ್ವಾಮಿ
ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಗೊಂದಲ ಇದ್ದು, ಇದನ್ನು ಸರಿಪಡಿಸಬೇಕೆಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು. ಸದ್ಯ ಒಂದು ಪ್ಲಾಂಟ್ ರೆಡಿ ಇದ್ದಿ, ಅದನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸದ್ಯ ಜನರಿಗೆ ವ್ಯಾಕ್ಸಿನ್ ಕೊರತೆ ಕಾಡುತ್ತಿದೆ. ಇದಕ್ಕೆ ವಿಪಕ್ಷಗಳೇ ಕಾರಣ. ಅವತ್ತು ವ್ಯಾಕ್ಸಿನ್ ತೆಗೆದುಕೊಳ್ಳಿ ಎಂದರೆ. ಬೇಡ ಇದು ಬಿಜೆಪಿ ವ್ಯಾಕ್ಸಿನ್ ಎಂದಿದ್ದರು. ಕೆಲ ಸಮುದಾಯಕ್ಕೆ ಭಯ ಹುಟ್ಟಿಸಿದ್ದರು. ಹೀಗಾಗಿ ದೇಶದಿಂದ ಬೇರೆ ದೇಶಗಳಿಗೆ ವ್ಯಾಕ್ಸಿನ್ ರಫ್ತು ಮಾಡಲಾಗಿತ್ತು. ಮೊದಲು ವಿಪಕ್ಷಗಳು ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದನ್ನು ಬಿಡಲಿ ಎಂದು ಅಸಮಾಧಾನ ಹೊರಹಾಕಿದರು.
ಐದು ಮಂದಿ ಕೊರೋನಾ ಸೋಂಕಿತರು ಒಂದೇ ಬೈಕಲ್ಲಿ ಪ್ರಯಾಣ ...
ಸಿಎಂ ಆಗೋಕೆ ಬಟ್ಟೆ ಹೊಲಿಸಿಕೊಂಡು ಇರೋರು ರಾಜಕೀಯ ಮಾಡಬೇಡಿ. ಸರ್ಕಾರದಷ್ಟೇ ವಿಪಕ್ಷಗಳು ಕೆಲಸ ಮಾಡಬೇಕು. ರಾಜಕೀಯ ಬಿಟ್ಟು ಸಹಕಾರ ಕೊಡಿ. ಮಾಧ್ಯಮಗಳಲ್ಲೂ ಭಯ ಹುಟ್ಟಿಸುವ ಕೆಲಸ ಆಗುತ್ತಿದೆ. ಇದನ್ನು ಮೊದಲು ಮಾಧ್ಯಮಗಳು ಬಿಡಬೇಕು. ಎಂದ ಸಂಸದ ಮುನಿಸ್ವಾಮಿ ಮಾದ್ಯಮಗಳ ಆರೋಪ ಹೊರಿಸಲು ಯತ್ನಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona