ಮೈಸೂರು: ಸನ್ನಡತೆ ಆಧಾರದ ಮೇಲೆ 24 ಕೈದಿಗಳಿಗೆ ಬಿಡುಗಡೆ ಭಾಗ್ಯ

ಸನ್ನಡತೆ ಆಧಾರದ ಮೇಲೆ ಮಾಫಿ ಸೇರಿದಂತೆ 14 ವರ್ಷ ಶಿಕ್ಷೆ ಪೂರೈಸಿದ 24 ಮಂದಿ ಕೈದಿಗಳನ್ನು ಮೈಸೂರು ಕೇಂದ್ರ ಕಾರಾಗೃಹದಿಂದ ಸೋಮವಾರ ಸಂಜೆ ಬಿಡುಗಡೆಗೊಳಿಸಲಾಯಿತು.

24 prisoners released from Mysore Central Jail rav

ಮೈಸೂರು (ಮೇ.23) : ಸನ್ನಡತೆ ಆಧಾರದ ಮೇಲೆ ಮಾಫಿ ಸೇರಿದಂತೆ 14 ವರ್ಷ ಶಿಕ್ಷೆ ಪೂರೈಸಿದ 24 ಮಂದಿ ಕೈದಿಗಳನ್ನು ಮೈಸೂರು ಕೇಂದ್ರ ಕಾರಾಗೃಹದಿಂದ ಸೋಮವಾರ ಸಂಜೆ ಬಿಡುಗಡೆಗೊಳಿಸಲಾಯಿತು.

ಮೈಸೂರು ಕೇಂದ್ರ ಕಾರಾಗೃಹ(Mysore Central Jail)ದಲ್ಲಿ ಜೀವಾವಧಿ ಶಿಕ್ಷೆ(Life imprisonment) ಅನುಭವಿಸುತ್ತಿದ್ದ 23 ಪುರುಷರು ಹಾಗೂ 1 ಮಹಿಳೆ ಸೇರಿದಂತೆ 24 ಮಂದಿಯನ್ನು ಬಿಡುಗಡೆ ಮಾಡಿದ್ದು, ಇವರಲ್ಲಿ ಒಬ್ಬ ಬಂದಿಯನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

35 ಕೆಜಿ ಕಳೆದುಕೊಂಡು ಅಸ್ತಿಪಂಜರವಾಗಿದ್ದೇನೆ, ಜಾಮೀನಿಗಾಗಿ ಹೊಸ ವಾದ ಮುಂದಿಟ್ಟ ಸತ್ಯೇಂದರ್ ಜೈನ್!

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್‌ ಅವರು ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಿ ಮಾತನಾಡಿ, ಮುಂದಿನ ಜೀವನ ಚೆನ್ನಾಗಿರಲಿ. ಜೈಲಿನಲ್ಲಿ ಪಡೆದ ವೃತ್ತಿ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಬಂಧು- ಬಳಗದೊಂದಿಗೆ ಉತ್ತಮ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ. ದಿವ್ಯಶ್ರೀ ಮಾತನಾಡಿ, ಕಳೆದ ಜೂನ್‌ನಲ್ಲಿ 31 ಮಂದಿಯ ಕಡತ ಸಲ್ಲಿಸಲಾಗಿದ್ದು, ಅದರಲ್ಲಿ 4 ಮಂದಿಯ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಬ್ಬರ ಅರ್ಜಿಯನ್ನು ರಾಜ್ಯಪಾಲರು ತಿರಸ್ಕರಿಸಲಾಗಿದ್ದು, ಒಬ್ಬರ ಅರ್ಜಿಯನ್ನು ಮರು ಪರಿಶೀಲನೆಗೆ ಆಗುತ್ತಿದೆ ಎಂದರು.

ಕಾರಾಗೃಹದಲ್ಲಿ ಸರ್ಕಾರಿ ಅನುಮೋದಿತ ಕೈಗಾರಿಕಾ ಸಂಸ್ಥೆಗಳ ಸಹಕಾರದೊಂದಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ಎಲೆಕ್ಟ್ರಿಷನನ್‌, ಬ್ಯೂಟಿಷಿಯನ್‌ ಸೇರಿದಂತೆ ನಾನಾ ತರಬೇತಿ ಜತೆಗೆ ಸಮಸ್ಯೆಗಳನ್ನು ಎದುರಿಸುವ ಕೌನ್ಸಿಲಿಂಗ್‌ ತರಬೇತಿ ಕಾರ್ಯಕ್ರಮಗಳ ಮೂಲಕ ಹಾಗೂ ಹಲವಾರು ಆಯಾಮಗಳಲ್ಲಿ ಬಂದಿಯನ್ನು ಬಿಡುಗಡೆಗೆ ಸಜ್ಜುಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಇಲ್ಲಿಗೆ ಬಂದಾಗ ಕೈದಿ ಎಂದು ನೋಡದೆ ವ್ಯಕ್ತಿಯಾಗಿ ನೋಡುತ್ತೇವೆ. ಆತನಲ್ಲಿರುವ ತಪ್ಪು್ಪಗಳನ್ನು ತಿದ್ದುವ ಕೆಲಸ ಮಾಡುತ್ತೇವೆ. ಸನ್ನಡÜತೆ ಆಧಾರದ ಮೇಲೆ ಬಿಡುಗಡೆ ಮಾಡುವುದು ಜೀವನ ನಡೆಸಲು ನೀಡುವ ಎರಡನೇ ಅವಕಾಶದಂತೆ. ಅದಕ್ಕೆ ಸಮಾಜವೂ ಅನುವು ಮಾಡಿಕೊಡಬೇಕು. ಹೊಸ ಮನಷ್ಯರಾಗಿ ಸ್ವೀಕರಿಸಬೇಕು ಎಂದು ಅವರು ಮನವಿ ಮಾಡಿದರು.

ಜೈಲರ್‌ಗಳಾದ ಧರಣೇಶ್‌, ಗೀತಾ, ಅಮರ್‌ ಮೊದಲಾದವರು ಇದ್ದರು.

ಬಂಧನ ಭೀತಿಯಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಪಾರು

ಸನ್ನಡತೆಯಿಂದ ಬಿಡುಗಡೆಯಾದವರು

ರಾಜಸ್ಥಾನದ ಸಾವಲ್‌ ಸಿಂಗ್‌, ಪುತ್ತೂರಿನ ರಮೇಶ, ಉಡುಪಿಯ ಸುರೇಶ ಹರಿಜನ, ಹಾಸನದ ಪ್ರಶಾಂತ, ಮೈಸೂರಿನ ನಾಗರಾಜು, ಎಚ್‌.ಕೆ. ಪುಟ್ಟ, ಚಾಮರಾಜನಗರದ ರಾಮದಾಸ ನಾಯಕ, ಕುಳ್ಳೇಗೌಡ, ಸುಂದ್ರಪ್ಪ, ತಿಮ್ಮ, ನಂಜನಗೂಡಿನ ಎಸ್‌.ಎಂ. ಸತೀಶ್‌ಗೌಡ, ಶ್ರೀನಿವಾಸ, ಎಸ್‌. ನಟರಾಜ, ಜನಾರ್ಧನ, ನಿಂಗಪ್ಪ, ಮದ್ದೂರಿನ ಮಂಜುನಾಥ, ಸೋಮವಾರಪೇಟೆಯ ತಮ್ಮಯ್ಯ, ಬಾಗಲಕೋಟೆಯ ರಿಯಾಜ್‌, ಮಳವಳ್ಳಿಯ ಸಿದ್ದೇಗೌಡ, ಹಾಸನದ ಎಂ.ಆರ್‌. ಸೋಮಶೇಖರ, ರಾಮೇಗೌಡ, ಮಂಡ್ಯದ ಎ.ಬಿ. ವಾಸು, ಸೋಮವಾರಪೇಟೆಯ ಗುರುಮೂರ್ತಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗಮ್ಮ.

Latest Videos
Follow Us:
Download App:
  • android
  • ios