ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತವಾಗಿ ರಸ್ತೆ ಕುಡಿಯುವ ನೀರು, ಚರಂಡಿ, 24 ಗಂಟೆ ವಿದ್ಯುತ್‌ ಸೇರಿದಂತೆ ಮೂಲಭೂತ ಸೌಕರ್ಯಗಳನು ಒದಗಿಸಿಕೊಡಲಾಗುವುದೆಂದು ಶಾಸಕ ಸುರೇಶ ಗೌಡ ತಿಳಿಸಿದರು.

ತುಮಕೂರು :ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತವಾಗಿ ರಸ್ತೆ ಕುಡಿಯುವ ನೀರು, ಚರಂಡಿ, 24 ಗಂಟೆ ವಿದ್ಯುತ್‌ ಸೇರಿದಂತೆ ಮೂಲಭೂತ ಸೌಕರ್ಯಗಳನು ಒದಗಿಸಿಕೊಡಲಾಗುವುದೆಂದು ಶಾಸಕ ಸುರೇಶ ಗೌಡ ತಿಳಿಸಿದರು.

Add Asianetnews Kannada as a Preferred SourcegooglePreferred

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಂಗಳಾಪುರ ಗ್ರಾಮದಲ್ಲಿ ಅಂದಾಜು 34.5 ಲಕ್ಷ ರು. ವೆಚ್ಚದ ಸಿಮೆಂಚ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ಕಾಲಾವಧಿಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಮಾಡಿದಂತ ಕಾಮಗಾರಿಗಳು ಇಂದಿಗೂ ಒಂದೇ ಒಂದು ರಸ್ತೆ ಕೂಡ ಹಾನಿಯಾಗಿಲ್ಲ. ಅಷ್ಟುಗುಣಮಟ್ಟದ ಕಾಮಗಾರಿಗಳಾಗುವಂತೆ ಹಗಲು ರಾತ್ರಿ ಎನ್ನದೆ ಗುತ್ತಿಗೆದಾರರನ್ನು ಬೆನ್ನತ್ತಿ ಕೆಲಸ ಮಾಡಿಸುತ್ತಿದ್ದೆ ಎಂದರು.

ಈಗಲೂ ಕೂಡ ಕಾಮಗಾರಿಯ ಗುಣಮಟ್ಟದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಸಿಮೆಂಚ್‌ ರಸ್ತೆ ಚರಂಡಿ ನಿರ್ಮಾಣ ಮಾಡುವಾಗ ತಾಂತ್ರಿಕತೆಗೆ ಅನುಗುಣವಾಗಿ ಮರಳು, ಸಿಮೆಂಚ್‌, ಜಲ್ಲಿ ಬಳಕೆ ಮಾಡಿ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಆಗ ಮಾತ್ರ ನಾನು ಸೌಮ್ಯವಾಗಿರುತ್ತೇನೆ. ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲು ನನ್ನ ಲೆಟರ್‌ಹೆಡ್‌ ಖಾರವಾಗಿ ಕೆಲಸ ಮಾಡುತ್ತದೆ ಎಂದು ಖಡಕ್ಕಾಗಿ ತಿಳಿಸಿದರು.

ಹರಿಜನ/ಗಿರಿಜನ ಉಪಯೋಜನೆ ಹಾಗೂ 3050/5054 ಯೋಜನೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಸುಸಜ್ಜಿತ ಸಿಮೆಂಚ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷ ಸೇರುವುದಿಲ್ಲ:

ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುತ್ತೇನೆಂಬುದು ಕಪೋಲ ಕಲ್ಪಿತ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಮ್ಮ ಪಕ್ಷ ನನಗೆ ಐದು ಬಾರಿ ಟಿಕೆಚ್‌ ನೀಡಿದೆ ಎರಡು ಬಾರಿ ರಾಜ್ಯ ಕಾರ್ಯದರ್ಶಿ ಎರಡು ಬಾರಿ ಜಿಲ್ಲಾ ಘಟಕದ ಅಧ್ಯಕ್ಷ ಒಂದು ಬಾರಿ ಮೈಸೂರ್‌ ಪೇಪರ್‌ ಮಿಲ… ನ ಅಧ್ಯಕ್ಷರನ್ನಾಗಿ ಮಾಡಿದೆ. ನನ್ನ ಪಕ್ಷ ನನಗೆ ತಾಯಿ ಸಮ ನಾನು ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ ನಡೆಸುವುದು ಇಲ್ಲ ಮುಂದೆಯೂ ಕೂಡ ಪಕ್ಷದಲ್ಲೇ ಇರುತ್ತೇನೆ ಎಂದು ಖಡಕ್ಕಾಗಿ ಉತ್ತರಿಸಿದರು.

ನಾನು ವಾಜಪೇಯಿ ನರೇಂದ್ರ ಮೋದಿ, ಎಲ… ಕೆ ಅಡ್ವಾಣಿ ಮುರಳಿ ಮನೋಹರ ಜೋಶಿ ಯಡಿಯೂರಪ್ಪ ಅಂತಹ ದೂರ ದೃಷ್ಟಿತ್ವ ಉಳ್ಳ ನಾಯಕತ್ವವನ್ನು ನೋಡಿ ಅಂದು ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಬಿಜೆಪಿಗೆ ಸೇರ್ಪಡೆಯಾಗಿ ಕುಣಿಗಲ…ನಲ್ಲಿ ಟಿಕೆಚ್‌ ಪಡೆದಿದ್ದೆ ಎಂದರು.

ಕಾಂಗ್ರೆಸ್‌ ಪಕ್ಷಕ್ಕೆ ಹೋಗಿ ನನಗೆ ಆಗಬೇಕಾದ್ದು ಏನೂ ಇಲ್ಲ ನಮ್ಮ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕ್ಷೇತ್ರದ ಶಾಸಕನಾಗಿ ಕ್ಷೇತ್ರಕ್ಕೆ ನಾನೇ ಮಂತ್ರಿ. ನಾನೇ ಮುಖ್ಯಮಂತ್ರಿ. ಆರ್‌ಸಿ ಕಾಲೇಜ… ನ ವಿದ್ಯಾರ್ಥಿ ದೆಸೆಯಿಂದಲೂ ಕೂಡ ನನ್ನ ಅನೇಕ ಸ್ನೇಹಿತರು ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ, ಅವರ ವಿಶ್ವಾಸ ಈಗಲೂ ಇದೆ ಮುಂದೆಯೂ ಇರುತ್ತದೆ. ಹಾಗಂತ ನಾನು ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮಾಸ್ತೇಗೌಡ,ಕಲ್ಕೆರೆ ಪಟೇಲರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ, ಉಪಾಧ್ಯಕ್ಷ ಬಾಬಣ್ಣ, ಶಿವಕುಮಾರ್‌ ಆರ್‌.ಸಿ, ನರಸಯ್ಯ, ಕೃಷ್ಣಪ್ಪ, ನರಸಿಂಹಮೂರ್ತಿ ಗ್ರಾ. ಪಂ ಸದಸ್ಯ ಉಮಾಶಂಕರ್‌, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್‌ ಸೋಮಶೇಖರ್‌ ಸೇರಿದಂತೆ ಗ್ರಾಮಸ್ಥರು ಸದಸ್ಯರು ಊರಿನ ಮುಖಂಡರು ಉಪಸ್ಥಿತರಿದ್ದರು.